ಮನೆ ಯೋಗಾಸನ ಉತ್ಥಿತ ಸಮಕೋನಾಸನ

ಉತ್ಥಿತ ಸಮಕೋನಾಸನ

0

ಉತ್ಥಿತ ಸಮಕೋನಾಸನಕ್ಕೆ ತೋಲಾಸನವೆಂಬ ಹೆಸರೂ ಇದೆ.

Join Our Whatsapp Group

ಮಾಡುವ ಕ್ರಮ

1)    ಯೋಗಾಭ್ಯಾಸಿಯೂ ಮೊದಲು ತನ್ನ ಎರಡೂ ಕಾಲುಗಳನ್ನು ನೇರವಾಗಿ  ಮುಂದಕ್ಕೆ ಚಾಚಿ, ಎದೆಯನ್ನು ಎತ್ತಿ, ಬೆನ್ನು ಬಾಗಿಸದೆ ನೇರವಾಗಿ ನೆಲದ ಮೇಲೆ ಕುಳಿತುಕೊಳ್ಳಬೇಕು.

2)   ಅನಂತರ ಎರಡೂ ಕೈಗಳ ಅಂಗೈಗಳನ್ನು ಶರೀರದ ಪಕ್ಕದಲ್ಲಿ ತೊಡೆಗಳ ಮೂಲದಲ್ಲಿ ನೆಲದ ಮೇಲೆ ಊರಬೇಕು.

3)    ಮೊಳಕೈ ಬಾಗಿಸದೇ, ಎರಡು ಕೈಗಳ ಮೇಲೆ ಇಡೀ ಶರೀರದ ಭಾರವನ್ನು  ಸಮನಾಗಿ ಹೇರಿ, ನೆಲದದಿಂದ ಮೇಲಕ್ಕೆ ಶರೀರವನ್ನು ನಿಧಾನವಾಗಿ ಎತ್ತಬೇಕು. ಒಮ್ಮೆ ಚಿತ್ರದಲ್ಲಿರುವ ಸ್ಥಿತಿಯನ್ನು ತಲುಪಿದ ನಂತರ ಕಾಲುಗಳನ್ನು ಭೂಮಿಗೆ ಸಮಾನಾಂತರವಾಗಿ ಇರಿಸುತ್ತ ಹೆಚ್ಚು ಗಮನಕೊಡಬೇಕು. ಉತ್ಥಿತ ಸಮಕೋನಾಸನದ ಸ್ಥಿತಿಯಲ್ಲಿ 5-6 ನಿಮಿಷಗಳ ತನಕ ಇರಬಹುದು. ಕಾಲುಗಳನ್ನು ಮಡಿಸಿ, ಪದ್ಮಾಸನದಲ್ಲಿ ಕುಳಿತು ಶರೀರವನ್ನು ಮೇಲಕ್ಕೆತ್ತುವುದು ಸುಲಭ. ಆದರೆ ಕಾಲುಗಳನ್ನು ಮುಂದಕ್ಕೆ ಚಾಚಿದ್ದಾಗ ಶರೀರವನ್ನು ನೆಲದಿಂದ ಮೇಲಕ್ಕೆ ಎತ್ತುವುದು ಕಠಿಣವಾದುದು.

ಲಾಭಗಳು:

ಉತ್ಥಿತ ಸಮಕೋನಾಸನದ ಅಭ್ಯಾಸದಿಂದ ಉದರದ ಸ್ನಾಯುಗಳು ಬಲಶಾಲಿಯಾಗುವುವು. ರಟ್ಟೆಗಳಿಗೆ ಹೆಚ್ಚು ವ್ಯಾಯಾಮ ದೊರೆಯುವುದು. ಎದೆಯ ಅನೇಕ ದೋಷಗಳು ದೂರವಾಗುವವು.