ಮನೆ ಪ್ರವಾಸ ಕುಟುಂಬದ ಜೊತೆ ಜೂನ್ ತಿಂಗಳಿನಲ್ಲಿ ಬಜೆಟ್ ಸ್ನೇಹಿ ಹಿಲ್ ಸ್ಟೇಷನ್ ಗೆ ಪ್ರವಾಸ ಯೋಜಿಸಿ

ಕುಟುಂಬದ ಜೊತೆ ಜೂನ್ ತಿಂಗಳಿನಲ್ಲಿ ಬಜೆಟ್ ಸ್ನೇಹಿ ಹಿಲ್ ಸ್ಟೇಷನ್ ಗೆ ಪ್ರವಾಸ ಯೋಜಿಸಿ

0

ಬೇಸಿಗೆಯ ತಿಂಗಳಾಗಿರುವ ಜೂನ್ ನಲ್ಲಿ ನೀವು ಆಹ್ಲಾದಕರವಾದ ತಾಣಕ್ಕೆ ಹೋಗಿ ಪ್ರವಾಸ ಮಾಡಬಹುದು. ಬಜೆಟ್ ಟ್ರಿಪ್ ಮಾಡಲು ನೀವು ಬಯಸಿದರೆ ಬಹುಶಃ ಲೇಖನದಲ್ಲಿರುವ ತಾಣಗಳು ಪರ್ಫೇಕ್ಟ್ ಎಂದೇ ಹೇಳಬಹುದು.

Join Our Whatsapp Group

ನಿಮ್ಮ ಬಜೆಟ್ಗೆ ಅನುಗುಣವಾಗಿ ಗಿರಿಧಾಮಗಳ ಸೌಂದರ್ಯವನ್ನು ನೀವು ಸವಿಯಬಹುದು. ಕುಟುಂಬ ಅಥವಾ ಏಕಾಂಗಿಯಾಗಿ ನೀವು ಪ್ರವಾಸ ಮಾಡಬಹುದು. ಇಲ್ಲಿವೆ ಆ ಸುಂದರ ಗಿರಿಧಾಮಗಳು.

ವಯನಾಡ್

ಕೇರಳ ರಾಜ್ಯದ ವಯನಾಡ್ ಸುಡುವ ಸೂರ್ಯನಿಂದ ಮುಕ್ತಿ ಪಡೆಯಲು ಭೇಟಿ ನೀಡಬಹುದಾದ ಸುಂದರ ಗಿರಿಧಾಮ. ಬಜೆಟ್ ಸ್ನೇಹಿ ಗಿರಿಧಾಮಗಳ ಪ್ರವಾಸ ಮಾಡಲು ನೀವು ಇಲ್ಲಿಗೆ ಭೇಟಿ ನೀಡಬಹುದು. ಮಂಜಿನಿಂದ ಕೂಡಿದ ಪರ್ವತಗಳು, ಸಮೃದ್ಧವಾಗಿ ಬೆಳೆದ ಹಸಿರಿನ ತೋಟ ಹಾಗು ಅಸ್ಪೃಶ್ಯ ಕಾಡುಗಳನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು.

ಮಸಾಲೆ ತೋಟಗಳನ್ನು ಹೊಂದಿರುವ ಈ ಗಿರಿಧಾಮವು ವನ್ಯಜೀವಿ ಅಭಯಾರಣ್ಯ, ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿವೆ. ಅಲ್ಲದೆ, ವಯನಾಡ್ ಟ್ರೆಕ್ಕಿಂಗ್, ಹೈಕಿಂಗ್, ಪರ್ವತಾರೋಹಣ, ರಾಕ್ ಕ್ಲೈಂಬಿಂಗ್, ರಾಪ್ಪೆಲಿಂಗ್, ಕ್ಯಾಂಪಿಂಗ್ ನಂತಹ ಸಾಹಸಗಳಿಗೂ ಹೆಚ್ಚು ಜನಪ್ರಿಯವಾಗಿದೆ.

ಕೊಡೈಕೆನಾಲ್

ತಮಿಳುನಾಡಿನ ಸುಂದರ ಗಿರಿಧಾಮವಾದ ಕೊಡೈಕೆನಾಲ್ ದಕ್ಷಿಣದ ಮಂದಿಗೆ ಬಜೆಟ್ ಸ್ನೇಹಿ ಪ್ರವಾಸವಾಗಿದೆ. ಇದನ್ನು ‘ಗಿರಿಧಾಮಗಳ ರಾಜಕುಮಾರಿ’ ಎಂದೇ ಕರೆಯುತ್ತಾರೆ. ಸಂಗಾತಿಯೊಂದಿಗೆ ಸಂತೋಷಮಯ ಕ್ಷಣಗಳನ್ನು ಕಳೆಯಲು ಇಲ್ಲಿಗೆ ಹೋಗಬಹುದು.

ಈ ಗಿರಿಧಾಮವು ಮೋಡಿ ಮಾಡುವ ತನ್ನ ಸೊಬಗಿನಿಂದ ಪ್ರಕೃತಿ ಪ್ರೇಮಿಗಳನ್ನು ಸೆಳೆಯುತ್ತದೆ. ಸಾಹಸ ಚಟುವಟಿಕೆಗಳು, ಅತ್ಯುತ್ತಮ ಪ್ರೇಕ್ಷಣೀಯ ಸ್ಥಳಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.

ಕಾಮ್ಶೆಟ್

ಬಜೆಟ್ ಸ್ನೇಹಿ ಪ್ರವಾಸ ಮಾಡಲು ನೀವು ಮಹಾರಾಷ್ಟ್ರದ ಕಾಮ್ಶೆಟ್ ಗೆ ಹೋಗಬಹುದು. ಪಶ್ಚಿಮ ಘಟ್ಟಗಳಿಂದ ಸುತ್ತುವರೆದಿರುವ ಹಾಗು ಸಹ್ಯಾದ್ರಿ ಶ್ರೇಣಿಗಳ ಸೌಂದರ್ಯದಿಂದ ಶೃಂಗರಿಸಲ್ಪಟ್ಟ ಈ ತಾಣವು ಶಾಂತಿಯನ್ನು ಬಯಸುವವರಿಗೆ ಸ್ವರ್ಗವಾಗಿದೆ.

ಇದನ್ನು ‘ಭಾರತದ ಪ್ಯಾರಾಗ್ಲೈಡಿಂಗ್ ರಾಜಧಾನಿ’ ಎಂದೂ ಸಹ ಕರೆಯಲಾಗುತ್ತದೆ. ಅಷ್ಟೇ ಅಲ್ಲ, ಇಲ್ಲಿನ ಭವ್ಯವಾದ ಮಠಗಳು, ಜಲಪಾತಗಳು ಹಾಗು ದೇವಾಲಯಗಳು ತನ್ನದೇ ಆದ ಮಹತ್ವವನ್ನು ಪಡೆದಿದೆ.

ಕೂರ್ಗ್

ಜೂನ್ ನಲ್ಲಿ ಬಜೆಟ್ ಸ್ನೇಹಿ ಪ್ರವಾಸ ಮಾಡಲು ನೀವು ಕರ್ನಾಟಕದ ಕೂರ್ಗ್ ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ಕರ್ನಾಟಕಕ್ಕೆ ಪ್ರವಾಸ ಮಾಡುವ ಮಂದಿ ಹೆಚ್ಚಾಗಿ ಸಂದರ್ಶಿಸುವ ಗಿರಿಧಾಮ ಇದಾಗಿದೆ. ಭಾರತದಲ್ಲಿ ಮಧುಚಂದ್ರಕ್ಕೆ ಅತ್ಯುತ್ತಮ ಗಿರಿಧಾಮವು ಹೌದು. ಇಲ್ಲಿ 2 ರಿಂದ 3 ದಿನಗಳು ಇದ್ದು ನೋಡಬಹುದಾದ ಪ್ರೇಕ್ಷಣೀಯ ಸ್ಥಳಗಳಿವೆ.

ಶಿಮ್ಲಾ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಬಜೆಟ್ ಸ್ನೇಹಿ ಪ್ರವಾಸ ಮಾಡಲು ಬೆಸ್ಟ್ ಎಂದೇ ಹೇಳಬಹುದು. ಸಮುದ್ರಮಟ್ಟದಿಂದ 2200 ಮೀಟರ್ ಎತ್ತರದಲ್ಲಿರುವ ಈ ಗಿರಿಧಾಮವು ಮಧಚಂದ್ರಕ್ಕೆ ಜನಪ್ರಿಯವಾಗಿದೆ.

ಒಂದು ಕಾಲದಲ್ಲಿ ಬ್ರಿಟಿಷರ ಬೇಸಿಗೆಯ ರಾಜಧಾನಿ ಇದಾಗಿತ್ತು. ಶಿಮ್ಲಾ ಮಾಂತ್ರಿಕ ಸೌಂದರ್ಯದ ಜೊತೆಗೆ ಕೆಫೆಗಳು, ರೆಸ್ಟೋರೆಂಟ್ ಗಳನ್ನು ಹೊಂದಿದೆ.