ಮನೆ ಅಪರಾಧ ಪಡಿತರ ಅಕ್ಕಿ ಅಕ್ರಮ ಸಾಗಣೆ : ಆಟೋರಿಕ್ಷಾ ವಶಕ್ಕೆ, ಚಾಲಕ ಪರಾರಿ- ದೂರು ದಾಖಲು                                       

ಪಡಿತರ ಅಕ್ಕಿ ಅಕ್ರಮ ಸಾಗಣೆ : ಆಟೋರಿಕ್ಷಾ ವಶಕ್ಕೆ, ಚಾಲಕ ಪರಾರಿ- ದೂರು ದಾಖಲು                                       

0

ಮೈಸೂರು: ಸರ್ಕಾರದಿಂದ ಬಡವರಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಅಶೋಕಪುರಂ ಠಾಣೆಯಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ 157.5 ಕೆಜಿಎಫ್ ಹಾಗೂ ಸಾಗಿಸುತ್ತಿದ್ದ ಆಟೋರಿಕ್ಷಾ ವನ್ನು ವಶಪಡಿಸಿಕೊಳ್ಳಲಾಗಿದ್ದು, ತಪಾಸಣೆ ವೇಳೆ ಚಾಲಕ ಪರಾರಿಯಾಗಿದ್ದಾನೆ.                                                    

Join Our Whatsapp Group

ಖಿಲ್ಲೆ ಮೊಹಲ್ಲಾ ಆಹಾರ ನಿರೀಕ್ಷೆಕಿ, ಜಿ. ರತ್ನಮ್ಮ ಅವರು ಕೆ.ಆರ್. ಮೊಹಲ್ಲ ಆಹಾರ ನಿರೀಕ್ಷಕರಾದ ಬಿ.ಎಸ್. ವೇಣುಗೋಪಾಲ ಅವರೊಡನೆ ಗೂಡಿ ಜೂನ್ 28ರಂದು ಸಂಜೆ ಗಸ್ತು ತಿರುಗುತ್ತಿದ್ದ ವೇಳೆ, ಜಯನಗರ 2ನೇ ಮುಖ್ಯ ರಸ್ತೆಯಲ್ಲಿ ಆಟೋರಿಕ್ಷಾದಲ್ಲಿ( ಕೆಎ12 3267) 3 ಮೂಟೆಗಳಲ್ಲಿ ಅಕ್ಕಿ ಸಾಗಿಸುತ್ತಿರುವುದನ್ನು ಕಂಡು ಬಂದಿದೆ.ಈ ಹಿನ್ನೆಲೆಯಲ್ಲಿ ಆಟವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ 157.5 ಕೆಜಿ ಪಡಿತರ ಅಕ್ಕಿ ಪತ್ತೆಯಾಗಿದೆ. ಈ ವೇಳೆ ಆಟೋ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.                     

ಪಡಿತರ ಅಕ್ಕಿ ಖರೀದಿ ಪ್ರಕರಣ ದಾಖಲು : ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಪಡಿತರ ಅಕ್ಕಿ ಖರೀದಿಸುತ್ತಿದ್ದ ಬಗ್ಗೆ ವೈರಲ್ ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಮೈಸೂರು ಹೆಬ್ಬಾಳ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಯು.ಆರ್. ರಮೇಶ್ ಪೋಲಿಸರಿಗೆ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ದೃಶ್ಯಾವಳಿ ಆಧರಿಸಿ ತಾವು ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.                                                             

ಫೇಸ್ ಬುಕ್ ನಲ್ಲಿ ಆದರ್ಶ ಅರಸ್ ಎಂಬುವವರು ಅಪ್ಲೋಡ್ ಮಾಡಿರುವ ವಿಡಿಯೋ ದೃಶ್ಯಾವಳಿ ಕೆ. ಎಲ್.  05, ಜೆ 9165 ಸಂಖ್ಯೆಯ ಪ್ರಯಾಣಿಕರ ಆಟೋದಲ್ಲಿ ಮೂವರು ಅಪ್ರಾಪ್ತರು ಪಡಿತರ ಅಕ್ಕಿ ಸಾಗಿಸುತ್ತಿರುವುದು ಸೆರೆಯಾಗಿದೆ. ಈ ಬಾಲಕರನ್ನು ವಿಡಿಯೋ ಮಾಡಿದ ವ್ಯಕ್ತಿ ಪ್ರಶ್ನಿಸಿದಾಗ ಮೂವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು ಮತ್ತೋರ್ವ ತನಗೆ 19 ವರ್ಷ ವಯಸ್ಸಾಗಿದೆ ಎಂದು ಹೇಳಿದ್ದಾನೆ. ಈ ಬಾಲಕರು ಉದಯ ಗಿರಿಯ ಸಾಜಿತ್ ಎಂಬಾತನ ಸೂಚನೆ ಮೇರೆಗೆ ಮೈಸೂರಿನ ಹೆಬ್ಬಾಳ್ ಇನ್ನಿತರ ಕಡೆಗಳಲ್ಲಿ ಪಡಿತರ ಅಕ್ಕಿಯನ್ನು ಕೆ.ಜಿ.ಗೆ 13 ರೂ.ಗಳಂತೆ ಖರೀದಿಸಿ ಆತನಿಗೆ ನೀಡುತ್ತಿರುವುದಾಗಿಯೂ, ಇದಕ್ಕೆ ಪ್ರತಿಯಾಗಿ ಆತ ತಮಗೆ 200ರೂ. ನಿಂದ 300ರೂ. ನೀಡುತ್ತಿರುವುದಾಗಿಯು ಬಾಲಕರು ಹೇಳಿದ್ದಾರೆ. ಎಂದು ಪೊಲೀಸರಿಗೆ ನೀಡಿದ ದೂರನಲ್ಲಿ ತಿಳಿಸಲಾಗಿದೆ.                     

ಈ ವಿಡಿಯೋದಲ್ಲಿ ಸರಿಯಾಗಿದ್ದ ಆಟೋರಿಕ್ಷಾ ಮಾಲೀಕರ ವಿವರಗಳನ್ನು ಆನ್ಲೈನ್ನಲ್ಲಿ  ಪರಿಶೀಲಿಸಲಾಗಿ, ಅದರ ಮಾಲೀಕ ಸತ್ಯನಗರದ ಸೈಯದ್ ಅಕ್ರಮ್ ಎಂಬುದು ತಿಳಿದು ಬಂದಿದೆ. ಎಂದು ದೂರದಲ್ಲಿ ತಿಳಿಸಿರುವ ರಮೇಶ ಅವರು ಪಡಿತರ ಚೀಟಿ ದಾರದಿಂದ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ ಅದನ್ನು ಕಾಳ ಸಂತೇಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಎಂದು ಆರೋಪಿಸಿದ್ದು. ಆಟೋಮಾಲಿಕ ಸಯ್ಯದ್ ಅಕ್ರಮ್ ಮತ್ತು ಅಪ್ರಾಪ್ತ ಬಾಲಕರಿಂದ ಪಡಿತರ ಅಕ್ಕಿ ಖರೀದಿಸುತ್ತಿದ್ದ ಸಾಜಿದ್ ಇನ್ನಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗತ್ಯ ವಸ್ತುಗಳ ಕಾಯ್ದೆಯಡಿ ಸಲ್ಲಿಸಿರುವ ದೂರನ್ನು ದಾಖಲಿಸಿ ಕೊಂಡು ಹೆಬ್ಬಳ್ ಠಣೆ ಪೋಲಿಸ್ ತನಿಖೆ ಮುಂದುವರಿಸಿದ್ದಾರೆ .