ಮನೆ ಸುದ್ದಿ ಜಾಲ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ – ದಿನೇಶ್

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ – ದಿನೇಶ್

0

ಮೈಸೂರು: ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳಸಬೇಕು ಎಂದು ಮೂಡಾ ಆಯುಕ್ತರಾದ ದಿನೇಶ್ ಅವರು ತಿಳಿಸಿದರು.

Join Our Whatsapp Group

ವನ ಮಹೋತ್ಸವ ಅಂಗವಾಗಿ ಮೂಡಾ ಕಚೇರಿಯ ಆವರಣದಲ್ಲಿ ಗಿಡ ನೀಡುವ ಮೂಲಕ ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು. ಪರಸರ ಇದ್ದರೆ ಮಾತ್ರ ನಾವು ಬದುಕಲು ಸಾದ್ಯ. ಉತ್ತಮ ಮಳೆ ಬೆಳೆ ಆಗಲು ಪರಿಸರ ಮುಖ್ಯ. ಪ್ರತಿಯೊಬ್ಬರೂ ಕನಿಷ್ಟ 5 ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಪ್ರಜ್ಞೆ ಮೆರೆಯಬೇಕು ಎಂದು ಅವರು ಮನವಿ ಮಾಡಿದರು.

ಮೂಡಾ ನಗರ ಯೋಜನಾ ಸದಸ್ಯರಾದ ಶೇಷು ಅವರು ಮಾತನಾಡಿ ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಉತ್ತಮ ಗಾಳಿ ದೊರೆಯುತ್ತದೆ. ವಾತಾವರಣದ ಉಷ್ಣತೆ ಕಡಿಮೆ ಮಾಡುವಲ್ಲಿ ಪರಿಸರದ ಪಾತ್ರ ಬಹಳ ಮುಖ್ಯ. ಕಾಡುಗಳು ಹಾಗೂ ಕಾಡಿನಲ್ಲಿರುವ ಪ್ರಾಣಿಗಳನ್ನು ಉಳಿಸಿ ಸಂರಕ್ಷಿಸಬೇಕು ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ ಕೆ ಹರೀಶ್ ಅವರು ಮಾತನಾಡಿ ಭೂಮಿಯ ಮೇಲೆ ಶೇಕಡಾ 33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ನಮ್ಮಲ್ಲಿ ಕಡಿಮೆ ಇದೆ. ಪ್ರಕೃತಿಯ ಸಮತೋಲನ ಕಾಪಾಡಲು ಅರಣ್ಯ ಪ್ರದೇಶ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಪರಿಸರ ಸಂರಕ್ಷಣೆಯಿOದ ಜಾಗತಿಕ ತಾಪಮಾನ ಹೆಚ್ಚಳ ಆಗದಂತೆ ಮಾಡಬಹುದಾಗಿದೆ ಎಂದು ತಿಳಿಸಿದರು.