ಮನೆ ಆಟೋ ಮೊಬೈಲ್ ವಿನೂತನ ಹೋಂಡಾ ಎಲಿವೇಟ್ ಎಸ್’ಯುವಿ ಬುಕಿಂಗ್ ಶುರು

ವಿನೂತನ ಹೋಂಡಾ ಎಲಿವೇಟ್ ಎಸ್’ಯುವಿ ಬುಕಿಂಗ್ ಶುರು

0

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಎಲಿವೇಟ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್ ಯುವಿಯನ್ನು ಭಾರತದಲ್ಲಿ ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಇದೀಗ ಹೊಸ ಕಾರು ಖರೀದಿಗಾಗಿ ರೂ. 25 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕಿಂಗ್ ಆರಂಭಿಸಿದೆ.

Join Our Whatsapp Group

ಹೋಂಡಾ ಇಂಡಿಯಾ ಕಂಪನಿಯು ಎಲಿವೇಟ್ ಪ್ರೀಮಿಯಂ ಕಂಪ್ಯಾಕ್ಟ್ ಎಸ್ ಯುವಿಯನ್ನು ಭಾರೀ ನೀರಿಕ್ಷೆಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಹಲವಾರು ವಿಶೇಷತೆಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಏಪ್ರಿಲ್ 1ರಿಂದ ಜಾರಿಯಾಗಿರುವ ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳ ಪರಿಣಾಮ ಪ್ರಮುಖ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ಹೋಂಡಾ ಕಂಪನಿಯು ಇದೀಗ ಸಂಪೂರ್ಣ ಹೊಸ ಕಾರು ಮಾದರಿಗಳ ಮೇಲೆ ಗಮನಹರಿಸಿದ್ದು, ಎಲಿವೇಟ್ ಕಾರನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹಲವು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಅಭಿವೃದ್ದಿಗೊಳಿಸಿದೆ.

ಹೊಸ ಎಲಿವೇಟ್ ಕಂಪ್ಯಾಕ್ಟ್ ಎಸ್ ಯುವಿ ಕಾರು ನ್ಯೂ ಜನರೇಷನ್ ಸಿಆರ್-ವಿ ಮತ್ತು ಡಬ್ಲ್ಯುಆರ್-ವಿ ಕಾರುಗಳ ವಿನ್ಯಾಸ ಪ್ರೇರಣೆ ಹೊಂದಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗುನ್, ಕಿಯಾ ಸೆಲ್ಟೊಸ್, ಟೊಯೊಟಾ ಹೈರೈಡರ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಕಂಪ್ಯಾಕ್ಟ್ ಎಸ್ ಯುವಿ ವೈಶಿಷ್ಟ್ಯತೆಯನ್ನು ಹೊಂದಿರುವ ಹೊಸ ಎಲಿವೇಟ್ ಕಾರು ಮುಂಭಾಗದಲ್ಲಿ ದೊಡ್ಡದಾದ ಕ್ರೊಮ್ ಸಿಗ್ನೆಚರ್ ಗ್ರಿಲ್, ಬೋಲ್ಡ್ ಏರ್ ಡ್ಯಾಮ್, ಆಲ್ ಎಲ್ ಇಡಿ ಲೈಟಿಂಗ್ಸ್, ಫ್ಲಕ್ಸ್ ಸ್ಕೀಡ್ ಪ್ಲೇಟ್, 17 ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿದ್ದು, ಹೊಸ ಕಾರಿನ ಒಳಭಾಗವು ಕೂಡಾ ಆಕರ್ಷಕ ವಿನ್ಯಾಸದೊಂದಿಗೆ 10.25 ಇಂಚಿನ ಇನ್ಪೊಟೈನ್ ಮೆಂಟ್ ಸಿಸ್ಟಂ, ಸಿಂಗಲ್ ಪೇನ್ ಪನೊರಮಿಕ್ ಸನ್ ರೂಪ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.

ಈ ಮೂಲಕ ಹೊಸ ಕಾರು 4,312 ಎಂಎಂ ಉದ್ದ, 1,650 ಎಂಎಂ ಎತ್ತರ ಮತ್ತು 220 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಸದ್ಯಕ್ಕೆ ಇದು ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ವೆರಿಯೆಂಟ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹೊಸ ಕಾರು ಪ್ರಮುಖ ನಾಲ್ಕು ವೆರಿಯೆಂಟ್ ಹೊಂದಬಹುದಾಗಿದ್ದು, ಇದರಲ್ಲಿ 1.5 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಆಯ್ಕೆ ಜೋಡಿಸಬಹುದಾಗಿದೆ. ಇದು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದ್ದು, ಗರಿಷ್ಠ 121 ಹಾರ್ಸ್  ಪವರ್ ಉತ್ಪಾದನೆ ಮಾಡುತ್ತದೆ.

ಜೊತೆಗೆ ಹೊಸ ಕಾರಿನಲ್ಲಿ ಹೋಂಡಾ ಕಂಪನಿಯ ಸಿಟಿ ಸೆಡಾನ್ ಮಾದರಿಯಲ್ಲಿರುವಂತೆ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಸಹ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಸದ್ಯಕ್ಕೆ ಸಾಮಾನ್ಯ ಪೆಟ್ರೋಲ್ ಆವೃತ್ತಿಯೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ಹೊಸ ಕಾರಿನಲ್ಲಿ ಹೋಂಡಾ ಕಂಪನಿಯು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಜೋಡಣೆ ಮಾಡಿದ್ದು,, ಇದರಲ್ಲಿ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಸೇರಿದಂತೆ, ಹಿಲ್ ಸ್ಟಾರ್ಟ್ ಅಸಿಸ್ಟ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಟಾಪ್ ಎಂಡ್ ಮಾದರಿಗಳಲ್ಲಿ ಎಡಿಎಎಸ್(ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ) ಸೂಟ್ ಸಹ ಜೋಡಣೆ ಮಾಡಲಾಗಿದೆ. ಇದರೊಂದಿಗೆ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19 ಲಕ್ಷ ಬೆಲೆ ಪಡೆದುಕೊಳ್ಳಬಹುದಾಗಿದೆ.