ಮನೆ ರಾಜ್ಯ ಮೈಸೂರು-ಬೆಂಗಳೂರು ಹೆದ್ದಾರಿ: ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ- ಎನ್.ಚಲುವರಾಯಸ್ವಾಮಿ

ಮೈಸೂರು-ಬೆಂಗಳೂರು ಹೆದ್ದಾರಿ: ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ- ಎನ್.ಚಲುವರಾಯಸ್ವಾಮಿ

0

ಮೈಸೂರು: ಕೇಂದ್ರ ಸರ್ಕಾರ ಎಲ್ಲಿಂದಲೋ ಹಣ ತಂದಿರುವುದಲ್ಲ. ರಾಜ್ಯ ಸರ್ಕಾರಗಳು ಕಟ್ಟುವ ತೆರಿಗೆಯಿಂದಲೇ ಅಭಿವೃದ್ಧಿ ಕಾರ್ಯ ಮಾಡುತ್ತದೆ. ಹೀಗಿದ್ದರೂ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಕಾಮಗಾರಿ ಪೂರ್ಣವಾಗದೆ ಟೋಲ್ ಸಂಗ್ರಹ ಬೇಡ ಅಂತ ಹೇಳಿದ್ದೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

Join Our Whatsapp Group

ನಗರದಲ್ಲಿ ಮೈಸೂರು ಬೆಂಗಳೂರು ಹೆದ್ದಾರಿ ಎರಡನೇ‌ ಟೋಲ್ ಸಂಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ,  ಕೇಂದ್ರ ಸರ್ಕಾರದ ಉದ್ಧಟತನದ ನಡವಳಿಕೆ. ಜನರಿಗೆ ಟೋಲ್ ಕಟ್ಟದಂತೆ ಕರೆ ನೀಡಲಾಗಿದೆ. ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನೇರವಾಗಿ ಪ್ರತಿಭಟನೆಗೆ ಹೋಗಲ್ಲ ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಕೇಂದ್ರ ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.

ಟೋಲ್ ಸಮಸ್ಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ನಮ್ಮ ಶಾಸಕರು ಮುಖ್ಯ ಕಾರ್ಯದರ್ಶಿ ಭೇಟಿ ಮಾಡಿ ಮಾತನಾಡಿದ್ದಾರೆ. ಎಡಿಜಿಪಿ ಅಲೋಕ್​ಕುಮಾರ್ ಸ್ಥಳ ಪರಿಶೀಲನೆ ಮಾಡಿದ್ದಾರೆ ಎಲ್ಲಾ ಸಮಸ್ಯೆ ಸರಿ ಮಾಡಿಕೊಂಡು ಟೋಲ್ ಸಂಗ್ರಹಿಸಿದರೆ ನಮ್ಮ ಅಡ್ಡಿ ಇಲ್ಲ ಶೀಘ್ರದಲ್ಲೇ ಇದಕ್ಕೊಂದು ಪರಿಹಾರ ಕಂಡು ಹಿಡಿಯುತ್ತೇವೆ ಎಂದರು.

ಮೊದಲು ಸಿಟಿ.ರವಿ ತಮ್ಮ ಪಂಚೆ ಸರಿ ಮಾಡಿಕೊಳ್ಳಲಿ ಎಂದು ಸಿದ್ದು, ಡಿಕೆಶಿ ಪಂಚೆ ಪಂಚೆ ಬಗ್ಗೆ ಮಾತಾಡಿದ  ಅವರು, ಚುನಾವಣೆಯಲ್ಲಿ ಹೀಗೆ ಮಾತನಾಡಿ ಮಾತನಾಡಿ ಜನ ಉತ್ತರ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಉತ್ತರವೇ ಅಂತಿಮ 65 ಸ್ಥಾನಕ್ಕೆ ಕುಸಿದಿರುವ ಅವರಲ್ಲಿ ಕಚ್ಚಾಟ ಇಲ್ವಾ ? ನಮ್ಮಲ್ಲಿ ಡಿಕೆಶಿ, ಸಿದ್ದರಾಮಯ್ಯ ಏನು ಕಿತ್ತಾಡುತ್ತಿದ್ದಾರಾ ? ಸುಮ್ಮನೇ ಅವರೇ ಕಲ್ಪಿಸಿಕೊಂಡು ಮಾತಾನಾಡುತ್ತಾರೆ ಮನಸಿಗೆ ಬಂದಂತೆ ಮಾತನಾಡಿದವರನ್ನು ಜನರು ಉತ್ತರ ಕೊಟ್ಟಿದ್ದಾರೆ ಅದರಲ್ಲಿ ಒಬ್ಬರು ಇಬ್ಬರು ಉಳಿದುಕೊಂಡಿದ್ದಾರೆ ಅಷ್ಟೇ ಜನ ಈಗ ಉತ್ತರ ಕೊಟ್ಟಿದ್ದಾರೆ ನಮ್ಮ ಪಂಚೆ ಸರಿ ಮಾಡುವುದು ಬೇಡ ಮೊದಲು ಅವರ ಪಂಚೆ ಸರಿ ಮಾಡಿಕೊಳ್ಳುವುದಕ್ಕೆ ಹೇಳಿ ಎಂದು ವ್ಯಂಗ್ಯವಾಡಿದರು.

ದಿನ ಬೆಳಗಾದರೆ ಜೆಡಿಎಸ್ -ಬಿಜೆಪಿ ನಿಮ್ಮ ಮುಂದೆ ಏನೇನೋ ಮಾತನಾಡಿ ಪ್ರಚಾರ ತೆಗೆದುಕೊಳ್ಳೋಕೆ ನೋಡುತ್ತಾರೆ. ಗ್ಯಾರಂಟಿ ಯೋಜ‌ನೆಗಳು ಜಾರಿ ಆಗುವುದೇ ಇಲ್ಲ ಅಂತ ಎರಡು ಪಕ್ಷದವರು ಹೋರಾಟ ಮಾಡಿದರು. ದೇಶದ‌ ಇತಿಹಾಸದಲ್ಲೇ ಯಾವುದೇ ಸರ್ಕಾರ ಈ ರೀತಿ ಯೋಜನೆ ಜಾರಿ ಮಾಡಿದೆಯಾ? ನಾವು ಅದನ್ನು ಜಾರಿ ಮಾಡಿದ್ದೇವೆ ಎಂದರು.

ಜುಲೈ 5 ರಿಂದ ಯಡಿಯೂರಪ್ಪ ಧರಣಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಮಾತ್ರ ಅಲ್ಲ ಬೊಮ್ಮಾಯಿ, ಸಾಮ್ರಾಟ್ ಅಶೋಕ್, ಸಿಟಿ.ರವಿ ಎಲ್ಲಾ ಬಂದು ಹೋರಾಟ ಮಾಡಲಿ ಎಂದರು.