ಮನೆ ಕ್ರೀಡೆ 27 ಎಸೆತಗಳಲ್ಲಿ 64 ರನ್! : ಮೊದಲ ಪಂದ್ಯದಲ್ಲೇ ಸಂಚಲನ ಮೂಡಿಸಿದ ರುತುರಾಜ್ ಗಾಯಕ್ವಾಡ್

27 ಎಸೆತಗಳಲ್ಲಿ 64 ರನ್! : ಮೊದಲ ಪಂದ್ಯದಲ್ಲೇ ಸಂಚಲನ ಮೂಡಿಸಿದ ರುತುರಾಜ್ ಗಾಯಕ್ವಾಡ್

0

ಮದುವೆ ಬಳಿಕ ಮೈದಾನಕ್ಕೆ ಮರಳಿರುವ ರುತುರಾಜ್ ಗಾಯಕ್ವಾಡ್, ಆಡಿದ ಮೊದಲ ಪಂದ್ಯದಲ್ಲೇ ಸಂಚಲನ ಮೂಡಿಸಿದ್ದಾರೆ. ಸದ್ಯ ಮಹಾರಾಷ್ಟ್ರದಲ್ಲಿ ಆರಂಭವಾಗಿರುವ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಬೌಂಡರಿ ಮತ್ತು ಸಿಕ್ಸರ್‌ ಗಳ ಮಳೆಗರೆಯುವ ಮೂಲಕ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದುವರೆಗೂ ರುತುರಾಜ್ ಐಪಿಎಲ್​ ನಲ್ಲಿ ಇಂತಹ ಸಾಕಷ್ಟು ಇನ್ನಿಂಗ್ಸ್​ ಗಳನ್ನು ಆಡಿದ್ದಾರೆ. ಆದರೆ ಮದುವೆ ಬಳಿಕ ಮೊದಲನೇ ಪಂದ್ಯವನ್ನಾಡಿದ ರುತುರಾಜ್​ ಗೆ ಈ ಪಂದ್ಯ ಬಹಳ ವಿಶೇಷವಾಗಿದೆ.

Join Our Whatsapp Group

ಮದುವೆಯ ಕಾರಣದಿಂದಾಗಿ ರುತುರಾಜ್, ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗಾಗಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಇದೀಗ ಮತ್ತೆ ಅಖಾಡಕ್ಕೆ ಎಂಟ್ರಿಕೊಟ್ಟಿರುವ ರುತುರಾಜ್ ಪುಣೇರಿ ಬಪ್ಪಾ ತಂಡದ ಪರ ಕಣಕ್ಕಿಳಿದು, ಕೊಲ್ಲಾಪುರ ಟಸ್ಕರ್ಸ್ ತಂಡದ ವಿರುದ್ಧ ಬಿರುಸಿನ ಇನ್ನಿಂಗ್ಸ್‌ ಆಡಿ ಕೇವಲ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ 64 ರನ್ ಚಚ್ಚಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟಸ್ಕರ್ಸ್ 20 ಓವರ್‌ ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 144 ರನ್ ಗಳಿಸಿತು. ತಂಡದ ಪರ ಅಂಕಿತ್ ಬಾವ್ನೆ 57 ಎಸೆತಗಳಲ್ಲಿ 72 ರನ್ ಗಳಿಸಿದರು. ಇನ್ನು 145 ರನ್‌ ಗಳ ಗುರಿ ಬೆನ್ನತ್ತಿದ ಪುಣೇರಿ ತಂಡ ಭರ್ಜರಿ ಆರಂಭ ಕಂಡಿತು. ಆರಂಭಿಕರಾದ ಪವನ್ ಶಾ ಮತ್ತು ಗಾಯಕ್ವಾಡ್ ಶತಕದ ಜೊತೆಯಾಟ ಆಡಿದ್ದಲ್ಲದೆ, ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು.

144 ರನ್​ ಗಳ ಗುರಿ ಬೆನ್ನಟ್ಟಿದ ಪುಣೇರಿ ತಂಡದ ಪರ ಗಾಯಕ್ವಾಡ್ ಕೇವಲ 22 ಎಸೆತಗಳಲ್ಲಿ 50 ರನ್ ಪೂರೈಸಿದ್ದರು. ಅಂತಿಮವಾಗಿ ತಂಡದ ಮೊತ್ತ 110 ರನ್​ಗಳಿರುವಾಗ ಗಾಯಕ್ವಾಡ್ ವಿಕೆಟ್ ಒಪ್ಪಿಸಿದರು. ಇದಾದ ನಂತರ ಪವನ್ ಶಾ ಮತ್ತು ಸೂರಜ್ ಶಿಂಧೆ ನಡುವೆ 32 ರನ್​ ಗಳ ಜೊತೆಯಾಟ ನಡೆಯಿತು. ಆ ಬಳಿಕ ಈ ಜೋಡಿಯು ಮುರಿದುಬಿತ್ತು. ಇದಾದ ನಂತರ ಯಶ್ ಜೊತೆಗೂಡಿದ ಸುಜರ್ ಶಿಂಧೆ ಪುಣೇರಿ ತಂಡವನ್ನು 14.1 ಓವರ್‌ ಗಳಲ್ಲಿ 8 ವಿಕೆಟ್‌ ಗಳಿಂದ ಗೆಲುವಿನ ದಡ ಸೇರಿಸಿದರು.

ತಮ್ಮ ಇನ್ನಿಂಗ್ಸ್’​ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಗಾಯಕ್ವಾಡ್, 7ನೇ ಓವರ್’​ನಲ್ಲಿ ಸತತ 2 ಸಿಕ್ಸರ್ ಬಾರಿಸಿದರು. ಓವರ್‌ ನ ಮೊದಲ ಎಸೆತದಲ್ಲಿ ಗಾಯಕ್ವಾಡ್ ಲಾಂಗ್ ಆಫ್ ಓವರ್‌ ನಲ್ಲಿ ಸಿಕ್ಸರ್ ಬಾರಿಸಿದರೆ, ಮುಂದಿನ ಎಸೆತದಲ್ಲಿ ಲಾಂಗ್ ಆನ್‌ ನಲ್ಲಿ ಚೆಂಡನ್ನು ಬೌಂಡರಿ ದಾಟಿಸಿದರು.

ಇನ್ನು ಈ ಪಂದ್ಯ ಬಹಳ ಗಾಯಕ್ವಾಡ್​’ಗೆ ಬಹಳ ವಿಶೇಷವಾಗಿತ್ತು. ಏಕೆಂದರೆ ಈ ಪಂದ್ಯದಲ್ಲಿ ಗಾಯಕ್ವಾಡ್ ತಮ್ಮ ಪತ್ನಿಯ 13ನೇ ನಂಬರ್ ಜೆರ್ಸಿಯನ್ನು ಧರಿಸಿ ಕಣಕ್ಕಿಳಿದಿದ್ದರು. ವಾಸ್ತವವಾಗಿ ಗಾಯಕ್ವಾಡ್ ಅವರ ಪತ್ನಿ ಉತ್ಕರ್ಷಾ ಕೂಡ ಕ್ರಿಕೆಟಿಗರಾಗಿದ್ದು, ಅವರ ಜೆರ್ಸಿ ಸಂಖ್ಯೆ 13 ಆಗಿದೆ.ಈ ಹಿಂದೆ ರುತುರಾಜ್ 31ನೇ ನಂಬರ್ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಅವರು 13ನೇ ನಂಬರ್ ಜರ್ಸಿ ತೊಟ್ಟು ಅಖಾಡಕ್ಕಿಳಿದಿದ್ದರು. ಈ ಮೂಲಕ ತಮ್ಮ ಮಡದಿಗೆ ಸ್ಮರಣೀಯ ಉಡುಗೊರೆ ನೀಡಿದರು.