ಮನೆ ಅಪರಾಧ ಶಿವರಾಂಪೇಟೆಯ ಮನ್ನರ್ಸ್  ಮಾರುಕಟ್ಟೆಯಲ್ಲಿ ಎರಡು ಅಂಗಡಿಗಳಲ್ಲಿ ಹಣ ದೂಚಿದ ಖದೀಮರು

ಶಿವರಾಂಪೇಟೆಯ ಮನ್ನರ್ಸ್  ಮಾರುಕಟ್ಟೆಯಲ್ಲಿ ಎರಡು ಅಂಗಡಿಗಳಲ್ಲಿ ಹಣ ದೂಚಿದ ಖದೀಮರು

0

ಮೈಸೂರು: ಮೈಸೂರಿನ ಶಿವರಾಮ್ ಪೇಟೆಯಲ್ಲಿರುವ ಮನ್ನರ್ಸ್ ಮಾರುಕಟ್ಟೆಯಲ್ಲಿ ಶೆಟರ್ ಮೀಟಿ ಎರಡು ಅಂಗಡಿಗಳಲ್ಲಿ ಹಣವನ್ನು ದೋಚಿದ್ದಾರೆ.                                                       

Join Our Whatsapp Group

ಕಳೆದ ರಾತ್ರಿ ಮಿಲನ್ ಸ್ಟೇಷನರಿ ಶಾಪ್ ಮತ್ತು ನಾವೆಲ್ಟಿ ಸ್ಟೋರ್ ಅಂಗಡಿಗಳ ರೋಲಿಂಗ್ ಶಟರ್ಸ್ ಮೀಟಿ ಒಳ ನುಸುಳಿರುವ ಖದೀಮರು  ಗಲ್ಲಾ ಪೆಟ್ಟಿಗೆಯನ್ನು ಜಾಲಾಡಿ ಅದರಲ್ಲಿದ್ದ 2500 ರೂ. ನಗದನ್ನು ಹೊತ್ತೊಯ್ದಿದ್ದಾರೆ.

 ವ್ಯಾಪಾರ ಮುಗಿಸಿ ಮಂಗಳವಾರ ರಾತ್ರಿ ಅಂಗಡಿಗೆ ಬೀಗ ಹಾಕಿ ಹೋಗಿದ್ದ ಮಾಲೀಕರು, ಇಂದು ಬೆಳಗ್ಗೆ ಬಂದಾಗ ರೋಲಿಂಗ್ ಶೆಟ್ಟರ್ ಮೀಟಿರುವುದು ಕಂಡಿತು. ಒಳ ಹೋಗಿ ನೋಡಿದಾಗ ಅದರಲ್ಲಿ 1000ರೂ.ಹಾಗೂ ಮತ್ತೊಂದು ಅಂಗಡಿಯಲ್ಲಿ 1,500 ರೂ. ಹಣ ಕಳುವಾಗಿರುವುದು ಗೊತ್ತಾಗಿದೆ.

 ಅಂಗಡಿಯಲ್ಲಿದ್ದ ಲೇಖನ ಸಾಮಗ್ರಿ ಮತ್ತು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಮುಟ್ಟದ ಕಳ್ಳರು ಕೇವಲ ನಗದು ಪೆಟ್ಟಿಗೆಯನ್ನು ಮಾತ್ರ ಶೋಧಿಸಿದ್ದಾರೆ.

ವಿಷಯ ತಿಳಿದ ಸ್ಥಳಕ್ಕೆ ತೆರಳಿದ ದೇವರಾಜ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ಪ್ರಭು ಹಾಗೂ ಸಿಬ್ಬಂದಿ ಮಹಾಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.             

ಆದರೆ ಈ ಎರಡು ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಯಾರಾದರೂ, ರಾತ್ರಿ ವ್ಯಾಪಾರ ಮುಗಿದ ಮೇಲೆ ಸಿಸಿಟಿವಿ ಕ್ಯಾಮೆರಾ ಗಳನ್ನು ಆಫ್ ಮಾಡಿ ಹೋಗಿರುವುದು ಮಹಾಜರ್ ಮಾಡುವ ಸಂದರ್ಭ ತಿಳಿದುಬಂದಿದೆ.                                                      

ಪ್ರತಿಯೊಂದು ಅಂಗಡಿ ಮುಂಗಟ್ಟು, ವಾಣಿಜ್ಯ ಕೇಂದ್ರಗಳು, ಹೋಟೆಲ್, ಲಾಡ್ಜ್ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ತಪ್ಪದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಅವು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕು.  ಕನಿಷ್ಠ ಮೂರು ತಿಂಗಳ ಫೋಟೋಗಳನ್ನು ಸಂಗ್ರಹಿಡಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ದೇವರಾಜ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರಭು ತಿಳಿಸಿದ್ದಾರೆ.