ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಮಧುಮೇಹಿಗಳು ಕೆಲವು ನಿರ್ದಿಷ್ಟ ತರಕಾರಿಗಳನ್ನು ನಿಯಮಿತವಾಗಿ ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ತಗ್ಗುತ್ತದೆ.
ಹಾಗಾದರೆ ಯಾವ ತರಕಾರಿಗಳನ್ನು ತಿನ್ನುವುದರಿಂದ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ ಎಂಬ ಮಾಹಿತಿಯನ್ನು ತಿಳಿಯೋಣ. ಈ ಐದು ಆಹಾರಗಳನ್ನು ವಾರದಲ್ಲಿ ಒಮ್ಮೆಯಾದ್ರೂ ತಿಂದರೆ ನಿಜಕ್ಕೂ ಪರಿಣಾಮಕಾರಿ ಎನಿಸಿಕೊಳ್ಳುತ್ತದೆ.
ಪಾಲಕ್ ಸೊಪ್ಪು: ಸಕ್ಕರೆ ರೋಗಿಗಳು ಪಾಲಕ್ ಸೊಪ್ಪನ್ನು ಕಡ್ಡಾಯವಾಗಿ ಸೇವಿಸಬೇಕು. ಇದು ಇನ್ಸುಲಿನ್ ಅನ್ನು ಸುಧಾರಿಸುತ್ತದೆ. ಪಾಲಕ್ ರಸವನ್ನು ಕುಡಿಯುವುದು ಕೂಡ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪಾಲಕ್ ಸೊಪ್ಪನ್ನು ತಿನ್ನುವ ಮೂಲಕವೂ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಸೌತೆಕಾಯಿ: ಮೆಡಿಕಲ್ ನ್ಯೂಸ್ ಟುಡೇ ವರದಿಯ ಪ್ರಕಾರ, ಸೌತೆಕಾಯಿಯ ಸೇವನೆಯು ಸಕ್ಕರೆ ರೋಗಿಗಳಿಗೆ ಸಹ ಪ್ರಯೋಜನಕಾರಿ. ಸೌತೆಕಾಯಿಯಲ್ಲಿರುವ ನೀರಿನ ಅಂಶವು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಎಲೆಕೋಸು: ಈ ತರಕಾರಿ ತಿನ್ನಲು ರುಚಿಯಾಗಿರುತ್ತದೆ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಎಲೆಕೋಸು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೊಮೆಟೊ:. ಟೊಮೆಟೊ ಲೈಕೋಪೀನ್ ಎಂಬ ಆಂಟಿಆಕ್ಸಿಡೆಂಟ್ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ನೀವು ಹಸಿಯಾಗಿ, ಬೇಯಿಸಿಯೂ ತಿನ್ನಬಹುದು.
ಬೆಂಡೆಕಾಯಿ: ಬೆಂಡೆಕಾಯಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಬೆಂಡೆಕಾಯಿ ಫೈಬರ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ಕರುಳನ್ನು ತಲುಪುವ ಮೂಲಕ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.