ಮನೆ ಮನರಂಜನೆ ನಟ ಕಮಲ್​ ಹಾಸನ್​ ಅವರ 233ನೇ ಸಿನಿಮಾ ಅನೌನ್ಸ್​

ನಟ ಕಮಲ್​ ಹಾಸನ್​ ಅವರ 233ನೇ ಸಿನಿಮಾ ಅನೌನ್ಸ್​

0

ನಟ ಕಮಲ್​ ಹಾಸನ್​ ಅವರ 233ನೇ ಸಿನಿಮಾ ಅನೌನ್ಸ್​ ಆಗಿದ್ದು, ಒಂದು ಪ್ರೋಮೋ KH233 ಬಿಡುಗಡೆ ಮಾಡಲಾಗಿದೆ.

Join Our Whatsapp Group

ಖ್ಯಾತ ನಿರ್ದೇಶಕ ಎಚ್​. ವಿನೋದ್​ ಜೊತೆ ಕಮಲ್​ ಹಾಸನ್​ ಅವರು ಕೈ ಜೋಡಿಸಿದ್ದಾರೆ. ಕಮಲ್​ ಹಾಸನ್​ ಅವರು ಸದ್ಯ ನಿರ್ದೇಶಕ ಶಂಕರ್​ ಜೊತೆ ‘ಇಂಡಿಯನ್​ 2’ ಸಿನಿಮಾ ಮಾಡುತ್ತಿದ್ದಾರೆ. ಯಾಕೆಂದರೆ, ‘ಇಂಡಿಯನ್​ 2’ ಬಳಿಕ ಎಚ್​. ವಿನೋದ್​ ಜೊತೆಗಿನ ಸಿನಿಮಾದಲ್ಲಿ ಕಮಲ್​ ಹಾಸನ್​ ನಟಿಸುವುದು ಖಚಿತವಾಗಿದೆ.

ಕಮಲ್​ ಹಾಸನ್​ ಅವರು 233ನೇ ಸಿನಿಮಾದ ಪೋಸ್ಟರ್​ನಲ್ಲಿ ‘Rise to rule’ ಎಂಬ ಬರಹ ಇದೆ. ಜನನಾಯಕನ ರೀತಿ ಕಮಲ್​ ಹಾಸನ್​ ಪೋಸ್​ ನೀಡಿದ್ದಾರೆ. ಇದರಲ್ಲಿ ಸಂಪೂರ್ಣ ರಾಜಕೀಯದ ಕುರಿತ ಕಹಾನಿ ಇರಲಿದೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನಷ್ಟೇ ಬಹಿರಂಗ ಆಗಬೇಕಿದೆ. ಈ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನೀಡಲಿದ್ದಾರೆ.