ಮನೆ ಆರೋಗ್ಯ ಬೊಜ್ಜು, ಅಸ್ತಮಾಗೆ ರಾಮಬಾಣ; ಹಿಪ್ಪಲಿಯ

ಬೊಜ್ಜು, ಅಸ್ತಮಾಗೆ ರಾಮಬಾಣ; ಹಿಪ್ಪಲಿಯ

0

ಬೊಜ್ಜು, ಅಸ್ತಮಾ, ಅಲರ್ಜಿ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಹಿಪ್ಪಲಿಯ ಆರೋಗ್ಯಕಾರಿ ಪ್ರಯೋಜನಗಳು ಮತ್ತು ಬಳಕೆಯ ವಿಧಾನ ಇಲ್ಲಿದೆ.

ಹಿಪ್ಪಲಿ ಜ್ವರನಿವಾರಕ, ಕಥ ಕೆಮ್ಮು ನಿಯಂತ್ರಕ, ಪಚನಕಾರಿ, ನೋವುನಿವಾರಕ.. ಹಪ್ಪಲಿಪುಡಿ ಜೇನುತುಪ್ಪ ಸೇರಿಸಿ ಪ್ರತಿದಿನ ಕಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಬೊಜ್ಜು ಅಥವಾ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ.

ಹಿಪ್ಪಲಿಪುಡಿಯನ್ನು ಗೋಮೂತ್ರದೊಡನೆ ಸೇವಿಸಿದರೆ ಸಂಧಿವಾತದ ನೋವು,ಊತ ಕಡಿಮೆಯಾಗುವುದು. ಹಿಪ್ಪಲಿಪುಡಿ ಮತ್ತು ಓಬಜೆಪುಡಿಯನ್ನು ಬಿಸಿಹಾಲಿನನಲ್ಲಿ ಬೆರೆಸಿ ದಿನಕ್ಕೆರಡು ಸಲ ಕುಡಿದರೆ ಅರೆತಲೆನೋವು ವಾಸಿ.

ಹಿಪ್ಪಲಿಪುಡಿ ಹುರಿದ ಜೀರಿಗೆಪುಡಿ ಸೈಂಧವ ಲವಣ (ಉಪ್ಪು)ನ್ನು ಮಜ್ಜಿಗೆಯಲ್ಲಿ ಬೆರೆಸಿ 4-5 ದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುವುದು.

ಹಿಪ್ಪಲಿಯನ್ನು ಬಿಸಿಮಾಡಿ ಹುರಿದು ವೀಳ್ಯದೆಲೆಯಲ್ಲಿಟ್ಟು ಜೇನು ಬೆರೆಸಿ ಒಂದೆರಡು ಸಲ ತಿಂದರೆ ಕೆಮ್ಮು, ಅಸ್ತಮಾ ಉಸಿರಾಟದ ತೊಂದರೆ ಕಡಿಮೆಯಾಗುವುದು. ಮಕ್ಕಳಲ್ಲಿ ವಯೋಮಾನಕ್ಕನುಗುಣವಾಗಿ ಪ್ರಮಾಣ ನಿರ್ಧರಿಸಿಕೊಳ್ಳಿ.

ಹಿಪ್ಪಲಿ ಬೇರಿನ ಕಷಾಯ ಸೇವಿಸಿದರೆ ಸಂಧಿವಾತ, ಸೊಂಟನೋವು ಗುಣವಾಗುವುದು. ದೇಹದಲ್ಲಿನ ವಿಷಕಾರಿ ಅಂಶಗಳು ಹೋಗುವುದು. ಕಷಾಯ ಕಾಮೋತ್ತೇಜಕ ನಿದ್ರಾಹೀನತೆ ದೂರಾಗಿಸುವುದು.

ಹಿಪ್ಪಲಿಯ ಬೇರು ಕಾಂಡಗಳನ್ನು ಆಯುರ್ವೇದ ಯುನಾನಿ ಪದ್ಧತಿಯಲ್ಲಿ ಪಿಷ್ಲ್‌ಮೋಲ್‌ ಎಂಬ ಔಷಧವಾಗಿ ಬಳಸುವರು. ಇದನ್ನು ಶ್ವಾಸನಾಳದ ಸೋಂಕು,ಅಸ್ತಮ, ಕೆಮ್ಮು, ಉಬ್ಬಸ, ಮಂಪರು ನಶ್ಯ, ಮೂರ್ಛೆರೋಗ, ಮಲಬದ್ಧತೆ, ಅಮಶಂಕೆ, ಪಿತ್ತನಾಳ ಪಿತ್ತಕೋಶದ ದೋಶ, ಕುಷ್ಠರೋಗ, ಗ್ಯಾಸ್ಟಿಕ್‌, ಕ್ಯಾನ್ಸರ್‌,  ವಾತನಿವಾರಣೆಗೆ ಬಳಸುತ್ತಾರೆ.

ಹಿಪ್ಪಲಿಯ ನಿಯಮಿತಸೇವನೆ ದೀರ್ಫಾಯಷ್ಯವನ್ನು ನೀಡುತ್ತದೆ. ಇದನ್ನು ಮಸಾಲೆಗಳಲ್ಲಿ ಕಷಾಯದ ಪುಡಿಗಳಲ್ಲಿ ಬೆರೆಸುವುದರಿಂದ ಇದರ ಈ ಎಲ್ಲಾ ಲಾಭಗಳನ್ನೂ ಪಡೆದುಕೊಳ್ಳಬಹುದು.