ಮನೆ ರಾಜಕೀಯ ಪೆನ್ ಡ್ರೈವ್ ಮಾಹಿತಿ ಹೊರ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ: ಹೆಚ್.ಡಿ. ಕುಮಾರಸ್ವಾಮಿ

ಪೆನ್ ಡ್ರೈವ್ ಮಾಹಿತಿ ಹೊರ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ: ಹೆಚ್.ಡಿ. ಕುಮಾರಸ್ವಾಮಿ

0

ಮೈಸೂರು: ಸೂಕ್ತ ಸಮಯದಲ್ಲಿ ಪೆನ್ ಡ್ರೈವ್ ನಲ್ಲಿರುವ ದಾಖಲೆ ಬಿಡುಗಡೆ ಮಾಡುತ್ತೇನೆ. ಪೆನ್ ಡ್ರೈವ್ ಮಾಹಿತಿ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

Join Our Whatsapp Group

ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ಪೆನ್ ಡ್ರೈವ್ ಬಿಡುಗಡೆ ಮಾಡುವ ಅವಸರವಿಲ್ಲ, ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ಈ ಸರ್ಕಾರ ಏನು ಮಾತನಾಡುತ್ತದೆಯೋ ಎಲ್ಲವನ್ನು ಮಾತನಾಡಲಿ. ನನ್ನನ್ನು ಹಿಟ್ ಅಂಡ್ ರನ್ ಎಂದು ಹೇಳಿಕೊಳ್ಳಲಿ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಪುರಾವೆ ಇರುವ ಪೆನ್ ಡ್ರೈವ್ ನನ್ನ ಜೇಬಿನಲ್ಲಿದೆ, ಸರಿಯಾದ ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ಯಾವುದೇ  ಸೂಕ್ತ ಮಾಹಿತಿ ಇಲ್ಲದೇ ಬಿಡುಗಡೆ ಮಾಡುವುದಿಲ್ಲ. ಹಾಲಿ ಸಚಿವ ಸಂಪುಟದ ಹಿರಿಯ ಸಚಿವರೊಬ್ಬರು ಭಾಗಿಯಾಗಿದ್ದಾರೆ. ಇಲಾಖೆಯಲ್ಲಿನ ನೌಕರರ ವರ್ಗಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕಚೇರಿಯಲ್ಲಿ (ಸಿಎಂಒ) ಅಧಿಕಾರಿಗಳು ವರ್ಗಾವಣೆಗೆ ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ಕನ್ನಡಿಗರು ಸಿಎಂಒ ಎಂದರೆ ಮುಖ್ಯಮಂತ್ರಿ ಕಚೇರಿ ಎಂದು ಭಾವಿಸಿದ್ದರು. ಇದು ಈಗ ಭ್ರಷ್ಟಾಚಾರ ನಿರ್ವಹಣಾ ಕಚೇರಿಯಾಗಿದೆ ಎಂದು ಅವರು ಈಗ ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ಇದೀಗ ಹೊಸ ತೆರಿಗೆಗಳು ಆರಂಭಗೊಂಡಿವೆ. ವೈಎಸ್‌ ಟಿ ಟ್ಯಾಕ್ಸ್ ಬಗ್ಗೆ ಎಲ್ಲಾ ರಾಜಕಾರಣಿಗಳಿಗೂ ಗೊತ್ತಿದೆ. ವೈಎಸ್‌ ಟಿ ಟ್ಯಾಕ್ಸ್ ಸಂಗ್ರಹ ಬಗ್ಗೆ ನನಗೆ ಯಾರೋ ಹೇಳಿದರು. ವೈಎಸ್‌ ಟಿ ಅಂದ್ರೆ ಏನಂತ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದರು.