ಮನೆ ಅಪರಾಧ ಹಣ ಸಂಪಾದನೆ ಆಸೆ ತೋರಿಸಿ ಗೃಹಿಣಿಗೆ ಲಕ್ಷ ರೂ. ವಂಚನೆ

ಹಣ ಸಂಪಾದನೆ ಆಸೆ ತೋರಿಸಿ ಗೃಹಿಣಿಗೆ ಲಕ್ಷ ರೂ. ವಂಚನೆ

0

ಮೈಸೂರು: ಯು-ಟ್ಯೂಬ್’ಗೆ ಚಂದದಾರರಾಗಿ ಲೈಕ್ ಮಾಡಿದರೆ ಹಣ ಸಂಪಾದನೆ ಮಾಡಬಹುದು ಎಂದು ನಂಬಿಸಿ ,ಇಬ್ಬರು ಮಹಿಳೆಯರಿಂದ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

Join Our Whatsapp Group

ಮೈಸೂರಿನ ಶಕ್ತಿನಗರದ ನಿವಾಸಿ ವೈ.ಸಿ. ಸುಧಾರಾಣಿ (35) ಎಂಬುವರ ಮೊಬೈಲ್ ಗೆ 6295158894 ಸಂಖ್ಯೆಯಿಂದ ವರ್ಕ್ ಫ್ರಮ್ ಹೋಂ ಸಂದೇಶ ಬಂದಿದೆ. ಸದರಿ ಸಂಖ್ಯೆಯನ್ನು ಅವರು ಸಂಪರ್ಕಿಸಿದಾಗ ಯು-ಟ್ಯೂಬ್ ಚಾನೆಲ್ ಒಂದಕ್ಕೆ ಚಂದದಾರರಾದರೆ, ಹಣ ಸಂಪಾದನೆ ಮಾಡಬಹುದು ಎಂದು ನಂಬಿಸಲಾಗಿದೆ.   

ಮೊದಲಿಗೆ ಸುಧಾರಾಣಿ ಅವರ ಖಾತೆಗೆ 50 ಜಮೆಯಾಗಿದ್ದು, ಇದರಿಂದ ಅವರಿಗೆ ಹಣ ಸಂಪಾದಿಸಬಹುದು ಎಂಬ ನಂಬಿಕೆ ಬಂದ ನಂತರ ವಂಚಕರು ಟಾಸ್ಕ್ ನೀಡಿ ಹಣ ಹೂಡುವಂತೆ ಒಪ್ಪಿಸಿ 95,000 ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ.

ಅದೇ ರೀತಿ ವರುಣ ಹೋಬಳಿಯ ಛಾಯಾ ಲೇಔಟ್ ನಿವಾಸಿ ಶೀಲ ಗಣಪತಿ ಭಟ್ (42) ಎಂಬುವವರಿಗೆ ಅವರಿಗೆ ವಾಟ್ಸಪ್ ನಲ್ಲಿ ಪರಿಚಯವಾದ ವಂಚಕರು ಯೂ-ಟ್ಯೂಬ್ ಲೈಕ್ ಮಾಡುವ ಟಾಸ್ಕ್ ಬಗ್ಗೆ ತಿಳಿಸಿ, ಹಣ ಹೂಡಿದರೆ ಹೆಚ್ಚು ಲಾಭ ಬರುತ್ತದೆ ಎಂದು ನಂಬಿಸಿ, 1.05 ಲಕ್ಷ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಎರಡು ಪ್ರಕರಣಗಳು ಮೈಸೂರು ನಗರ ಸೆನ್ ಠಾಣೆಯಲ್ಲಿ ದಾಖಲಾಗಿದೆ.