ಮನೆ ಆಟೋ ಮೊಬೈಲ್ ರಾಯಲ್ ಎನ್ ಫೀಲ್ಡ್ 650 ಪಾಳಯದ ವಿಲನ್ ಟ್ರಯಂಫ್ ಬೈಕ್ ಗಳ ಬುಕಿಂಗ್ ಓಪನ್

ರಾಯಲ್ ಎನ್ ಫೀಲ್ಡ್ 650 ಪಾಳಯದ ವಿಲನ್ ಟ್ರಯಂಫ್ ಬೈಕ್ ಗಳ ಬುಕಿಂಗ್ ಓಪನ್

0

ಕೆಲವು ದಿನಗಳ ಹಿಂದೆಯಷ್ಟೇ ಪ್ರಸಿದ್ದ ಎರಡು ದ್ವಿಚಕ್ರ ವಾಹನ ತಯಾರಕರಾದಂತಹ ಬಜಾಜ್ ಮತ್ತು ಟ್ರಯಂಫ್ ನ ಸಹಯೋಗತ್ವದಲ್ಲಿ ಟ್ರಯಂಫ್ ನ ಎರಡು ಬೈಕ್ ಗಳನ್ನು ಲಂಡನ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಅನ್ ವೀಲ್ ಮಾಡಿದ್ದರು. ಭಾರೀ ನಿರೀಕ್ಷೆಯೊಂದಿಗೆ ಅನಾವರಣಗೊಂಡ  ಎರಡು ಬೈಕ್  ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಬರಲಿದೆ ಎಂದು ಊಹಿಸಲಾಗಿದೆ.

Join Our Whatsapp Group

27 ರಂದು ಅನಾವರಣ ಗೊಂಡ Speed 400 ಮತ್ತು Scrambler 400X ಬೈಕ್ ಗಳ ಬುಕಿಂಗ್ ಭಾರತದಲ್ಲಿ ಈಗಾಗಲೇ ಆರಂಭವಾಗಿದೆ ಎಂದು ಮಾಹಿತಿಗಳು ತಿಳಿಸಿವೆ. ಇನ್ನು ಟ್ರಯಂಫ್ ಈ Speed 400 ಮತ್ತು Scrambler 400X ಬೈಕನ್ನು ಭಾರತದಲ್ಲಿ ಜುಲೈ ತಿಂಗಳ ಐದನೇ ತಾರೀಖಿನಂದು  ಲಾಂಚ್ ಮಾಡಲಿದ್ದು ಇದಕ್ಕೂ ಮುಂಚಿತವಾಗಿಯೇ ಬುಕಿಂಗ್ ಅನ್ನು ಆರಂಭಿಸಿದೆ.

ಇನ್ನು ಈ ಎರಡೂ ಬೈಕ್ ಗಳ ಬೆಲೆಯನ್ನು ಲಾಂಚ್ ನ  ವೇಳೆ  ತಿಳಿಸಲಿದೆ. ಇನ್ನು ಈ Speed 400 ಮತ್ತು Scrambler 400X ಬೈಕ್ ಗಳು ಟ್ರಯಂಫ್ ಬೈಕ್ ಗಳಲ್ಲೇ ಅಗ್ಗದ ಬೆಲೆಯ ಬೈಕ್ ಗಳಾಗಿದೆ.

ಇನ್ನು Speed 400 ಮತ್ತು Scrambler 400X ಎರಡೂ  ಬೈಕ್  ಟ್ರಯಂಫ್ ನ (Triumph) ಭಾರತೀಯ ವೆಬ್ ಸೈಟ್ ನಲ್ಲಿ ಈಗಾಗಲೇ ಸೇರಿಸಲಾಗಿದ್ದು ಈ ಎರಡೂ ಬೈಕ್ ಗಳನ್ನು ಭಾರತೀಯ ಗ್ರಾಹಕರು ರೂ 2000 ರೂಗಳನ್ನು ನೀಡಿ ಪ್ರೀ-ಬುಕ್ ಮಾಡಿಕೊಳ್ಳಬಹುದಾಗಿದೆ. ಇನ್ನು ಆ ನಂತರದಲ್ಲಿ ಬುಕಿಂಗ್  ಕ್ಯಾನ್ಸಲ್  ಮಾಡಿಕೊಳ್ಳುವುದಾದರೆ ಈ 2 ಸಾವಿರ ರೂಗಳು ರೀ ಫಂಡ್ ಮಾಡಿಕೊಳ್ಳಬಹುದಾಗಿದೆ.

ಸ್ಪೀಡ್ 400 ರೋಡ್ಸ್ಟರ್ ಮತ್ತು ಸ್ಕ್ರಾಂಬ್ಲರ್ 400X ಈ ಎರಡೂ ಬೈಕ್ ಗಳಲ್ಲಿ TR ಸರಣಿಯ ಫ್ಯುಯೆಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ ೩೯೮ ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪರಿಚಯಿಸಲಾಗಿದ್ದು, ಈ ಬೈಕ್ ಗಳು ಈ ಎಂಜಿನ್ ಸಹಾಯದಿಂದ 40 ಪಿಎಸ್ ಪವರ್ ಮತ್ತು 37.5 ಎನ್ ಎಮ್ ಟಾರ್ಕನ್ನು ಸಹ ಉತ್ಪಾದಿಸಲಿದೆ.

ಇನ್ನು ಮಾರುಕಟ್ಟೆಗೆ ಟ್ರಯಂಫ್ ಈ ಎರಡು ಬೈಕ್ ಗಳನ್ನು ಲಾಂಚ್ ಮಾಡುವುದರ ಮೂಲಕ ರಾಯಲ್ ಎನ್ ಫೀಲ್ಡ್  ಪಾಳಯದಲ್ಲಿ ಆತಂಕ ಈಗಾಗಲೇ ಶುರುವಾಗಲಿದೆ. ಈಗಾಗಲೇ ರಾಯಲ್ ಎನ್ಪೀಲ್ಡ್ ನ ಟ್ವಿನ್ ಗಳು ಎಂದೇ ಖ್ಯಾತವಾಗಿರುವ ಕಾಂಟಿನೆಂಟಲ್  ಜಿಟಿ 650 ಮತ್ತು ಇಂಟರ್ ಸೆಪ್ಟರ್ 650 ಬೈಕ್ ಗಳಿಗೆ  ನೇರ  ಪ್ರತಿಸ್ಪರ್ಧಿಯಾಗಲಿವೆ.