ಮನೆ ರಾಷ್ಟ್ರೀಯ ಕಾರ್ಗಿಲ್’ ​ನಲ್ಲಿ 4.7 ತೀವ್ರತೆಯ ಭೂಕಂಪ

ಕಾರ್ಗಿಲ್’ ​ನಲ್ಲಿ 4.7 ತೀವ್ರತೆಯ ಭೂಕಂಪ

0

ಕಾರ್ಗಿಲ್: ​ ಕಾರ್ಗಿಲ್’ ​ನಲ್ಲಿ ಇಂದು ಬೆಳಗ್ಗೆ 7.30ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಲಡಾಖ್ ​ನ ಉತ್ತರಕ್ಕೆ 401 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.

Join Our Whatsapp Group

ಜೂನ್ 17ರಂದು ಶನಿವಾರ ಮಧ್ಯಾಹ್ನ 2.03ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 3.0 ತೀವ್ರತೆಯ ಭೂಕಂಪದ ನಂತರ ಮತ್ತೆ ಕಂಪನದ ಅನುಭವವಾಗಿತ್ತು.

ಮಧ್ಯಾಹ್ನ 2.03 ಗಂಟೆಗೆ ಸಂಭವಿಸಿದ 3.0 ತೀವ್ರತೆಯ ಕಂಪನದ ಕೇಂದ್ರಬಿಂದು ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಗುಡ್ಡಗಾಡು ಜಿಲ್ಲೆಯಲ್ಲಿತ್ತು.

ಭೂಕಂಪದ ಆಳವು 33.31 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 75.19 ಡಿಗ್ರಿ ಪೂರ್ವ ರೇಖಾಂಶದಲ್ಲಿ 5 ಕಿ.ಮೀ ಆಳದಲ್ಲಿತ್ತು. ಎರಡನೇ ಭೂ ಕಂಪನವು ರಾತ್ರಿ 9.44 ರ ಸುಮಾರಿಗೆ ಲೇಹ್, ಲಡ್ಡಾಖ್‌ ನ ಈಶಾನ್ಯಕ್ಕೆ 4.5 ರ ತೀವ್ರತೆಯೊಂದಿಗೆ 271 ಕಿ.ಮೀ ದೂರದಲ್ಲಿ ಸಂಭವಿಸಿತ್ತು.