ಮನೆ ಸುದ್ದಿ ಜಾಲ ಸರ್ಕಾರದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ-ಡಾ. ಸೆಲ್ವಕುಮಾರ್

ಸರ್ಕಾರದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ-ಡಾ. ಸೆಲ್ವಕುಮಾರ್

0

ಮೈಸೂರು: ಸಕಾರದ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಗೆ ತಲುಪಿಸಿ ಹಾಗೂ ಸರ್ಕಾರದ ಅನುದಾನವನ್ನು ನಿರ್ದಿಷ್ಟ ಕಾಮಗಾರಿಗಳಿಗೆ ಬಳಸಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತ್ನ ಆಡಳಿತಾಧಿಕಾರಿಗಳಾದ ಡಾ. ಎಸ್ ಸೆಲ್ವಕುಮಾರ್ ಅವರು ತಿಳಿಸಿದರು.

Join Our Whatsapp Group

ಜಿಲ್ಲಾ ಪಂಚಾಯತ್ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಳೆ ವಿಳಂಬವಾಗುತ್ತಿರುವುದರಿOದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿ, 2023 ರ ಜೂನ್ ಮಾಹೆವರಗೆ ವಾಡಿಕೆ ಮಳೆ 290.1 ಮಿ.ಮಿ ನಷ್ಟಿದ್ದು 267.3 ಮಳೆಯಾಗಿರುತ್ತದೆ. ಶೇ. 8 ರಷ್ಟು ಮಳೆ ಕೊರತೆಯಾಗಿದೆ. ಅಗತ್ಯದಷ್ಟು ಬಿತ್ತನೆ ಬೀಜ ಲಭ್ಯವಿದ್ದು ಜ್ಯೋತಿ ತಳಿಯ ಭತ್ತಕ್ಕೆ ಹೆಚ್ಚಿನ ಬೇಡಿಕೆ ಇದೆ. ವರ್ತಕರು ಈ ಭತ್ತವನ್ನು ಹೊಲಕ್ಕೆ ಬಂದು ಖರೀದಿಸುತ್ತಾರೆ, ಈ ಬಾರಿ ಕ್ಯೂಆರ್ಕೋಡ್ ಬಳಸಿ ಬೀಜ ವಿತರಣೆ ಮಾಡುವುದರಿಂದ ಪುನರಾವರ್ತನೆ ಆಗುವುದು ತಪ್ಪುವುದಲ್ಲದೆ ಅಗತ್ಯ ಇರುವವರಿಗಷ್ಟೇ ಬಿತ್ತನೆ ಬೀಜ ಸಿಗುತ್ತವೆ

ರಸಗೊಬ್ಬರ ಪ್ರಸ್ತುತ ಜಿಲ್ಲೆಯಲ್ಲಿ 115220 ಟನ್ ಲಭ್ಯವಿದ್ದು, ಉಳಿಕೆ ದಾಸ್ತಾನು ಮುಂದಿನ ದಿನಗಳಲ್ಲಿ ಬರುವುದರಿಂದ ರಸಗೊಬ್ಬರದ ಯಾವುದೇ ಕೊರತೆ ಬರುವುದಿಲ್ಲ ಎಂದರು.

ಜಿಲ್ಲಾಧಿಕಾರಿಗಳು ಮಾತನಾಡಿ, ಎಲ್ಲಾ ತಹಶೀಲ್ದಾರರುಗಳಿಗೂ ತಾಲೂಕು ಹಂತದಲ್ಲಿ ರೈತ ಮುಖಂಡರ ಸಭೆ ನಡೆಸಿ ಅವರಿಗೆ ಬೇಕಾದ ತಳಿಯ ಬೀಜಗಳನ್ನು ವಿತರಿಸಲು ಸೂಚಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ರೈತರಿಗೆ ವಿತರಿಸುವ ಬೀಜಗಳು ಉತ್ಕçಷ್ಟ ಗುಣಮಟ್ಟ, ಮೊಳಕೆಯೊಡೆಯುವ ಪ್ರಮಾಣದ ಬಗೆಗೆ ಕೃಷಿ ಇಲಾಖೆಯವರು ಖಾತರಿ ಒದಗಿಸಬೇಕೆಂದು ಸೂಚಿಸಿದ್ದಾರೆ ಎಂದರು.

ಡಿಡಿಪಿಐ ಅವರು ಸಭೆಗೆ ಮಾಹಿತಿ ನೀಡಿ, ಈ ಸಾಲಿನ ಪಠ್ಯಪುಸ್ತಕ ಹಾಗೂ ಸಮವಸ್ತç ವಿತರಣೆಯಾಗಿವೆ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಫಲಿತಾಂಶ 13 ನೇ ಸ್ಥಾನದಲ್ಲಿದೆ ಎಂದಾಗ ಜಿಲ್ಲಾಧಿಕಾರಿಗಳು ಫಲಿತಾಂಶ ಉತ್ತಮಗೊಳಿಸಲು ಅನುತ್ತೀರ್ಣರಾದ ಮಕ್ಕಳಿಗೆ ಭೋಧನೆ ಮಾಡಿದ್ದ ಶಿಕ್ಷಕರಿಗೂ ತರಬೇತಿ ನೀಡುವುದರಿಂದ ಅವರೂ ಉತ್ತಮಗೊಂಡು ಮುಂದಿನ ದಿನಗಳಲ್ಲಿ ವಿಧ್ಯಾರ್ಥಿಗಳಿಗೆ ಪಾಠಗಳನ್ನು ಹೇಳಿಕೊಡಲು ಅನುಕೂಲವಾಗುತ್ತದೆ ಎಂದರು.

ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿ, ಜಾನುವಾರುಗಳಿಗೆ 30 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ. ಜಿಲ್ಲೆಯಲ್ಲಿ 5 ಲಕ್ಷ 14 ಸಾವಿರ ಜಾನುವಾರುಗಳಿದ್ದು, ಈ ಪೈಕಿ ಮೇಕೆ ಕುರಿಗಳಿಗೆ ವಾಕ್ಸಿನೇಶನ್ ಆಗಿದೆ. ಚರ್ಮಗಂಟು ರೋಗವೂ ಕಡಿಮೆಯಾಗಿದೆ. ಚರ್ಮಗಂಟು ರೋಗದಿಂದ ಬಳಲುತ್ತಿದ್ದ 24 ಜಾನುವಾರುಗಳ ಪೈಕೆ 10 ಗುಣವಾಗಿವೆ. ವಿವಿಧ ಖಾಯಿಲೆಗಳಿಂದ 329 ಜಾನುವಾರುಗಳು ಮರಣ ಹೊಂದಿದ್ದು, 124 ಜಾನುವಾರುಗಳ ಪರಿಹಾರ ಬರಬೇಕಿದೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿ, ಬೋರ್ವೆಲ್ ನೀರನ್ನು ಭಾಗಶಃ ಅವಲಂಬಿಸಿರುವ ನಗರ ಸ್ಥಳೀಯ ಸಂಸ್ಥೆಗಳಾದ ಬೋಗಾದಿ ರಮ್ಮನ ಹಳ್ಳಿ, ಕಡಕೋಳ, ಶ್ರೀರಾಂಪುರ ಪಟ್ಟಣ ಪಂಚಾಯಿತಿಗಳಿಗೆ ಮತ್ತು ಯಾವುದೇ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಫೇಸ್ ವಾಟರ್ ಕೊರತೆ ಇರುವುದಿಲ್ಲ. ಲಭ್ಯವಿರುವ ನೀರನ್ನು ಇನ್ನೂ 15 ದಿನಗಳವರೆಗೆ ಬಳಸಬಹುದು. ಇನ್ನು 15 ದಿನಗಳ ಕಾಲ ಮಳೆ ಬಾರದೆ ಇದ್ದಲ್ಲಿ ಬೋರ್ವೆಲ್ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸಮಸ್ಯೆ ಎದುರಾಗಬಹುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಟ್ಯಾಂಕರ್ಗಳ ಪೂರೈಕೆ ಇರುವುದಿಲ್ಲ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 648 ಬೋರ್ವೆಲ್ಗಳಿದ್ದು ನೀರಿನ ಪ್ರಮಾಣ ಕಡಿಮೆಯಾದಲ್ಲಿ, ಬಾಡಿಗೆ ಸ್ಥಳೀಯ ಸಂಸ್ಥೆಗಳಿAದ ಪಡೆದು ಕ್ರಮವಹಿಸಲಾಗುವುದು. ಇನ್ನು 15 ದಿನಗಳ ಕಾಲ ಮಳೆ ಬಾರದೆ ಇದ್ದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು. ಆದ್ದರಿಂದ ಕೆಆರ್ಎಸ್ ಅಣೆಕಟ್ಟು ಮತ್ತು ಕಬಿನಿ ಅಣೆಕಟ್ಟು ನೀರು ಬಿಡುಗಡೆ ಮನವಿ ಮಾಡಲಾಗುವುದು ಎಂದರು. ಲೋಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿ, ಹುಣಸೂರು ತಾಲೂಕಿನ ಗ್ರಾಮೀಣ ಭಾಗದ ಸಾಕ್ಷರತಾ ಪ್ರಮಾಣವು ಶೇ.64ರಷ್ಟಿದ್ದು, ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನಸಂಖ್ಯೆ ಹೆಚ್ಚಾಗಿರುವುದು. ಹುಣಸೂರು ತಾಲೂಕಿನ ನೇರಳಕುಪ್ಪೆ, ಕರಣಕೊಪ್ಪೆ ಹಾಗೂ ಕಟ್ಟೆಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಾಡಿ ಜನರಿಗೆ 2023-24ನೇ ಸಾಲಿಗೆ ಸಾಕ್ಷರತಾ ಕಾರ್ಯಕ್ರಮದ ಮೂಲಕ ನವ ಸಾಕ್ಷರನ್ನಾಗಿ ಮಾಡಲಾಗುವುದು ಎಂದರು.

ಜಲ್ ಜೀವನ್ ಮಿಷನ್ ಯೋಜನೆಯ ಅಧಿಕಾರಿಗಳು ಮಾಹಿತಿ ನೀಡಿ, ಜಿಲ್ಲೆಯಲ್ಲಿ ಮುಂಬರುವ 15 ದಿನಗಳಲ್ಲಿ ಮಳೆಬಾರದೇ ಇದ್ದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಂಭವವಿರುವ ಕಾರಣ 1 ಕೋಟಿ ಅನುದಾನ ಮಂಜುರಾಗಿದ್ದು, ಸ್ಥಳ ಪರಿಶೀಲನೆ ನಡೆಸಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ತುರ್ತು ಕುಡಿಯುವ ನೀರಿನ ಕಾಮಗಾರಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಹಿತಿ ನೀಡಿ ನಗರದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಭವನ ಕಾಮಗಾರಿಗೆ 22 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳಲು 23 ಕೋಟಿ ಅನುದಾನ ಬೇಕಾಗಿದೆ ಎಂದರು.

ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿ, ಜಿಲ್ಲೆಯಲ್ಲಿ 12 ನರ್ಸರಿಗಳಿದ್ದು, 5 ಲಕ್ಷ 52 ಸಾವಿರ ಗಿಡ ಬೆಳೆಸಲಾಗಿದೆ. ಹೆಬ್ಬೇವು ಮಹಾಗನಿ ಟೀಕ್ ಮರಗಳಿಗೆ ಬೇಡಿಕೆ ಇದ್ದು 1387 ರೈತರು ಫಲಾನುಭವಿಗಳಾಗಿದ್ದಾರೆ ಎಂದರು.

ಪರಿಶಿಷ್ಟ ವರ್ಗಗಳ ಇಲಾಖೆಯಲ್ಲಿ ಕಾನೂನು ಪದವೀಧರರಿಗೆ ಪ್ರತಿ ತಿಂಗಳು 10 ಸಾವಿರದಂತೆ 20 ಕಾನೂನು ಪದವೀಧರರಿಗೆ 24 ತಿಂಗಳು ಶಿಶ್ಯವೇತನ ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯತ್ರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮಿಕಾಂತ ರೆಡ್ಡಿ, ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಮ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.