ಮನೆ ತಂತ್ರಜ್ಞಾನ ಫೇಸ್ ಬುಕ್ ಬಳಸುತ್ತಿದ್ದೀರಾ..? ನಿಮ್ಮ ಅಕೌಂಟ್ ಸುರಕ್ಷಿತವಾಗಿರಲು ಈಗಲೇ ‘Two Factor Authentication’ ಆನ್ ಮಾಡಿ

ಫೇಸ್ ಬುಕ್ ಬಳಸುತ್ತಿದ್ದೀರಾ..? ನಿಮ್ಮ ಅಕೌಂಟ್ ಸುರಕ್ಷಿತವಾಗಿರಲು ಈಗಲೇ ‘Two Factor Authentication’ ಆನ್ ಮಾಡಿ

0

ಫೇಸ್ ಬುಕ್ ಬಳಕೆ ಮಾಡುತ್ತಿರುವವರು ಇಂದು ಹೆಚ್ಚು ಸುರಕ್ಷಿತವಾಗಿರಬೇಕಿದೆ. ಅದರಲ್ಲೂ ಕಂಪನಿ/ ಸಂಸ್ಥೆಗಳ ಅಧಿಕೃತ ಫೇಸ್ಬುಕ್ ಖಾತೆ / ಪೇಜ್ಗಳನ್ನು ನಿರ್ವಹಿಸುತ್ತಿರುವವರು ಫೇಸ್ಬುಕ್ನ ‘ಟೂ ಫ್ಯಾಕ್ಟರ್ ಅಥೆಂಟಿಕೇಷನ್’ ಫೀಚರ್ ಎನೇಬಲ್ ಕಡ್ಡಾಯವಾಗಿ ಮಾಡಿಕೊಳ್ಳಬೇಕಿದೆ. ಇಂದಿನ ಇಂಟರ್ನೆಟ್ ಯುಗದಲ್ಲಿ ವೈಯಕ್ತಿಕ ಮಾಹಿತಿಗಳು ಸುರಕ್ಷಿತವಾಗಿರಬೇಕು ಎಂದರೆ, ಸೈಬರ್ ಕಳ್ಳರ ವಂಚನೆಗೆ ಒಳಗಾಗದಿರಲು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಸುರಕ್ಷಿತವಾಗಿ ಬಳಸಬೇಕಿದೆ. ಈ ನಿಟ್ಟಿನಲ್ಲಿ ಫೇಸ್ಬುಕ್ ತನ್ನ ಬಳಕೆದಾರರ ಹೆಚ್ಚಿನ ಸುರಕ್ಷತೆಗಾಗಿ ಈ ಫೀಚರ್ ಬಿಡುಗಡೆ ಮಾಡಿದೆ.

Join Our Whatsapp Group

ಫೇಸ್ ಬುಕ್ ನಲ್ಲಿ ‘ಟೂ ಫ್ಯಾಕ್ಟರ್ ಅಥೆಂಟಿಕೇಷನ್’ ಆನ್ ಮಾಡುವುದು ಹೇಗೆ?

– ನಿಮ್ಮ ಸ್ಮಾರ್ಟ್ ಫೋನ್ ಫೇಸ್ ಬುಕ್ ಅಪ್ಲಿಕೇಶನ್ ಓಪನ್ ಮಾಡಿ.

– ಸ್ಕ್ರೀನ್ ನ ಬಲಭಾಗದ ಟಾಪ್ ನಲ್ಲಿ 3 ಡಾಟ್ ಮೆನು ಐಕಾನ್ ಇರುವಲ್ಲಿ ಕ್ಲಿಕ್ ಮಾಡಿ.

– ನಂತರ ‘Settings >> Settings & Privacy’ ಆಯ್ಕೆ ಮಾಡಿ.

– ಮತ್ತೊಂದು ಪೇಜ್ ಓಪನ್ ಆಗುತ್ತದೆ.

– ಇಲ್ಲಿ ‘Password and Security’ ಎಂದಿರುವಲ್ಲಿ ಕ್ಲಿಕ್ ಮಾಡಿ. ಪುನಃ ನಿಮ್ಮ ಪ್ರೊಫೈಲ್ ಫೋಟೋದೊಂದಿಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ.

– ಇಲ್ಲೂ ಸಹ ‘Password and Security’ ಎಂದಿರುವಲ್ಲಿ ಕ್ಲಿಕ್ ಮಾಡಿ.

– ನಂತರ ತೆರೆದಿರುವ ಸ್ಕ್ರೀನ್ನಲ್ಲಿ ‘Two -Factor Authentication’ ಎಂದಿರುವಲ್ಲಿ ಕ್ಲಿಕ್ ಮಾಡಿ.

– ನೀವು ಬಳಕೆ ಮಾಡುತ್ತಿರುವ ಪ್ರೊಫೈಲ್ ಗಳು ಪ್ರದರ್ಶಿತವಾಗುತ್ತವೆ.

– ನೀವು ‘Two -Factor Authentication’ ಆನ್ ಮಾಡಬೇಕಿರುವ ಪ್ರೊಫೈಲ್ ಆಯ್ಕೆ ಮಾಡಿ.

– ನಂತರ ನಿಮ್ಮ ಪಾಸ್ ವರ್ಡ್ ನೀಡಿ.

– ಓಪನ್ ಆಗುವ ಪೇಜ್ ನಲ್ಲಿ ‘Text Massage (sms)’ ಆಯ್ಕೆ ಮಾಡಿ.

– ನಿಮ್ಮ ಫೇಸ್ ಬುಕ್ ಪ್ರೊಫೈಲ್ ಗೆ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ 6 ಡಿಜಿಟ್ ನ ಕೋಡ್ ಒಂದು ಬರುತ್ತದೆ. ಇದನ್ನು ನೀಡಿ ‘ Done’ ಎಂದಿರುವಲ್ಲಿ ಕ್ಲಿಕ್ ಮಾಡಿ.

– ನಂತರ ‘Two -Factor Authentication’ ಸೆಕ್ಯೂರಿಟಿ ಎನೇಬಲ್ ಆಗುತ್ತದೆ.

‘Two -Factor Authentication’ ಆನ್ ಮಾಡುವುದರ ಉಪಯೋಗವೇನು?

ಈ ಫೀಚರ್ ಆನ್ ಮಾಡುವುದರಿಂದ ನಿಮ್ಮ ಫೇಸ್ ಬುಕ್ ಖಾತೆ ಹೆಸರು, ಪಾಸ್ ವರ್ಡ್ ಬಳಸಿ ಯಾರೇ ಬೇರೆ ಡಿವೈಸ್ / ಬ್ರೌಸರ್ಗಳಲ್ಲಿ ಲಾಗಿನ್ ಆಗಲು ಪ್ರಯತ್ನಿಸಿದರೂ ನಿಮಗೆ ಕೋಡ್ ಬರುತ್ತದೆ. ಈ ಕೋಡ್ ನೀಡದೇ ಯಾರು ಸಹ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಅಲ್ಲದೇ ಅನಧಿಕೃತವಾಗಿ ಯಾರೇ ನಿಮ್ಮ ಫೇಸ್ ಬುಕ್ ಖಾತೆಗೆ ಲಾಗಿನ್ ಆಗಲು ಪ್ರಯತ್ನಿಸಿದರೂ ಸಹ ಫೇಸ್ ಬುಕ್ ನಿಮಗೆ 6 ಡಿಜಿಟ್ ಕೋಡ್ ಕಳುಹಿಸುತ್ತದೆ.

‘ಟೂ ಫ್ಯಾಕ್ಟರ್ ಅಥೆಂಟಿಕೇಷನ್’ ಕೋಡ್ ಪಡೆಯಲು ನಿಮ್ಮ ಮೊಬೈಲ್ ನಲ್ಲಿ ಇನ್ ಸ್ಟಾಲ್ ಆಗಿರುವ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು ಸಹ ಕೋಡ್ ಪಡೆಯಲು ಬಳಕೆ ಮಾಡಬಹುದು. ಇದಕ್ಕಾಗಿ ‘Text Massage’ ಆಯ್ಕೆ ಮಾಡುವ ಬದಲು ‘Authentication App’ ಆಯ್ಕೆ ಮಾಡಿ ಕೋಡ್ ಪಡೆಯಬಹುದು.

ಫೇಸ್ಬುಕ್ ‘Two -Factor Authentication’ ಏಕೆ ಕೇಳುತ್ತಿದೆ?

ಸಾಮಾನ್ಯವಾಗಿ ಎಲ್ಲರೂ ಸಹ ಒಂದು ಮೊಬೈಲ್ ನಲ್ಲಿ ತಮ್ಮ ಎಲ್ಲ ಸಾಮಾಜಿಕ ಜಾಲತಾಣ, ಪರ್ಸನಲ್ ಬಳಕೆಯ ಅಪ್ಲಿಕೇಶನ್ ಬಳಸುತ್ತಾರೆ. ಹಾಗೆಯೇ ಫೇಸ್ ಬುಕ್ ಸಹ ಒಂದು. ಕೆಲವೊಮ್ಮೆ ನೀವು ನಿಮ್ಮ ಖಾತೆಗೆನೇ ಆಪ್ ಬದಲು ನಿಮ್ಮ ಮೊಬೈಲ್ ನ ಬ್ರೌಸರ್ ಆಗಿರಬಹುದು, ಮತ್ತೊಂದು ಮೊಬೈಲ್ ಆಗಿರಬಹುದು, ಪಬ್ಲಿಕ್ ಇಂಟರ್ನೆಟ್ ಬ್ರೌಸಿಂಗ್ ಸೆಂಟರ್ಗಳಲ್ಲಿ ಲಾಗಿನ್ ಆಗಲು ಪ್ರಯತ್ನಿಸಿದಲ್ಲಿ ಫೇಸ್ ಬುಕ್ ಒಪ್ಪುವುದಿಲ್ಲ. ರಿಕಾಗ್ನೈಸ್ ಮಾಡುವುದಿಲ್ಲ. ನೀವಲ್ಲ, ಯಾರೇ ಪಾಸ್ವರ್ಡ್ ಸರಿಯಾಗಿ ನೀಡಿ ಸಹ ಪ್ರಯತ್ನಿಸಿದರೂ ಲಾಗಿನ್ ಆಗಲು ಸಾಧ್ಯವಾಗುವುದಿಲ್ಲ. ಆಗ ನೀವು ಲಾಗಿನ್ ಆಗಲೂ ಕಡ್ಡಾಯವಾಗಿ ‘Two -Factor Authentication’ ಫೀಚರ್ ಎನೇಬಲ್ ಮಾಡಿರುವುದರಿಂದ ಫೇಸ್ ಬುಕ್ ಸ್ವತಃ ನಿಮ್ಮ ಮೊಬೈಲ್ ನಂಬರ್ ಗೆ ನೀಡುವ ಕೋಡ್ ನೀಡಿ ಲಾಗಿನ್ ಆಗಬಹುದು.

‘Two -Factor Authentication’ ಬಳಕೆ ಉಪಯೋಗವೇನು?

ನಿಮ್ಮ ಖಾತೆಗೆ ಫಿಶಿಂಗ್ ಅಟ್ಯಾಕ್ ಆಗದಂತೆ, ಸೋಷಿಯಲ್ ಇಂಜಿನಿಯರಿಂಗ್ ಮತ್ತು ಪಾಸ್ ವರ್ಡ್ ಬ್ರೂಟ್-ಫೋರ್ಸ್ ಅಟ್ಯಾಕ್ ಆಗದಂತೆ, ಸೈಬರ್ ಕಳ್ಳರು ನಿಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗದಂತೆ ಸುರಕ್ಷತೆ ನೀಡುತ್ತದೆ ಈ ಫೀಚರ್.

ಇಂದಿನ ಇಂಟರ್ ನೆಟ್ ಯುಗದಲ್ಲಿ ಡಿಜಿಟಲ್ ಮಾಹಿತಿಗಳ ಸುರಕ್ಷತೆ ಬೇಕೆಂದೆರೆ ಫೇಸ್ ಬುಕ್ ನ ಈ ಟೂ ಫ್ಯಾಕಟ್ ಅಥೆಂಟಿಕೇಷನ್ ಫೀಚರ್ ಜಾಗತಿಕ ಅಗತ್ಯತೆ ಆಗಿದೆ.

ಬಳಕೆ ಮಾಡದಿದ್ದರೆ, ಖಾತೆದಾರರಿಗೆ ಅನಾನುಕೂಲ ಎಂದೇಳಬಹುದು.