ಮನೆ ಯೋಗ ದೇಹದ ತೂಕವನ್ನು ಕಡಿಮೆ ಮಾಡುವ ಯೋಗಾಭ್ಯಾಸಗಳು

ದೇಹದ ತೂಕವನ್ನು ಕಡಿಮೆ ಮಾಡುವ ಯೋಗಾಭ್ಯಾಸಗಳು

0

ದೇಹದ ತೂಕವನ್ನು ಹೆಚ್ಚು ಮಾಡಿಕೊಂಡಿರುವವರಿಗೆ ಅದನ್ನು ಕಡಿಮೆ ಮಾಡಿಕೊಳ್ಳುವುದೇ ಒಂದು ಕೆಲಸವಾಗಿ ಬಿಡುತ್ತದೆ. ಏಕೆಂದರೆ ಒಂದೇ ರೀತಿಯ ಮೊದಲಿನ ಆಕಾರ ಹೊಂದುವ ಬಯಕೆ ಇರುತ್ತದೆ. ಇದಕ್ಕಾಗಿ ಉತ್ತಮ ಆಹಾರ ಪದ್ಧತಿ ಹೊಂದುವುದು ಅವಶ್ಯಕವಾಗಿದೆ ಮತ್ತು ಅದಕ್ಕೆ ತಕ್ಕಂತೆ ದೇಹಕ್ಕೆ ವ್ಯಾಯಾಮವನ್ನು ಸಹ ಒದಗಿಸಬೇಕು.

Join Our Whatsapp Group

ಆದರೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವ ಆರಂಭದ ಹುಮ್ಮಸ್ಸು ಆನಂತರ ಇರುವುದಿಲ್ಲ. ಡಯಟ್ ಮತ್ತು ವ್ಯಾಯಾಮ ಮಾಡುವುದಕ್ಕಿಂತ ಯೋಗಭ್ಯಾಸ ಮಾಡುವುದರ ಪ್ರಯೋಜನ ಜಾಸ್ತಿ. ಇದು ತೂಕ ಕಡಿಮೆ ಮಾಡುವುದು ಮಾತ್ರವಲ್ಲದೆ ಮನಸ್ಸಿಗೆ ಆನಂದವನ್ನು ಮತ್ತು ದೇಹಕ್ಕೆ ಶಕ್ತಿಯನ್ನು ಸಹ ಕೊಡುತ್ತದೆ. ಹಾಗಾಗಿ ತೂಕ ನಿಯಂತ್ರಣ ಮಾಡುವ ಕೆಲವೊಂದು ಯೋಗಭ್ಯಾಸಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ಇವು ಅತ್ಯಂತ ಪರಿಣಾಮಕಾರಿ ಮತ್ತು ವೇಗವಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುತ್ತವೆ.

ಧನುರಾಸನ

•       ನಿಮ್ಮ ಸೊಂಟದ ಭಾಗ ಹಾಗೂ ಬೆನ್ನಿನ ಭಾಗವನ್ನು ಉತ್ತಮ ರೂಪಕ್ಕೆ ಮತ್ತು ಸದೃಢತೆಗೆ ನಿಲುಕುವಂತೆ ಮಾಡುವ ಯೋಗಾಭ್ಯಾಸ ಇದಾಗಿದೆ. ಇದು ನಿಮ್ಮ ಹೊಟ್ಟೆಯ ಭಾಗ ವನ್ನು ಮತ್ತು ಸೊಂಟದ ಭಾಗವನ್ನು ಸದೃಢಪಡಿಸುತ್ತದೆ ಜೊತೆಗೆ ನಿಮ್ಮ ಇಡೀ ದೇಹವನ್ನು ವಿಸ್ತಾರಪಡಿಸುತ್ತದೆ.

•       ನಿಮ್ಮ ಮುಖವನ್ನು ಕೆಳಗೆ ಮಾಡಿ ಮಂಡಿ ಮಡಚಿ ಮಂಡಿ ಗಳನ್ನು ಸ್ವಲ್ಪ ಅಂತರದಲ್ಲಿ ಇಟ್ಟುಕೊಳ್ಳಿ. ಈಗ ನಿಮ್ಮ ಕೈಗಳಿಂದ ನಿಮ್ಮ ಕಣಕಾಲುಗಳನ್ನು ಹಿಡಿದು ಕೊಳ್ಳಲು ಟ್ರೈ ಮಾಡಿ. ನಿಮ್ಮ ಎದೆ ಹಾಗೂ ತೊಡೆ ಗಳನ್ನು ನೆಲದ ಮೇಲೆತ್ತಿ 20 ಸೆಕೆಂಡುಗಳ ಕಾಲ ಉಸಿರಾಟ ನಡೆಸಿ. ಗಮನಿಸಿ: ಒಂದು ವೇಳೆ ವೇಳೆ ನಿಮಗೆ ಅಧಿಕ ರಕ್ತ ಒತ್ತಡ, ನಿದ್ರಾಹೀನತೆ ಮತ್ತು ಮೈಗ್ರೇನ್ ಸಮಸ್ಯೆಯಿಂದ ತೊಂದರೆ ಉಂಟಾಗಿದ್ದರೆ, ಈ ಯೋಗಭ್ಯಾಸವನ್ನು ಟ್ರೈ ಮಾಡಬೇಡಿ.

ಶ್ವಾನಾಸನ

•       ಇದು ಶ್ವಾನದ ತರಹ ಯೋಗಭ್ಯಾಸವನ್ನು ಟ್ರೈ ಮಾಡುವ ಭಂಗಿಯಾಗಿದೆ. ನಿಮ್ಮ ತೊಡೆ, ತೋಳು, ಬೆನ್ನು ಇತ್ಯಾದಿಗಳನ್ನು ಬಲಪಡಿಸುತ್ತದೆ. ಇದರಿಂದ ನಿಮ್ಮ ದೇಹದ ಕೊಬ್ಬಿನಂಶ ಕರಗುತ್ತದೆ. ಇದಕ್ಕಾಗಿ ನಿಮ್ಮ ಕೈಗಳನ್ನು ಮತ್ತು ಮಂಡಿಗಳನ್ನು ಒಂದು ಅಡಿ ಅಂತರದಲ್ಲಿ ಇರಿಸಿ.

•       ಈಗ ನಿಮ್ಮ ಎರಡು ಕೈಗಳನ್ನು ಮತ್ತು ಮಂಡಿಗಳನ್ನು ಸ್ವಲ್ಪ ಅಂತರದಲ್ಲಿ ಇರಿಸಿ ನಿಮ್ಮ ಕಾಲುಗಳನ್ನು ಚಿತ್ರದಲ್ಲಿ ತೋರಿಸಿರುವಂತೆ ನೇರವಾಗಿ ಮಾಡಿಕೊಳ್ಳಿ. ನಿಮ್ಮ ಕೈಗಳ ಮೇಲೆ ಒತ್ತಡ ಹಾಕಿ ನಿಂತುಕೊಂಡು ಹತ್ತು ಸೆಕೆಂಡುಗಳ ಕಾಲ ಹಾಗೆ ಇರಿ.

ಸೇತುಬಂಧ ಸರ್ವಾಂಗಾಸನ (ಸೇತುವೆಯ ಭಂಗಿ)

•       ಬೆನ್ನು ಕೆಳಗೆ ಮಾಡಿ ಮೊದಲು ಮಲಗಿಕೊಳ್ಳಿ. ಈಗ ನಿಮ್ಮ ಮಂಡಿಗಳನ್ನು ಮಡಚಿ, ನಿಮ್ಮ ಪಾದಗಳನ್ನು ನೆಲದ ಮೇಲೆ ಇಟ್ಟು ಒತ್ತಡ ಹಾಕಿ. ನಿಮ್ಮ ಸೊಂಟದ ಕೆಳಗೆ ಕೈ ಇಟ್ಟು, ಕುತ್ತಿಗೆ ನೆಲದ ಮೇಲೆ ಇರುವಂತೆ ನೋಡಿಕೊಂಡು ನಿಮ್ಮ ದೇಹವನ್ನು ಮೇಲೆತ್ತಲು ಟ್ರೈ ಮಾಡಿ.

•       ಇದು ನಿಮ್ಮ ಬೆನ್ನು, ತೊಡೆ, ಭುಜವನ್ನು ಸದೃಢ ಪಡಿಸುತ್ತದೆ. ನಿಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸಿ, ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಋತು ಬಂಧದ ಸಮಸ್ಯೆಗಳನ್ನು ಹೋಗಲಾಡಿಸಿ ತೂಕ ಕಡಿಮೆ ಮಾಡುತ್ತದೆ.

ಕುರ್ಚಿಯ ಭಂಗಿ

•       ಇದು ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಮುಖ್ಯವಾಗಿ ಕಾಲುಗಳ ಭಾಗಕ್ಕೆ ಹೆಚ್ಚಿನ ಪ್ರಯೋಜನ ಹೊಂದಿದೆ. ಮಾಂಸಖಂಡಗಳ ಬಲವರ್ಧನೆಗೆ ಮಾಡಬಹುದಾದ ಯೋಗಭ್ಯಾಸ ಇದಾಗಿದೆ.

•       ನಿಮ್ಮ ಹೊಟ್ಟೆಯ ಭಾಗ, ಹೊರಗಿನ ತೊಡೆಗಳು, ಸೊಂಟದ ಭಾಗ, ದೇಹದ ಕೆಳಭಾಗ ಇತ್ಯಾದಿಗಳಲ್ಲಿ ಮಾಂಸ ಖಂಡಗಳನ್ನು ಬಲಪಡಿಸುತ್ತದೆ.

•       ನಮಸ್ತೆ ಮಾಡುವ ತರಹ ನಿಮ್ಮ ಕೈಗಳನ್ನು ಜೋಡಿಸಿ ನಿಮ್ಮ ತಲೆಯಿಂದ ನಿಮ್ಮ ಕೈಗಳನ್ನು ಮೇಲೆತ್ತಿ. ನಿಮ್ಮ ಮಂಡಿಗಳನ್ನು ಭಾಗಿಸಿ ನಿಮ್ಮ ತೊಡೆಗಳನ್ನು ನೆಲಕ್ಕೆ ನೇರವಾಗಿ ಇಟ್ಟುಕೊಳ್ಳಿ. ಈ ಭಂಗಿಯಲ್ಲಿ 30 ಸೆಕೆಂಡು ಗಳ ಕಾಲ ಹಾಗೆ ಇರಿಸಿ ಬೇಗ ತೂಕವನ್ನು ಕಡಿಮೆ ಮಾಡಿಕೊಳ್ಳಿ.

ತ್ರಿಕೋನಾಸನ

•       ಇದು ನಿಮ್ಮ ತೊಡೆಗಳನ್ನು ಸದೃಢಪಡಿಸುತ್ತದೆ ಮತ್ತು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮ ಪಡಿಸುತ್ತದೆ. ಬೆನ್ನು ನೋವಿಗೆ ಉತ್ತಮ ಪರಿಹಾರವನ್ನು ಒದಗಿಸುವ ಯೋಗಭ್ಯಾಸ ಇದಾಗಿದೆ.

•       ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡುವ ಜೊತೆಗೆ ನಿಮ್ಮ ಸೊಂಟದ ಭಾಗದಲ್ಲಿ ಇರುವಂತಹ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಾಲುಗಳನ್ನು ಮೂರು ಅಡಿ ಅಗಲ ಇಟ್ಟು, ಮುಂದಕ್ಕೆ ಬಾಗಿ ನಿಧಾನ ವಾಗಿ ನಿಮ್ಮ ಎಡಗಾ ಲನ್ನು ಬಲಗಡೆಗೆ ತಿರುಗಿಸಿ. ಈ ಸಂದರ್ಭದಲ್ಲಿ ನಿಮ್ಮ ಬಲಗಾಲನ್ನು ಸ್ವಲ್ಪ ಮುಂದೆ ಇಡಿ.

•       ಈಗ ನಿಮ್ಮ ಎಡಗೈಯಿಂದ ನಿಮ್ಮ ಪಾದವನ್ನು ಅಥವಾ ನೆಲವನ್ನು ಮುಟ್ಟಲು ಟ್ರೈ ಮಾಡಿ. 20 ರಿಂದ 30 ಸೆಕೆಂ ಡುಗಳು ಹಾಗೆ ಇರಿ. ನಿಮಗೆ ಕುತ್ತಿಗೆಯ ಭಾಗದಲ್ಲಿ ಗಾಯ ಉಂಟಾಗಿದ್ದರೆ, ಈ ಯೋಗಭ್ಯಾಸವನ್ನು ಮಾಡಬೇಡಿ.

ಫಲಕಾಸನ

•       ನಿಮ್ಮ ಸೊಂಟದ ಭಾಗವನ್ನು ಸದೃಢಪಡಿಸುವ ಯೋಗಾಸನ ಇದಾಗಿದೆ. ಈ ಯೋಗಾಸನ ಮಾಡಲು ತುಂಬಾ ಸಿಂಪಲ್ ಎನಿಸುತ್ತದೆ. ಆದರೆ ಇದರ ಪ್ರಯೋಜ ನಗಳು ಮಾತ್ರ ಅಪಾರ.

•       ಈ ಯೋಗಭ್ಯಾಸ ಮಾಡುವುದರಿಂದ ನಿಮ್ಮ ಭುಜ, ಬೆನ್ನು, ಸೊಂಟ ಮತ್ತು ತೊಡೆಗಳಿಗೆ ಸಾಕಷ್ಟು ಪ್ರಯೋಜನವಿದೆ.

•       ನಿಮ್ಮ ಕೈಗಳ ಒತ್ತಡದ ಆಧಾರದ ಮೇಲೆ ನಿಮ್ಮ ದೇಹ ವನ್ನು ಯೋಗ ಚಾಪೆಯ ಮೇಲೆತ್ತಿ. ನೆಲ ನೋಡುತ್ತಾ ಕುತ್ತಿಗೆಗೆ ವಿಶ್ರಾಂತಿ ಕೊಡಿ. ಎಷ್ಟು ಹೊತ್ತು ಸಾಧ್ಯವಾ ಗುತ್ತದೆ ಅಷ್ಟು ಹೊತ್ತು ನೀವು ಈ ಭಂಗಿಯಲ್ಲಿ ಇರಬಹುದು.