ಮನೆ ಕಾನೂನು ಕಾನ್ಸ್ ಟೇಬಲ್ ಅಶಿಸ್ತು: ಶಿಸ್ತು ಕ್ರಮ ಜರುಗಿಸುವಂತೆ ಡಿಸಿಪಿಗೆ ವರದಿ

ಕಾನ್ಸ್ ಟೇಬಲ್ ಅಶಿಸ್ತು: ಶಿಸ್ತು ಕ್ರಮ ಜರುಗಿಸುವಂತೆ ಡಿಸಿಪಿಗೆ ವರದಿ

0

ಬೆಂಗಳೂರು(Bengaluru) : ಶೇವಿಂಗ್ ಮಾಡಿಕೊಳ್ಳದೆ, ಕೊಳಕು ಬಟ್ಟೆ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದ ಪೊಲೀಸ್ ಕಾನ್ಸ್​ಟೇಬಲ್(Police constable) ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಕೋರಿ ಉತ್ತರ ವಿಭಾಗದ ಡಿಸಿಪಿಗೆ ಆರ್‌ಟಿನಗರ ಠಾಣೆ ಇನ್ಸ್​ಪೆಕ್ಟರ್ ವರದಿ ಸಲ್ಲಿಸಿದ್ದಾರೆ.

ವಿ.ಪುರಂ‌‌ ಪೊಲೀಸ್ ಕಾನ್ಸ್​ಟೇಬಲ್​ ಆಗಿರುವ ಗೋಪಾಲಕೃಷ್ಣ ವಿಶೇಷ ಕರ್ತವ್ಯದ ಮೇರೆಗೆ ಆರ್‌‌.ಟಿ.ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸ ಬಳಿ ಭದ್ರತೆಗೆ ನೇಮಿಸಲಾಗಿತ್ತು‌‌.‌ ಭದ್ರತೆಯ ತಪಾಸಣೆ ನಡೆಸುವಾಗ ಕಾನ್ಸ್​ಟೇಬಲ್ ಗೋಪಾಲಕೃಷ್ಣ ಶೇವಿಂಗ್ ಮಾಡಿಕೊಳ್ಳದೆ, ಕೊಳಕಾದ ಸಮವಸ್ತ್ರ ಧರಿಸಿಕೊಂಡು‌ ಕರ್ತವ್ಯಕ್ಕೆ ಹಾಜರಾಗಿರುವುದು ಕಂಡು ಬಂದಿದೆ.

ಗೋಪಾಲಕೃಷ್ಣ ಕರ್ತವ್ಯದಲ್ಲಿ ಉದಾಸೀನತೆ ಹಾಗೂ ನಿರ್ಲಕ್ಷ್ಯ ತೋರಿದ್ದಾರೆ. ಕರ್ತವ್ಯಕ್ಕೆ ಬರುವಾಗ ಶಿಸ್ತಿನಿಂದ ಇರುವಂತೆ ಹಲವು ಬಾರಿ ತಿಳಿಸಲಾಗಿದ್ದರೂ ಬೇಜವಾಬ್ದಾರಿ ತೋರಿದ ಹಿನ್ನೆಲೆ ಉತ್ತರ ವಿಭಾಗದ ಡಿಸಿಪಿಗೆ ಶಿಸ್ತು ಕ್ರಮ ಜರಗಿಸುವಂತೆ ಆರ್‌.ಟಿ.ನಗರ ಪೊಲೀಸರು ವರದಿ ಸಲ್ಲಿಸಿದ್ದಾರೆ.