ಮನೆ ಅಪರಾಧ ಬೋರ್ ಕೊರೆಯುವ ಲಾರಿ ಪಲ್ಟಿ: ಮೂವರಿಗೆ ಗಾಯ

ಬೋರ್ ಕೊರೆಯುವ ಲಾರಿ ಪಲ್ಟಿ: ಮೂವರಿಗೆ ಗಾಯ

0

ಮೈಸೂರು(Mysuru):  ಕಾರಿಗೆ(Car) ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೋರ್  ಕೊರೆಯುವ ಲಾರಿಯೊಂದು(Bore drilling lorry) ಪಲ್ಟಿಯಾಗಿದ್ದು, ಮೂವರಿಗೆ ಗಾಯಗಳಾಗಿರುವ ಘಟನೆ ನಗರದ ಬೋಗಾದಿ ಜಂಕ್ಷನ್ ಬಳಿ ಇಂದು ನಡೆದಿದೆ.

ಹಿನಕಲ್ ರಿಂಗ್ ರಸ್ತೆಯಿಂದ ಬೋಗಾದಿ ರಿಂಗ್ ರಸ್ತೆ ಕಡೆ ಬರುತ್ತಿದ್ದ ಬೋರ್ ಕೊರೆಯುವ ಲಾರಿಯೊಂದು ಅತಿವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಲ್ಟಿ ಹೊಡೆದಿದೆ. ಈ ವೇಳೆ ಲಾರಿಯಲ್ಲಿ ಚಾಲಕ ಸೇರಿದಂತೆ ಮೂವರು ವ್ಯಕ್ತಿಗಳಿದ್ದು, ಅವರಿಗೆ ಗಾಯಗಳಾಗಿವೆ ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುವೆಂಪುನಗರ ಸಂಚಾರಿ ಠಾಣೆ ಮತ್ತು ಕೆ.ಆರ್.ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಕೆ.ಆರ್.ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.