ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಆರೋಪಿಸುವ ಕಾಂಗ್ರೆಸ್ ನವರಿಗೆ ತಮ್ಮ ಪಕ್ಷಕ್ಕೆ ಸುಮಾರು ಎರಡುವರೆ ವರ್ಷಗಳವರೆಗೆ ರಾಷ್ಟ್ರೀಯ ಅಧ್ಯಕ್ಷರೇ ಇರಲಿಲ್ಲ ಎಂಬ ನೆನಪು ಆಗುತ್ತಿಲ್ಲವೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಂಗ್ಯವಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಬಡ ಕುಟುಂಬಗಳಿಗೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದು, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಬಿಟ್ಟು ಹತ್ತು ಕೆ.ಜಿಯೋ, ಇಲ್ಲವೇ ಕೇಂದ್ರದ್ದು ಸೇರಿ ನೀಡುತ್ತಾರೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಬಡ ಕುಟುಂಬಗಳ ಪ್ರತಿಯೊಬ್ಬರಿಗೆ 5 ಕೆಜಿ ಯಷ್ಟು ಅಕ್ಕಿ ನೀಡುತ್ತಿದೆ ಅದನ್ನು ಕಾಂಗ್ರೆಸ್ ಸರಕಾರ ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ ಇಡೀ ಯೋಜನೆ ತನ್ನದೇ ಎಂಬಂತೆ ಬಿಂಬಿಸುತ್ತಿದೆ. ಸಾಲದು ಎಂಬಂತೆ ಕೇಂದ್ರ ಸರಕಾರ ಅಕ್ಕಿ ನೀಡುತ್ತಿಲ್ಲ ಎಂದು ಜನರಲ್ಲಿ ತಪ್ಪು ಭಾವನೆ ಮೂಡಿಸುವ ಯತ್ನಕ್ಕೆ ಮುಂದಾಗಿದೆ ಎಂದರು.
ಕೇಂದ್ರ ಸರಕಾರ ದೇಶದಲ್ಲಿ ಒಟ್ಟು 80 ಕೋಟಿ ಕುಟುಂಬಗಳಿಗೆ ಅಕ್ಕಿ ನೀಡುತ್ತಿದೆ . ದೇಶದಲ್ಲಿ ಹಣದುಬ್ಬರವನ್ನು ತಗ್ಗಿಸುವ ನಿಟ್ಟಿನಲ್ಲಿ ಇನ್ನುಳಿದ 60 ಕೋಟಿ ಕುಟುಂಬಗಳಿಗೆ ಅಕ್ಕಿ ನೀಡಿಕೆ ನಿಟ್ಟಿನಲ್ಲಿ ಕಡಿಮೆ ದರ ದಲ್ಲಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ನೀಡಲು ಮುಂದಾಗಿದೆ ಎಂದರು.
ಕೇಂದ್ರ ಸರ್ಕಾರ ಸಂಗ್ರಹ ಇರಿಸಿಕೊಂಡು ಅಕ್ಕಿ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ನವರ ಆರೋಪ ಸುಳ್ಳು ಇಂತಿಷ್ಟು ಪ್ರಮಾಣದ ಅಕ್ಕಿ ಸಂಗ್ರಹ ಇರಿಸಲೇ ಬೇಕಾಗಿದ್ದು ಅದನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಜನರಿಗೆ 200 ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡುವುದಾಗಿ ಹೇಳಿದ ಕಾಂಗ್ರೆಸ್ ಗೊತ್ತಿಲ್ಲದಂತೆಯೇ ದರ ಹೆಚ್ಚಳ ಮಾಡಿದೆ ಜೊತೆಗೆ ಕನಿಷ್ಠ ದರವನ್ನು ಹೆಚ್ಚಳ ಮಾಡಿದ್ದು ಅದನ್ನಾದರೂ ಕಡಿಮೆ ಮಾಡಲಿ ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಅಧಿಕಾರಕ್ಕೆ ಬಂದ ಒಂಬತ್ತು ವರ್ಷಗಳಲ್ಲಿ ರಾಷ್ಟ್ರದಲ್ಲಿ ಸುಮಾರು 84 ಬಿಲಿಯನ್ ಡಾಲರ್ ನಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಯಾಗಿದೆ ಇದರಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಸಿಂಹ ಪಾಲು ಪಡೆದುಕೊಂಡಿವೆ ಆದರೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ತರ ಹೆಚ್ಚಳ ಇನ್ನಿತರ ನೀತಿಗಳಿಂದ ಇದ್ದ ಉದ್ಯಮಿಗಳು ರಾಜ್ಯದಿಂದ ಹೊರ ಹೋಗುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.
ನಿರುದ್ಯೋಗ ಪದವೀಧರರಿಗೆ ಭತ್ಯೆ ನೀಡುವದಾಗಿ ಘೋಷಿಸಿದ್ದ ಕಾಂಗ್ರೆಸ್ ಇದೀಗ 2022 -23ನೇ ಸಾಲಿನ ಸಾಲಿನಲ್ಲಿ ಪಾಸಾದ ಪದವೀಧರರಿಗೆ ಅದು ಆರು ತಿಂಗಳವರೆಗೆ ಉದ್ಯೋಗ ಸಿಗದವರಿಗೆ ಭತ್ಯೆ ನೀಡುವುದಾಗಿ ಹೇಳುತ್ತಿರುವುದು ಯುವಕರಿಗೆ ಮಾಡಿದ ಮೋಸವಾಗಿದೆ ಎಂದರು.
ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ 7,600 ಕೋಟಿ ರೂಗಳನ್ನು ನೀಡಿದ್ದು ಇದು ದಾಖಲೆಯ ಮೊತ್ತದಾಗಿದೆ ಅದೇ ರೀತಿ 1. 29 ಕೋಟಿ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡು ಗಳನ್ನು ನೀಡಲಾಗಿದೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ 4 ಲಕ್ಷ ಮನೆಗಳನ್ನು ಗ್ರಾಮೀಣದಲ್ಲಿ ನಿರ್ಮಾಣ ಮಾಡಲಾಗಿದೆ ಮೂಲಭೂತ ಸೌಲಭ್ಯ ಇನ್ನಿತರ ಕ್ಷೇತ್ರಗಳಲ್ಲಿ ಕೇಂದ್ರದ ಕೊಡುಗೆ ಅಪಾರ ವಾಗಿದ್ದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರು ಅಚ್ಚೆ ದಿನ್ ತರಲಿಲ್ಲ ಎಂದು ಆರೋಪಿಸುತ್ತಿದ್ದಾರೆ ಕಾಂಗ್ರೆಸ್ ನವರಿಗೆ ಅಚ್ಚೆದಿನ್ ಬಂದಿರಲಿಕ್ಕಿಲ್ಲ ಆದರೆ ದೇಶದ ಜನತೆಗೆ ಅದು ಬಂದ ಅನುಭವವಾಗಿದೆ ಎಂದರು.