ಬೆಂಗಳೂರು: ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆಯ ಬಸ್ ನಿಲ್ದಾಣದಲ್ಲಿ ಕುಡುಕ ಪತಿಯೊಬ್ಬ ಫ್ರೀ ಬಸ್ಸಿನಲ್ಲಿ ಟ್ರಿಪ್ ಗೆ ಹೋದ ತನ್ನ ಪತ್ನಿ ಮನೆಗೆ ಬಂದಿಲ್ಲವೆಂದು, ಬಸ್ ಟೈಯರ್ ಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ಘಟನೆಯ ಪರಿಣಾಮ ಹೊಸಕೋಟೆ ಬಸ್ ನಿಲ್ದಾಣದಲ್ಲಿ ಅರ್ಧ ಗಂಟೆ ಬಸ್ ಸಂಚಾರ ಸ್ಥಗಿತಗೊಂಡಿದೆ.
ಈ ವೇಳೆ ಕುಡುಕ ಪತಿ, ನನ್ನ ಹೆಂಡತಿ ಟ್ರಿಪ್ ಗೆ ಹೋದವಳು ಇನ್ನೂ ವಾಪಸ್ ಬಂದಿಲ್ಲ. ಸಿದ್ದರಾಮಯ್ಯ ಸರಿ ಇಲ್ಲ, ಮಹಿಳೆಯರಿಗೆ ಪ್ರೀಪಾಸ್ ಪ್ರಯಾಣವನ್ನು ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾನೆ.
ಈ ವ್ಯಕ್ತಿ ಕಂಠಪೂರ್ತಿ ಕುಡಿದು ಕುಡಿದು ತೂರಾಡಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದಾನೆ.ಅಲ್ಲದೇ ಬಸ್ ಟೈಯರ್ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಾರ್ವಜನಿಕರು ಕುಡುಕನನ್ನು ರಕ್ಷಣೆ ಮಾಡಿ ಹೊಸಕೋಟೆ ಪೋಲಿಸರಿಗೆ ಒಪ್ಪಿಸಿದ್ದಾರೆ.