ಮನೆ ರಾಜಕೀಯ ಐಕ್ಯತೆ ಮುಖ್ಯ, ಪಕ್ಷ ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಕ್ಕೆ ಬದ್ಧ: ಸೋನಿಯಾ ಗಾಂಧಿ

ಐಕ್ಯತೆ ಮುಖ್ಯ, ಪಕ್ಷ ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಕ್ಕೆ ಬದ್ಧ: ಸೋನಿಯಾ ಗಾಂಧಿ

0

ನವದೆಹಲಿ(New delhi): ಎಲ್ಲಾ ಹಂತದಲ್ಲೂ ಐಕ್ಯತೆ ಮುಖ್ಯವಾಗಿದ್ದು, ಪಕ್ಷ ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಕ್ಕೆ ಬದ್ಧರಾಗಿದ್ದೇವೆಂದು ಕಾಂಗ್ರೆಸ್(congress)  ಅಧ್ಯಕ್ಷೆ(President) ಸೋನಿಯಾ ಗಾಂಧಿ(Soniya Gandhi) ತಿಳಿಸಿದ್ದಾರೆ.

ಮಂಗಳವಾರ ಸಂಸದೀಯ ಪಕ್ಷದ ಸಭೆ (Parliamentary Party meeting)ಯಲ್ಲಿ ಮಾತನಾಡಿದ ಸೋನಿಯಾ ಗಾಂಧಿಯವರು, ಎಲ್ಲಾ ಹಂತದಲ್ಲೂ ಐಕ್ಯತೆ ಮುಖ್ಯವಾಗಿದ್ದು, ಪಕ್ಷ ಬಲಪಡಿಸಲು ಸಾಕಷ್ಟು ಸಲಹೆಗಳು ಬಂದಿವೆ.ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಗಳ ಮಾಡಲಾಗುತ್ತದೆ. ಪಕ್ಷ ಬಲಪಡಿಸುವ ಎಲ್ಲಾ ರೀತಿಯ ಪ್ರಯತ್ನಕ್ಕೆ ಬದ್ಧರಾಗಿದ್ದೇವೆಂದು ಹೇಳಿದ್ದಾರೆ.

ಇತ್ತೀಚಿನ ಚುನಾವಣೆಯಲ್ಲಿನ ಸೋಲಿನಿಂದ ಸಾಕಷ್ಟು ನೋವಾಗಿದೆ ಎಂಬುದು ನನಗೆ ಗೊತ್ತಿದೆ. ಫಲಿತಾಂಶದಿಂದ ಆಘಾತವಾಗಿದೆ. “ನಮ್ಮ ಸಮರ್ಪಣೆ ಮತ್ತು ದೃಢತೆ, ನಮ್ಮ ಚೈತನ್ಯವು ತೀವ್ರ ಪರೀಕ್ಷೆಯಲ್ಲಿದೆ. ಈ ಹಂತದಲ್ಲಿ ಏಕತೆ ಅತ್ಯಂತ ಮುಖ್ಯವಾಗಿದೆ. ನನ್ನ ಪ್ರಕಾರ ಹೇಳುವುದಾದರೆ ಪಕ್ಷ ಬಲಪಡಿಸಲು ಎಲ್ಲಾ ರೀತಿಯ ಪ್ರಯತ್ನಕ್ಕೆ ನಾನು ಬದ್ಧಳಾಗಿದ್ದೇನೆಂದು ತಿಳಿಸಿದ್ದಾರೆ.

ಅಧಿಕಾರದಲ್ಲಿರುವವರಿಗೆ ಗರಿಷ್ಠ ಆಡಳಿತ ಎಂದರೆ ಗರಿಷ್ಠ ಭಯ ಮತ್ತು ಬೆದರಿಕೆಯನ್ನು ಹರಡುವುದು ಎಂದಾಗಿದೆ. ಅಂತಹ ಅಬ್ಬರದ ಬೆದರಿಕೆಗಳು ಮತ್ತು ತಂತ್ರಗಳು ನಮ್ಮನ್ನು ಹೆದರಿಸುವುದಿಲ್ಲ ಅಥವಾ ಮೌನಗೊಳಿಸುವುದಿಲ್ಲ ಅಥವಾ ನಾವು ಹೆದರುವುದಿಲ್ಲ ಎಂದು ಸೋನಿಯಾ ಹೇಳಿದರು.

ಐದು ರಾಜ್ಯಗಳಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ನಡೆಯುತ್ತಿರುವ ಮೊದಲ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆ ಇದಾಗಿದ್ದು, ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್(Man Mohan Sing) ಮತ್ತು ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ(Rahul Gandhi), ಸಂಸತ್ತಿನ ಉಭಯ ಸದನಗಳಲ್ಲಿ ಎಲ್ಲಾ ಪಕ್ಷದ ಸಂಸದರು ಭಾಗವಹಿಸಿದ್ದಾರೆ.