ಮನೆ ಆರೋಗ್ಯ ಬ್ರೊಕೊಲಿ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನ

ಬ್ರೊಕೊಲಿ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನ

0

ಬ್ರೊಕೊಲಿಯನ್ನು ಹೆಚ್ಚಾಗಿ ಹಣ ಇರುವವರು ಮಾತ್ರ ಖರೀದಿಸುತ್ತಾರೆ. ಹಾಗಂತ ಸಾಮಾನ್ಯ ಜನರು ಈ ತರಕಾರಿಯನ್ನು ಖರೀದಿಸುವುದೇ ಇಲ್ಲ ಎಂದೇನಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲ ರೀತಿಯ ಜನರು ಕೂಡ ಬ್ರೊಕೊಲಿಯನ್ನು ಹೆಚ್ಚಾಗಿ ಸೇವಿಸುತ್ತಾರೆ.

Join Our Whatsapp Group

ಬ್ರೊಕೊಲಿ ಆರೋಗ್ಯಕರ ತರಕಾರಿ ಆಗಿದ್ದು, ಇದನ್ನು ಯಾವುದೇ ತರಹದ ಅಡುಗೆಗೆ ಬಳಸಬಹುದು.

ಬ್ರೊಕೊಲಿಯಲ್ಲಿ ಕಿತ್ತಳೆ ಹಣ್ಣಿಗಿಂತ ಎರಡು ಪಟ್ಟು ವಿಟಮಿನ್ ಸಿ ಇದೆ. ಸೇಬುಗಳಿಗಿಂತ 10 ಪಟ್ಟು ಹೆಚ್ಚು ಒಳ್ಳೆಯದು. ಸಾಮಾನ್ಯವಾಗಿ ಹಣ್ಣುಗಳಲ್ಲಿ ಸಕ್ಕರೆ ಅಂಶ (ಸುಕ್ರೋಸ್) ಇರುತ್ತದೆ. ಆದರೆ ಈ ತರಕಾರಿಯಲ್ಲಿ ತುಂಬಾ ಕಡಿಮೆ ಇರುತ್ತದೆ.

ಬ್ರೊಕೊಲಿಯಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ. ಇದು ನಮ್ಮ ಮೂಳೆಗಳಿಗೆ ಬಲವನ್ನು ನೀಡುತ್ತದೆ. ಸ್ನಾಯುಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಬ್ರೊಕೊಲಿಯಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಕರುಳಿನ ಕಾಯಿಲೆಗಳನ್ನು ಗುಣಪಡಿಸುತ್ತದೆ. ಬ್ರೊಕೊಲಿಯಲ್ಲಿರುವ ಆಂಟಿಆಕ್ಸಿಡೆಂಟ್ ಗಳು ದೇಹದಿಂದ ವಿಷಕಾರಿ ತ್ಯಾಜ್ಯವನ್ನು ಹೊರಹಾಕುತ್ತದೆ.

ಬ್ರೊಕೊಲಿ ಕ್ಯಾನ್ಸರ್ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಣ್ಣಿನ ಪೊರೆ ಮತ್ತು ಸಂಧಿವಾತಕ್ಕೂ ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಹಾಗೆಯೇ ಬ್ರೊಕೊಲಿಯಲ್ಲಿರುವ ಟ್ರಿಪ್ಟೊಫಾನ್, ನಮ್ಮ ಮೆದುಳಿನಲ್ಲಿ ಸಿರೊಟೋನಿನ್ (ಸೆರೊಟೋನಿನ್) ಉತ್ಪತ್ತಿಯಾಗುವಂತೆ ಮಾಡುತ್ತದೆ. ಹಾಗಾಗಿ ನಮ್ಮ ಮೂಡ್ ಚೆನ್ನಾಗಿರುತ್ತದೆ.

ಬ್ರೊಕೊಲಿಯನ್ನು 2 ನಿಮಿಷ ಸ್ಟೀಮ್ ಮಾಡಿದರೆ, ಇದರ ಬಣ್ಣ ಕಳೆದು ಹೋಗುವುದಿಲ್ಲ. ಇದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಸಿಗುತ್ತದೆ.