ಮನೆ ರಾಷ್ಟ್ರೀಯ ಪ್ಯಾನ್, ಆಧಾರ್ ಲಿಂಕ್ ಮಾಡಲು ಇಂದು ಕೊನೆ ದಿನ​

ಪ್ಯಾನ್, ಆಧಾರ್ ಲಿಂಕ್ ಮಾಡಲು ಇಂದು ಕೊನೆ ದಿನ​

0

ನವದೆಹಲಿ: ಪ್ಯಾನ್, ಆಧಾರ್ ಲಿಂಕ್ ಮಾಡಲು ಇಂದು(ಜೂನ್ 30) ಕೊನೆ ದಿನವಾಗಿದೆ.

Join Our Whatsapp Group

ಒಂದು ವೇಳೆ  ಕೊನೆಯ ದಿನಾಂಕದಲ್ಲೂ ನೀವು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಇದು ಸಂಭವಿಸಿದಲ್ಲಿ, ಪ್ಯಾನ್ ಕಾರ್ಡ್ ಅನ್ನ ಭವಿಷ್ಯದಲ್ಲಿ ಎಲ್ಲಿಯೂ ಬಳಸಲು ಸಾಧ್ಯವಾಗುವುದಿಲ್ಲ.

ಪ್ಯಾನ್ ಕಾರ್ಡ್ ಅನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡದಿದ್ದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗುವುದಿಲ್ಲ. ಅಮಾನ್ಯವಾದ PAN ಕಾರ್ಡ್‌ ನಿಂದಾಗಿ ಈ ಬಾಕಿಯಿರುವ ಮರುಪಾವತಿಗಳನ್ನು ನೀಡಲಾಗುವುದಿಲ್ಲ. ದೋಷಪೂರಿತ ಆದಾಯವನ್ನು ತಿದ್ದುಪಡಿ ಮಾಡಲಾಗುವುದಿಲ್ಲ. ಪ್ಯಾನ್ ಕಾರ್ಡ್​ ಇಲ್ಲದಿರುವುದರಿಂದ ತೆರಿಗೆ ಭಾರವಾಗಿರುತ್ತದೆ.  ಹಾಗಾಗಿ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಉತ್ತಮ.

ಆನ್‌ ಲೈನ್ ನಲ್ಲಿ ಲಿಂಕ್ ಮಾಡುವು ಹೇಗೆ:-

1)ಮೊದಲ ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್ incometaxindiaefiling.gov.in ಅನ್ನು ತೆರೆಯಬೇಕು. ‘ಕ್ವಿಕ್ ಲಿಂಕ್ಸ್’ ಟ್ಯಾಬ್‌ನಲ್ಲಿ ‘ಲಿಂಕ್ ಆಧಾರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ನೇರವಾಗಿ ಆಧಾರ್ ಲಿಂಕ್ ಪುಟಕ್ಕೆ ಹೋಗಬಹುದು. 

2)ಲಿಂಕ್ ಆಧಾರ್ ಪುಟಕ್ಕೆ ಹೋದ ನಂತರ ಒಂದು ಫಾರ್ಮ್ ಕಾಣಿಸುತ್ತದೆ. ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಇತ್ಯಾದಿಗಳನ್ನು ನಮೂದಿಸಿ. ಅದರ ನಂತರ, ಅವು ಸರಿಯಾಗಿವೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಿ.

3) ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ವರ್ಷ ಮಾತ್ರ ಇದ್ದರೆ ಅದನ್ನು ನಮೂನೆಯಲ್ಲಿ ನಮೂದಿಸಬೇಕು. ನಂತರ ಕೆಳಗಿನ ಬಾಕ್ಸ್ ಅನ್ನು ಟಿಕ್ ಮಾಡಿ ಮತ್ತು ಪರಿಶೀಲನೆಗಾಗಿ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ.

ಪ್ಯಾನ್ ಕಾರ್ಡ್ ಇಲ್ಲದೆ ಕೇವಲ ಆಧಾರ್ ಕಾರ್ಡ್ ಇದ್ದರೆ ಅದನ್ನು ಸ್ಪಷ್ಟವಾಗಿ ನಮೂದಿಸಬೇಕು. “I have only Aadhaar” ಆಯ್ಕೆಯನ್ನು ಸೆಲೆಕ್ಟ್ ಮಾಡಿ. 5)ಅದರ ನಂತರ ‘ಲಿಂಕ್ ಆಧಾರ್’ ಬಟನ್ ಮೇಲೆ ಕ್ಲಿಕ್ ಮಾಡಿ. ಅಪ್ಲಿಕೇಶನ್‌ ನಲ್ಲಿ ನಮೂದಿಸಿದ ವಿವರಗಳು ಆಧಾರ್ ಡೇಟಾಬೇಸ್‌ ನಲ್ಲಿರುವ ವಿವರಗಳೊಂದಿಗೆ ಹೊಂದಾಣಿಕೆಯಾದರೆ PAN ಅನ್ನು ಲಿಂಕ್ ಮಾಡಿದಂತೆ.

ನಿಮ್ಮ ಫೋನ್‌ನಲ್ಲಿ 567678 ಅನ್ನು ಡಯಲ್ ಮಾಡುವ ಮೂಲಕ ನೀವು ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಬಹುದು. ಅಥವಾ 56161 ಗೆ SMS ಮಾಡಿ. ಇದಕ್ಕಾಗಿ ನೀವು ‘UIDPAN (ಪಾನ್ ನಂಬರ್), ಆಧಾರ್ ಸಂಖ್ಯೆ ಎಂದು ಟೈಪ್ ಮಾಡಿ ಸ್ಪೇಸ್ ನೀಡಬೇಕು. ನಂತರ ಸಂದೇಶವನ್ನು ಕಳುಹಿಸಿ. ಪ್ಯಾನ್ ಆಧಾರ್ ಲಿಂಕ್ ಸ್ಟೇಟಸ್​ ತಿಳಿಸುವ ಸಂದೇಶವು ಕಾಣಿಸಿಕೊಳ್ಳುತ್ತದೆ. ಆದರೆ ಈ ಮಾರ್ಗದಲ್ಲಿ ಜನ್ಮ ದಿನಾಂಕ ಎರಡರಲ್ಲೂ ಒಂದೇ ಆಗಿದ್ದರೆ ಮಾತ್ರ ಲಿಂಕ್ ಸಾಧ್ಯ. ಇದಲ್ಲದೆ, ನೀವು ಹೊರಗೆ ಲಿಂಕ್ ಮಾಡಬಹುದು. ಆಧಾರ್‌ ಸೇವಾ ಕೇಂದ್ರಗಳಲ್ಲಿ ಕಡ್ಡಾಯವಾಗಿ 50 ರೂ. ಪಾವತಿಸಿ ಲಿಂಕ್ ಮಾಡಿಸಿಕೊಳ್ಳಬಹುದು.