ಈಗಿನ ಕಾಲದಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆ ಆಗುತ್ತಿರುವುದನ್ನು ನಾವು ಪ್ರತಿ ನಿತ್ಯ ಗಮನಿಸುತ್ತಿದ್ದೇವೆ. ಮೊದಲಿನಂತೆ ಗಟ್ಟಿಯಾದ ಸಂಬಂಧ ಗಳನ್ನು ನಾವು ಈಗ ನೋಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಆದರೂ ಕೂಡ ಕೆಲವು ಗಂಡ ಹೆಂಡತಿಯರು ನೋಡಲು ಉತ್ತಮ ಸ್ನೇಹಿತರಂತೆ ನಡೆದುಕೊಳ್ಳುತ್ತಾರೆ.
ಅವರನ್ನು ನೋಡಿ ನಾವು ಕೂಡ ಈ ರೀತಿ ನಮ್ಮ ಜೀವನ ಏಕೆ ಇಲ್ಲ ಎಂಬ ಭಾವನೆಯಿಂದ ಕೊರಗುತ್ತೇವೆ. ಎಲ್ಲೋ ಒಂದು ಕಡೆ ನಮ್ಮಿಂದಲೇ ತಪ್ಪು ನಡೆಯುತ್ತಿರುತ್ತದೆ. ಆದರೆ ನಾವು ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಪ್ರತಿದಿನ ಇಬ್ಬರ ನಡುವಿನ ಅಂತರ ಹೆಚ್ಚಾಗುತ್ತಾ ಹೋಗು ತ್ತಿರುತ್ತದೆ. ಆದರೆ ಸುಧಾ ಮೂರ್ತಿಯವರು ಗಂಡ ಹೆಂಡತಿಯ ನಡುವಿನ ಸಂಬಂಧದ ವಿಚಾರವಾಗಿ ಕೆಲವೊಂದು ಅದ್ಭುತ ಸಲಹೆಗಳನ್ನು ನೀಡಿದ್ದಾರೆ.
ಹೇಗಿದ್ದಾರೆ ಹಾಗೆ ಅಕ್ಸೆಪ್ಟ್ ಮಾಡಿಕೊಳ್ಳುವುದು
ಗಂಡ ಹೆಂಡತಿ ಇಬ್ಬರೂ ಸಹ ಈ ಟಿಪ್ಸ್ ಅನುಸರಿಸಬೇಕು. ಏಕೆಂದರೆ ಇಬ್ಬರೂ ಕೂಡ ಬೇರೆ ಬೇರೆ ತರಹದ ವೈಶಿಷ್ಟ್ಯಗಳನ್ನು ಹೊಂದಿರುತ್ತಾರೆ. ಹಾಗಾಗಿ ನನ್ನ ತರಹವೇ ಇರಬೇಕು ಎನ್ನುವು ದಕ್ಕಿಂತ ಹೇಗಿದ್ದಾರೆ ಹಾಗೆ ಹೊಂದಿಕೊಂಡು ಹೋಗುವುದು ಉತ್ತಮ. ಇದರಿಂದ ಇಬ್ಬರ ಮಧ್ಯೆ ಪ್ರೀತಿ ಹೆಚ್ಚಾಗುತ್ತದೆ.
ಸಂಗಾತಿಯನ್ನು ಬೆಂಬಲಿಸಿ
ಹೆಂಡತಿ ಯಾವಾಗಲೂ ಗಂಡನ ಶ್ರೇಯಸ್ಸನ್ನು ಬಯಸುತ್ತಾಳೆ. ಹಾಗಾಗಿ ಗಂಡನಿಗೆ ಸಾಕಷ್ಟು ಸಪೋರ್ಟ್ ಮಾಡುತ್ತಾಳೆ. ಅದೇ ರೀತಿ ಗಂಡ ಕೂಡ ಹೆಂಡತಿಯನ್ನು ವಹಿಸಿಕೊಳ್ಳಬೇಕು ಮತ್ತು ಆಕೆಗೆ ತನ್ನ ಕೈಲಾದ ಸಪೋರ್ಟ್ ನೀಡಬೇಕು. ಯಾವುದಾದರೂ ಕೆಲಸ ಕಾರ್ಯಗಳಲ್ಲಿ ಆಕೆ ತೊಡಗಿದಾಗ ತಾನು ಕೂಡ ಆಕೆಯ ಜೊತೆ ನಿಲ್ಲಬೇಕು.
ನಿಮ್ಮ ಜೀವನ ಸಂಗಾತಿಗೆ ಉತ್ತಮ ಸ್ನೇಹಿತರಾಗಿ
ಹೆಂಡತಿ ತನ್ನ ಗಂಡನಿಂದ ಬಯಸುವುದು ಇದನ್ನೇ. ಗಂಡನಿ ಗಾಗಿ ಹೆಂಡತಿ ಮತ್ತು ಹೆಂಡತಿಗಾಗಿ ಗಂಡ ಇದ್ದರೆ ಅವರ ಜೀವನ ಹಾಲು ಜೇನಿನಂತೆ ಸಾಗುತ್ತದೆ. ಇಬ್ಬರ ಮಧ್ಯೆ ಉತ್ತಮ ಸ್ನೇಹ, ಪ್ರೀತಿ ಮತ್ತು ನಂಬಿಕೆ ಇರಬೇಕು. ಇದು ಜೀವನವನ್ನು ಮತ್ತಷ್ಟು ಖುಷಿಯಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ.
ಅಭಿನಂದಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ
• ನನ್ನ ಗಂಡನನ್ನು ಹೆಚ್ಚು ಪ್ರೀತಿ ಆರೈಕೆಯಿಂದ ನೋಡಿ ಕೊಳ್ಳ ಬೇಕು ಎನ್ನುವ ತುಡಿತದಂತೆ ನನ್ನ ಹೆಂಡತಿ ಯನ್ನು ನಾನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಭಾವನೆ ಗಂಡನಲ್ಲಿಯೂ ಇರಬೇಕು.
• ಹೆಂಡತಿ ಮಾಡುವ ಪ್ರತಿಯೊಂದು ಕೆಲಸಗಳಿಗೆ ಅಭಿನಂ ದನೆ ಸೂಚಿಸಬೇಕು. ಹೀಗಿದ್ದಾಗ ಇಬ್ಬರ ನಡುವೆ ಹೆಚ್ಚು ಸಂತೋಷ ತುಂಬಿರುತ್ತದೆ.
ಹಣದ ವಿಚಾರಕ್ಕೆ ಜಗಳ ಬೇಡ
• ಯಾವುದೇ ಕಾರಣಕ್ಕೂ ನಿಮ್ಮಿಬ್ಬರ ಮಧ್ಯೆ ಹಣದ ವಿಚಾರ ಹೆಮ್ಮಾರಿಯಂತೆ ಬರಲೇಬಾರದು. ಏಕೆಂದರೆ ಸಾಕಷ್ಟು ಸಂಬಂಧಗಳು ದುಡ್ಡಿನಿಂದ ಬೇರೆಯಾಗಿರುವ ಉದಾಹರಣೆ ಗಳನ್ನು ನಾವೆಲ್ಲ ನೋಡಿದ್ದೇವೆ.
• ಹಾಗಾಗಿ ಸಂಬಂಧದಲ್ಲಿ ಪ್ರೀತಿಗೆ ಮಾತ್ರ ಮೌಲ್ಯ ಕೊಡ ಬೇಕು. ಹಣದ ವಿಷಯವಾಗಿ ಜಗಳ ಆಡದಂತಹ ಬುದ್ಧಿವಂತಿಕೆ ಇಬ್ಬರಲ್ಲಿಯೂ ಬರಬೇಕು.
ಸಂಬಂಧದಲ್ಲಿ ಇಬ್ಬರೂ ಸಮಾನವಾಗಿ ಬೆಳೆಯಬೇಕು
ನೀವು ಮತ್ತು ನಿಮ್ಮ ಹೆಂಡತಿ ಇಬ್ಬರೂ ಸಹ ಒಂದೇ ಎನ್ನುವಂ ತಿದ್ದರು ಕೂಡ ಪರಸ್ಪರ ಅವರವರ ಕ್ಷೇತ್ರಗಳಲ್ಲಿ ಬೆಳೆಯಲು ಅನುಕೂಲ ಮಾಡಿಕೊಡಬೇಕು. ಇಬ್ಬರ ಇಷ್ಟ ಕಷ್ಟಗಳನ್ನು ಗೌರವಿಸಬೇಕು. ಯಾವುದೇ ಕಾರಣಕ್ಕೂ ಒಬ್ಬರನ್ನೊಬ್ಬರು ಬಿಟ್ಟುಕೊಡಬಾರದು.
ಜೀವನದ ಮೇಲೆ ಗಮನ ಹರಿಸಿ
ನಡೆದು ಹೋದ ಬಗ್ಗೆ ಬಗ್ಗೆ ಆಲೋಚನೆ ಮಾಡುತ್ತಾ ಕೂರುವ ಬದಲು ನಿಮ್ಮ ಜೀವನದ ಮೇಲೆ ಕೇಂದ್ರೀಕರಿಸಿ. ಜೀವನದಲ್ಲಿ ಅಭಿವೃದ್ಧಿಯಾಗಲು ನಿಮ್ಮಿಬ್ಬರು ಸೇರಿ ಏನು ಮಾಡಬಹುದು ಎಂಬುದರ ಬಗ್ಗೆ ಆಲೋಚನೆ ಮಾಡಿ. ನಿಮ್ಮ ನಿಮ್ಮ ಕೆಲಸಗಳ ಕಡೆಗೆ ನಿಮ್ಮ ಗಮನ ಇದ್ದರೆ ತುಂಬಾ ಒಳ್ಳೆಯದು.
ನಿಮ್ಮ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡಿ
• ನಿಮ್ಮ ಹಾಗೂ ನಿಮ್ಮ ಸಂಗಾತಿಯ ಮಧ್ಯೆ ಇರಬೇಕಾ ದದ್ದು ಪ್ರೀತಿ-ವಿಶ್ವಾಸ, ಸ್ನೇಹ ಮತ್ತು ನಂಬಿಕೆ. ನೆಮ್ಮದಿಯ ಜೀವನ ನಡೆಸಲು ಇದಕ್ಕಿಂತ ಬೇರೆ ಬೇಕಾಗಿಲ್ಲ.
• ಹಾಗಾಗಿ ಬೇರೆ ಬೇರೆ ವಿಚಾರಗಳಲ್ಲಿ ತಲೆಕೆಡಿಸಿಕೊಳ್ಳು ವುದಕ್ಕಿಂತ ನೀವಿಬ್ಬರು ಒಳ್ಳೆಯ ಸ್ನೇಹಿತರಾಗಿ ಇದ್ದು ಬಿಟ್ಟರೆ ನಿಮ್ಮ ಜೀವನ ಸುಖಮಯವಾಗಿ ಸಾಗುತ್ತದೆ.