ಮೈಸೂರು: ರೈತರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ಅಂಚೆ ಕಚೇರಿಗಳ ವ್ಯವಹಾರದ ವೇಳೆಯನ್ನು ಕಚೇರಿಯ ಮುಕ್ತಾಯದ ಅರ್ಧ ಗಂಟೆಗೆ ಮೊದಲಿನವರೆಗೆ ವಿಸ್ತರಿಸಲಾಗಿದೆ.
ಉಳಿತಾಯ ಖಾತೆ ಮತ್ತು ನಗದು ವ್ಯವಹಾರವನ್ನು ಹೊರತುಪಡಿಸಿ E-M.O, IPO, E-PAYMENT ಆಧಾರ್ ಮತ್ತು CSC, PLI ಮತ್ತು RPLI ಸ್ಟ್ಯಾಂಪ್ ಮತ್ತು ಸ್ಟೇಷನರಿ ಮಾರಾಟ ನೊಂದಾಯಿತ ಮತ್ತು ಸ್ಪೀಡ್ ಪೋಸ್ಟ್ ಸೇವೆಗಳನ್ನು ಅವಧಿಯಲ್ಲಿ ಲಭ್ಯವಿರುತ್ತದೆ.
ಸಾರ್ವಜನಿಕರು ಮತ್ತು ಗ್ರಾಹಕರು ಎದುರಾ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧ್ಯಕ್ಷರಾದ ಡಾ. ಏಂಜಲ್ ರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.