ಮೊಟ್ಟೆ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳ ಅತ್ಯುತ್ತಮ ಮೂಲವಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಬೆಳಗಿನ ಉಪಾಹಾರಕ್ಕಾಗಿ ಮೊಟ್ಟೆಗಳನ್ನು ತಿನ್ನುವುದರಿಂದ ದಿನವಿಡೀ 400 ಕ್ಯಾಲೊರಿಗಳನ್ನು ಮಿತಿಗೊಳಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಆರೋಗ್ಯಕರ ಉಪಹಾರದ ಭಾಗವಾಗಿ ಮೊಟ್ಟೆಗಳನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಮೊಟ್ಟೆ ಹೆಚ್ಚಿನ ಪ್ರೊಟೀನ್ ಅಂಶದಿಂದಾಗಿ ತೂಕವನ್ನು ಕಳೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಕೂಡ ಸಹಾಯ ಮಾಡುತ್ತದೆ.
ಆರೋಗ್ಯಕರವಾಗಿ ತೂಕ ಹೇಗೆ ಕಳೆದುಕೊಳ್ಳುವುದು?
ಸ್ಥೂಲಕಾಯತೆಯು ನಿಮ್ಮ ಆರೋಗ್ಯವನ್ನು ಹದಗೆಡಿಸುವುದು ಮಾತ್ರವಲ್ಲದೇ, ನಿಮ್ಮನ್ನು ಮಾನಸಿಕವಾಗಿಯೂ ಕುಗ್ಗಿಸುತ್ತದೆ. ಇದು ಮಧುಮೇಹ, ಹೃದ್ರೋಗಗಳು ಮತ್ತು ಕೆಲವು ರೀತಿಯ ಕ್ಯಾನ್ಸರ್‌ನಂತಹ ದೀರ್ಘಕಾಲದ ಮತ್ತು ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಕೂಡ ಒಳಗೊಂಡಿದೆ. ಆದ್ದರಿಂದ ಆರೋಗ್ಯಕರವಾಗಿ ನಿಧಾನವಾಗಿ ತೂಕ ಇಳಿಸುಕೊಳ್ಳುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ.
ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಲು ಸಲಹೆಗಳು ಇಲ್ಲಿವೆ:
ಅಧಿಕ ತೂಕದ ಬಗ್ಗೆ ಅತಿಯಾಗಿ ಚಿಂತಿಸದಿರಿ.
ಸಾಕಷ್ಟು ನೀರು ಕುಡಿಯಿರಿ.
ಬೆಳಗಿನ ಉಪಾಹಾರವನ್ನು ಬಿಡಬೇಡಿ.
ನಿಯಮಿತವಾಗಿ ತಿನ್ನಿರಿ
ಬೆಳಗಿನ ಉಪಾಹಾರಕ್ಕಾಗಿ ಪ್ರೋಟೀನ್ ಗಳನ್ನು ಸೇವಿಸಿ.
ತಿನ್ನಲು ಸಣ್ಣ ಪ್ಲೇಟ್ ಬಳಸಿ.
ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
ಮದ್ಯಪಾನ ಮತ್ತು ಧೂಮಪಾನವನ್ನು ತಪ್ಪಿಸಿ.
ಕರಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ