ಮನೆ ರಾಜಕೀಯ ಮುಸ್ಕಾನ್  ಹೇಳಿಕೆಗೆ ಆಲ್ ಖೈದಾ ಬೆಂಬಲ ವಿಚಾರ: ತನಿಖೆಗೆ ಸೂಚಿಸಿದ್ದೇನೆ ಎಂದ ಸಿಎಂ ಬೊಮ್ಮಾಯಿ

ಮುಸ್ಕಾನ್  ಹೇಳಿಕೆಗೆ ಆಲ್ ಖೈದಾ ಬೆಂಬಲ ವಿಚಾರ: ತನಿಖೆಗೆ ಸೂಚಿಸಿದ್ದೇನೆ ಎಂದ ಸಿಎಂ ಬೊಮ್ಮಾಯಿ

0

ಮೈಸೂರು: ಮಂಡ್ಯದ ಯುವತಿ ಮಸ್ಕಾನ್  ಅಲ್ಲಾ ಹು ಅಕ್ಬರ್ ಘೋಷಣೆಗೆ ಅಲ್ ಖೈದಾ ಮೆಚ್ಚುಗೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ಆರೋಪಿಸಿದ್ಧ ಮಾಜಿ ಸಿಎಂ ಸಿದ್ದರಾಮಯ್ಯಗೆ  ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ಅಲ್ ಖೈದಾ ಹೇಳಿಕೆ ನೀಡಿದ್ರೆ ಸಿದ್ದರಾಮಯ್ಯಗೆ ಗಲಿಬಿಲಿ ಯಾಕೆ? ಸಿದ್ದರಾಮಯ್ಯ ಹೇಳಿಕೆ ಆಧಾರವಿಲ್ಲದ, ಹೋಲಿಕೆಯಾಗದ ಹೇಳಿಕೆ. ಈ ನೆಲದ ಮತ್ತು ಕಾನೂನಿನ ವಿರುದ್ಧ ನಿರಂತರ ಷಡ್ಯಂತ್ರ ನಡೆದಿವೆ. ಮುಸ್ಕಾನ್  ಹೇಳಿಕೆಗೆ ಆಲ್ ಖೈದಾ ಬೆಂಬಲ ವಿಚಾರದ ಬಗ್ಗೆ ತನಿಖೆಗೆ ಪೊಲೀಸರಿಗೆ ಸೂಚಿಸಿದ್ದೇನೆ. ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಇನ್ನು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಬಿಜೆಪಿ ಮುಖಂಡರು ಸ್ವಾಗತಿಸಿದರು. ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ, ದೆಹಲಿ ಪ್ರವಾಸ ಯಶಸ್ವಿಯಾಗಿದೆ, ರಾಜ್ಯದ ಬೇಡಿಕೆಗಳಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಅನೇಕ ವಿಚಾರಗಳ ಕುರಿತು ಚರ್ಚಿಸಿದ್ದೇನೆ. ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರೊಂದಿಗೆ ಸ್ತೂಲ ಚರ್ಚೆ ಮಾಡಿದ್ದೇನೆ ಮುಂದಿನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.