ಮನೆ ಆಟೋ ಮೊಬೈಲ್ ಭಾರತದ ಮಾರುಕಟ್ಟೆಗೆ ಶೀಘ್ರ ಪ್ರವೇಶಿಸಲಿದೆ ಹೊಸ BMW M 1000 RR ಬೈಕ್

ಭಾರತದ ಮಾರುಕಟ್ಟೆಗೆ ಶೀಘ್ರ ಪ್ರವೇಶಿಸಲಿದೆ ಹೊಸ BMW M 1000 RR ಬೈಕ್

0

ಹೊಸ ಬೈಕಿನ ಬಿಡುಗಡೆಯ ಸುಳಿವನ್ನು ಟೀಸರ್ ಮೂಲಕ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಿಟ್ಟು ಕೊಟ್ಟಿದೆ. ಹಲವು ವೈಶಿಷ್ಟ್ಯಗಳೊಂದಿಗೆ ಹೊಸ ಜನರೇಷನ್‌ನ ಈ ಬೈಕ್ ಬಿಡುಗಡೆಯಾಗಲಿದೆ.

Join Our Whatsapp Group

ಇಂಡಿಯಾ ತನ್ನ ಹೊಸ ಮೋಟಾರ್‌ಸೈಕಲ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಈ ಬಗ್ಗೆ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇದು ಪೋಸ್ಟ್‌ ಒಂದನ್ನು ಹಂಚಿಕೊಂಡಿದೆ. M 1000 RR ಟ್ರ್ಯಾಕ್ ಫೋಕಸ್ಡ್ ಮೋಟಾರ್‌ಸೈಕಲ್ ಇದಾಗಿದ್ದು, ಶೀಘ್ರದಲ್ಲಿ ಈ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ ಕಂಪನಿ ಸುಳಿವು ಕೊಟ್ಟಿದೆ. BMW M 1000 RR 2021ರಲ್ಲಿ ಭಾರತೀಯ ಮಾರುಕಟ್ಟೆಗೆ ಬಂದ ಮೊದಲ M ಬ್ಯಾಡ್ಡ್ ಮೋಟಾರ್‌ಸೈಕಲ್ ಆಗಿದೆ. ಈಗ BMW Motorrad ಹೊಸ ಜನರೇಷನ್‌ನ M 1000 RR ಅನ್ನು ಇನ್ನಷ್ಟು ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಲು ಸಜ್ಜಾಗಿದೆ.

ಈ ಬೈಕ್ ಈಗಾಗಲೇ ನಿರೀಕ್ಷೆ ಹುಟ್ಟಿಸಿದೆ. ಈ ಬಿಎಂಡಬ್ಲ್ಯೂ ಮೋಟಾರ್‌ಸೈಕಲ್ ಕಾರ್ಬನ್‌ ಫೈಬರ್‌ ಘಟಕಗಳನ್ನು ಮತ್ತು ಇಂಧನ ಟ್ಯಾಂಕ್ ಮೇಲೆ ದೊಡ್ಡ ಬಿಎಂಡಬ್ಲ್ಯೂ ಬ್ಯಾಡ್ಜ್‌ ಹೊಂದಿರಲಿದೆ ಎಂಬುದು ಕಂಪನಿ ಹಂಚಿಕೊಂಡಿರುವ ಟೀಸರ್‌ನಲ್ಲಿ ಗೊತ್ತಾಗುತ್ತದೆ. ಯಾಂತ್ರಿಕವಾಗಿ ಈ ಹೊಸ BMW M 1000 RR 999cc ಇನ್-ಲೈನ್ ಫೋರ್ -ಸಿಲಿಂಡರ್ ಎಂಜಿನ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಇದು 14,500 rpmನಲ್ಲಿ ಗರಿಷ್ಟ 206 hp ಶಕ್ತಿ ಮತ್ತು 11,000 rpmನಲ್ಲಿ ಗರಿಷ್ಟ 113ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

S 1000 RR ಸ್ಪೋರ್ಟ್ಸ್ ಬೈಕ್‌ನ ಟ್ರ್ಯಾಕ್-ಫೋಕಸ್ಡ್ ಆವೃತ್ತಿಯಾಗಿದೆ. ಇದು BMW ShiftCam ತಂತ್ರಜ್ಞಾನವನ್ನು ಪಡೆಯುತ್ತದೆ. ಇದರ ಜತೆಗೆ ಎಂಜಿನ್ ಕೂಡಾ ಟೈಟಾನಿಯಂ ಕನೆಕ್ಟಿಂಗ್ ರಾಡ್‌ಗಳು ಮತ್ತು ಅಡಾಪ್ಟಿವ್ ಕಂಬಶ್ಚನ್‌ ಚೇಂಬರ್‌ ಅನ್ನು ಹೊಂದಿದೆ. ಎಕ್ಸಾಸ್ಟ್‌ ಟೈಟಾನಿಯಂನಿಂದ ಮಾಡಲ್ಪಟ್ಟಿದ್ದು, ಇದು ಹಗುರವಾಗಿರುತ್ತದೆ. ಈ ಹೊಸ ಬೈಕ್‌ನ ಟಾಪ್‌ ಸ್ಫೀಡ್ 314 kmph ಆಗಿರಲಿದೆ ಎಂದು ಬಿಎಂಡಬ್ಲ್ಯೂ ಹೇಳಿಕೊಂಡಿದೆ.

ಹೊಸ ಬಿಎಂಡಬ್ಲೂ ಎಂ 1000 ಆರ್‌ ಅಲ್ಯೂಮಿನಿಯಂ ಚಾಸಿಸ್ ಜೊತೆಗೆ ಆಪ್ಟಿಮೈಸ್ಡ್ ಅಪ್‌ಸೈಡ್-ಡೌನ್ ಫೋರ್ಕ್, ಹೊಸ ವಿನ್ಯಾಸದ ಸೆಂಟ್ರಲ್ ಸ್ಪ್ರಿಂಗ್ ಸ್ಟ್ರಟ್ ಮತ್ತು ಅಡ್ಜಸ್ಟೇಬಲ್‌ ಸ್ವಿಂಗ್‌ರಾಮ್ ಪಿವೋಟ್ ಪಾಯಿಂಟ್ ಅನ್ನು ಹೊಂದಿರಲಿದೆ. ಬ್ರೇಕ್‌ನ ಕರ್ತವ್ಯ ನಿರ್ವಹಣೆಗೆ ಬೈಕ್‌ನ ಮುಂಭಾಗದಲ್ಲಿ 320 ಎಂಎಂ ಜೋಡಿ ಡಿಸ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಅನ್ನು ಇದು ಹೊಂದಲಿದೆ.

ಇದು ನಾಲ್ಕು ರೇಸಿಂಗ್ ಮೋಡ್‌ಗಳನ್ನು ಹೊಂದಿರಲಿದೆ. ರಸ್ತೆ, ಮಳೆ, ಡೈನಾಮಿಕ್ ಮತ್ತು ರೇಸ್‌ ಹಾಗೂ ಮೂರು ರೇಸ್ ಪ್ರೋ ಮೋಡ್‌ಗಳನ್ನು ಇದು ಹೊಂದಿರಲಿದೆ. ‘M’ ಆರಂಭಿಸಿ ಅನಿಮೇಷನ್‌ ಜೊತೆಗೆ 6.5-ಇಂಚಿನ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿರುವ ಹೊಸ BMW M 1000 R ಕ್ಲಚ್‌ಲೆಸ್-ಗೇರ್ ಶಿಫ್ಟ್‌ಗಳು, ಹಿಲ್-ಸ್ಟಾರ್ಟ್ ಅಸಿಸ್ಟ್, GPS, USB ಚಾರ್ಜಿಂಗ್ ಸಾಕೆಟ್ ಸೇರಿ ಸಾಕಷ್ಟು ವ್ಯವಸ್ಥೆಯನ್ನು ಹೊಂದಿದೆ.