ಹಲವು ಮಂದಿ ತೂಕ ಇಳಿಸಲು ಹಣ್ಣು, ತರಕಾರಿಗಳ ಸೇವನೆ ಮಾಡುತ್ತಾರೆ. ಹಣ್ಣು, ತರಕಾರಿಯಂತೆಯೇ ಪನ್ನೀರ್ ಸೇವನೆಯಿಂದಲೂ ತೂಕವನ್ನು ಸುಲಭವಾಗಿ ಕಡಿಮೆಮಾಡಿಕೊಳ್ಳಬಹುದು.
100 ಗ್ರಾಂ ಪನ್ನೀರ್ ನಲ್ಲಿ ಸುಮಾರು 11 ಗ್ರಾಂ ಪ್ರೋಟೀನ್ ಇರುತ್ತದೆ. ತೂಕವನ್ನು ಇಳಿಸುವವರು ತಮ್ಮ ಡಯಟ್ ನಲ್ಲಿ ಪ್ರೋಟೀನ್ ಅಂಶಗಳನ್ನು ಹೊಂದಿದ ಆಹಾರವನ್ನು ಸೇರಿಸಿಕೊಳ್ಳುತ್ತಾರೆ.
ಕಡಿಮೆ ಕ್ಯಾಲೊರಿ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಅನ್ನು ಹೊಂದಿದೆ. ಹೆಚ್ಚು ಫ್ಯಾಟ್ ಅಂಶ ಹೊಂದಿರುವ ಹಾಲಿನಿಂದ ಮಾಡಿದ ಪನ್ನೀರ್ ನಲ್ಲಿ ಮಾತ್ರ ಕ್ಯಾಲೊರಿ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಹಾಗಾಗಿ ನೀವು ಕಡಿಮೆ ಫ್ಯಾಟ್ ಹೊಂದಿರುವ ಹಾಲಿನಿಂದ ಮಾಡಿದ ಪನ್ನೀರ್ ಅನ್ನೇ ಸೇವಿಸಬೇಕು.
ಪನ್ನೀರ್ ನಲ್ಲಿ ತೂಕವನ್ನು ಹೆಚ್ಚಿಸುವ ಮತ್ತು ಆರೋಗ್ಯಕ್ಕೆ ಹಾನಿಯುಂಟುಮಾಡುವ ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣ ಬಹಳ ಕಡಿಮೆ ಇರುತ್ತದೆ.
ಪನ್ನೀರ್ ನಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಮತ್ತು ಮಿನರಲ್ಸ್ ಇರುತ್ತವೆ. ಹಸಿ ಪನ್ನೀರ್ ತಿನ್ನುವುದರಿಂದ ಕ್ಯಾಲ್ಶಿಯಮ್, ಸೆಲೆನಿಯಮ್ ಮತ್ತು ಪೊಟ್ಯಾಶಿಯಮ್ ಮುಂತಾದವುಗಳು ಶರೀರಕ್ಕೆ ಸಿಗುತ್ತವೆ.
ಪನ್ನೀರ್ ಅನ್ನು ಕೂಡ ನೀವು ಹಸಿಯಾಗಿ ಸೇವಿಸಿದರೆ ತೂಕ ಇಳಿಕೆಯಾಗುತ್ತದೆ. ಇದರ ಹೊರತಾಗಿ ಸಲಾಡ್ ಜೊತೆ ಸೇರಿಸಿ ಅಥವಾ ಬೆಳಗ್ಗಿನ ತಿಂಡಿಯನ್ನು ಪನ್ನೀರ್ ಅನ್ನು ಸೇವಿಸಬಹುದು.