ಮನೆ ಮನರಂಜನೆ “ಹನುಮಂತ ದೇವರೇ ಅಲ್ಲ,ʼ: ಆದಿಪುರುಷ್‌ʼ ಸಂಭಾಷಣೆಕಾರ ಮನೋಜ್ ಮುಂತಶಿರ್

“ಹನುಮಂತ ದೇವರೇ ಅಲ್ಲ,ʼ: ಆದಿಪುರುಷ್‌ʼ ಸಂಭಾಷಣೆಕಾರ ಮನೋಜ್ ಮುಂತಶಿರ್

0

ಮುಂಬಯಿ: ʼಆದಿಪುರುಷ್‌ʼ ಸಿನಿಮಾ ಹಲವು ವಿವಾದಕ್ಕೂ ಕಾರಣವಾಗಿದೆ. ಈ ಎಲ್ಲಾ ಸವಾಲುಗಳನ್ನು ದಾಟಿ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ 240 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದೆ.

Join Our Whatsapp Group

ರಾಮಾಯಣದ ಕಥಾಹಂದರವನ್ನು ಹೊಂದಿರುವ ʼಆದಿಪುರುಷ್‌ʼ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಸಿನಿಮಾದಲ್ಲಿ ಬಳಸಲಾದ ಕಳಪೆ ವಿಎಫ್‌ ಎಕ್ಸ್‌ ಹಾಗೂ ಸಿನಿಮಾದ ಕೆಲ ಸಂಭಾಷಣೆಗಳಿಗೆ ತೀವ್ರ ಆಕ್ಷೇಪ ರಾಮ ಭಕ್ತರಿಂದ ಹಾಗೂ ಪ್ರೇಕ್ಷಕರಿಂದ ವ್ಯಕ್ತವಾಗಿತ್ತು. ಸಿನಿಮಾಕ್ಕೆ ಸಂಭಾಷಣೆ ಬರೆದಿರುವ ಮನೋಜ್ ಮುಂತಶಿರ್​ ಗೆ ಜೀವ ಬೆದರಿಕೆ ಕರೆಗಳು ಸಹ ಬಂದಿದ್ದವಂತೆ. ಇದೇ ಕಾರಣಕ್ಕೆ ಮುಂಬೈ ಪೊಲೀಸರು ಮನೋಜ್​ಗೆ ಭದ್ರತೆ ಒದಗಿಸಿದ್ದಾರೆ. ಆದರೆ ಮನೋಜ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಮನೋಜ್, ”ಹನುಮಂತ ದೇವರೇ ಅಲ್ಲ ಆತ ಭಕ್ತನಷ್ಟೆ. ಆದರೆ ನಾವು ಹನುಮಂತನನ್ನು ದೇವರು ಮಾಡಿದ್ದೇವೆ ಏಕೆಂದರೆ ಅಷ್ಟು ಶ್ರೇಷ್ಠವಾದ ಭಕ್ತಿ ಹನುಮಂತನಿಗೆ ರಾಮನ ಮೇಲಿತ್ತು ಎಂಬ ಕಾರಣಕ್ಕೆ” ಎಂದಿದ್ದಾರೆ. ಮನೋಜ್​ರ ಈ ಹೇಳಿಕೆಯ ಬಗ್ಗೆಯೂ ಆಕ್ಷೇಪಣೆ ವ್ಯಕ್ತವಾಗಿದೆ.

ಆದಿಪುರುಷ್ ಸಿನಿಮಾದಲ್ಲಿ ಹನುಮಂತ ಹೇಳುವ ಕೆಲ ಸಂಭಾಷಣೆ ಬಗ್ಗೆ ಆಕ್ಷೇಪ ವ್ಯಕ್ತವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಉದ್ದನೆಯ ಪೋಸ್ಟ್ ಹಂಚಿಕೊಂಡಿದ್ದ ಮನೋಜ್, ”ಆದಿಪುರುಷ್ ಸಿನಿಮಾಕ್ಕೆ ಸುಮಾರು ನಾಲ್ಕು ಸಾವಿರ ಸಾಲುಗಳನ್ನು ನಾನು ಬರೆದಿದ್ದೇನೆ. ಅವುಗಳಲ್ಲಿ ಒಂದೈದು ಸಾಲುಗಳಿಂದ ಕೆಲವರ ಭಾವನೆಗೆ ಧಕ್ಕೆ ಆಗಿರಬಹುದು. ಆದರೆ ಉಳಿದ ಸಾಲುಗಳಲ್ಲಿ ನಾನು ಪ್ರಭು ಶ್ರೀರಾಮನನ್ನು ವೈಭವೀಕರಿಸಿದ್ದೇನೆ, ಸೀತಾಮಾತೆಯನ್ನು ಆರಾಧಿಸಿದ್ದೇನೆ ಅದಕ್ಕೆ ನನಗೆ ಗೌರವ ಸಿಗಬಹುದು ಎಂದುಕೊಂಡಿದ್ದೆ ಆದರೆ ಸಿಗಲಿಲ್ಲ” ಎಂದಿದ್ದಾರೆ. ನನ್ನ ಸ್ವಂತ ಅಣ್ಣ-ತಮ್ಮಂದಿರು ನನ್ನ ವಿರುದ್ಧ ಕೀಳು ಅಭಿರುಚಿಯ ಪದಗಳನ್ನು ಬಳಸುತ್ತಿದ್ದಾರೆ. ಯಾರಿಗಾಗಿ ನಾನು ಕಾರ್ಯಕ್ರಮಗಳಿಗೆ ಹೋಗಿ ಕವನಗಳನ್ನು ಓದಿದ್ದೆನೊ ಅವರೂ ಸಹ ನನ್ನ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನ್ನ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.ಮೂರು ಗಂಟೆಯ ಸಿನಿಮಾದಲ್ಲಿ, ನಿಮ್ಮ ಕಲ್ಪನೆಗೆ ಒಗ್ಗದ ಮೂರು ನಿಮಿಷದ ಸನ್ನಿವೇಶದಲ್ಲಿ ನಾನು ಬರೆದಿರಬಹುದು. ಹಾಗೆಂದ ಮಾತ್ರಕ್ಕೆ ನನ್ನ ಮೇಲೆ ಇಷ್ಟು ವಿಷ ಕಾರುವುದೇ? ಸಿನಿಮಾದ ಶಿವೋಹಂ ಹಾಡು ಕೇಳಿಲ್ಲವೆ? ಜೈ ಶ್ರೀರಾಮ್, ರಾಮ್ ಸಿಯಾರಾಮ್ ಹಾಡು ಕೇಳಿಲ್ಲವೆ ಅದನ್ನು ಬರೆದಿರುವುದು ನಾನೇ. ಅದು ಮಾತ್ರವೇ ಅಲ್ಲ. ಥೇರಿ ಮಿಟ್ಟಿ ಮೇ ಮಿಲ್ ಜಾವಾ, ದೇಶ್ ಮೇರೆ ಹಾಡು ಬರೆದಿರುವುದು ಸಹ ನಾನೇ. ನಿಮ್ಮ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ನಾವು ಸನಾತನ ಧರ್ಮದ ಸೇವೆಗೆಂದು ಆದಿಪುರುಷ್ ಮಾಡಿದ್ದೇವೆ. ನಾವುಗಳೇ ಹೀಗೆ ಒಬ್ಬರ ಎದುರು ಒಬ್ಬರು ನಿಂತರೆ ಸನಾತನ ಉಳಿಯುವುದಿಲ್ಲ” ಎಂದಿದ್ದರು.

ಜೊತೆಗೆ ತಾವು ಸಿನಿಮಾದ ಕೆಲ ಸಂಭಾಷಣೆಗಳನ್ನು ಬದಲಾಯಿಸುತ್ತಿರುವುದಾಗಿಯೂ ಹೇಳಿದ್ದಾರೆ.

ಓಂ ರಾವತ್‌ ನಿರ್ದೇಶನ ಮಾಡಿರುವ ʼಆದಿಪುರುಷ್‌ʼ ಸಿನಿಮಾದಲ್ಲಿ ರಾಘವ್ ಆಗಿ ಪ್ರಭಾಸ್, ಜಾನಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ.