ಮನೆ ಅಪರಾಧ ಮೈಸೂರು : ಪಾಲುದಾರರಿಂದ 3 ಕೋಟಿ ವಂಚನೆ- ದೂರು ದಾಖಲು

ಮೈಸೂರು : ಪಾಲುದಾರರಿಂದ 3 ಕೋಟಿ ವಂಚನೆ- ದೂರು ದಾಖಲು

0

ಮೈಸೂರು : ಕಂಪನಿಯ ಪಾಲುದಾರರಾಗಿದ್ದವರೆ ಸಾಫ್ಟ್ ವೇರ್ ಇಂಜಿನಿಯರ್ ಗೆ ಸುಮಾರು 3 ಕೋಟಿ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ನ್ಯಾಯಾಲಯದ ಆದೇಶ ಮೇರೆಗೆ ಮೈಸೂರಿನ ವಿಜಯನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Join Our Whatsapp Group

ಮೈಸೂರು ವಿವೇಕಾನಂದ ನಗರ ನಿವಾಸಿ ಪಿ.ಎಸ್. ರಮೇಶ್ (38)ನಷ್ಟ ಗೊಳಗಾಗಿದ್ದವರಾಗಿದ್ದು, ವಿಜಯನಗರ 4ನೇ ಹಂತದ ನಿವಾಸಿ ಎಸ್.ಕೆ. ಚಂದ್ರಹಾಸ (40) ಮತ್ತು ನ್ಯೂ ಕಾಂತರಾಜ್ ರಸ್ತೆ ನಿವಾಸಿ ಎಸ್. ಸುಂದರ್ (42) ಆರೋಪಕ್ಕೆ ಗುರಿಯಾದವರು.                

ರಮೇಶ್ ಅವರು ಆರೋಪಿ ಚಂದ್ರಹಾಸ ಮತ್ತು ಸ್ನೇಹಿತರಾದ ಸೋಮಶೇಖರ್ ಜೊತೆಗೂಡಿ ಡಾಲರ್ ಬರ್ಡ್ ಇನ್ಫರ್ಮೇಶನ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಕಂಪನಿಯೊಂದನ್ನು 2010 ನೋಂದಾಯಿಸಿದ್ದು, ಈ ಕಂಪನಿ 2011 ರಿಂದ ಚಾಲನೆಗೊಂಡಿದೆ.  2014ರ ವೇಳೆಗೆ 18 ಉದ್ಯೋಗಿಗಳನ್ನು ಹೊಂದಿದ್ದು, ಕಂಪನಿಯನ್ನು ಆರೋಪಿ ಚಂದ್ರಹಾಸ್ ಅವರು ಖಾಸಗಿ ಲಿಮಿಟೆಡ್ ಕಂಪನಿಯಾಗಿ ಪರಿವರ್ತಿಸಲು ನಿರ್ಧರಿಸಿದಾಗ ರಮೇಶ್ ಮತ್ತು ಅವರ ಸ್ನೇಹಿತ ಸೋಮಶೇಖರ್ ಈ ಕಂಪನಿಯಿಂದ ನಿರ್ಗಮಿಸಿದ್ದು, ಆರೋಪಿ ಸುಂದರ್ ಪಾಲುದಾರರಾಗಿ ಸೇರ್ಪಡೆಯಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.    

ರಮೇಶ್ ಅವರು ನಿರ್ದೇಶಕರಾಗಿದ್ದಾಗ 2018 ರವರೆಗೆ ಕಂಪನಿ ಲಾಭದಾಯಕವಾಗಿ ನಡೆಯುತ್ತಿತ್ತು. ಅವರು ರಾಜೀನಾಮೆ ನೀಡಿದ ನಂತರ ವಹಿವಾಟು ತೀವ್ರವಾಗಿ ಕಡಿಮೆಯಾಗಿದೆ. ಆರೋಪಿಗಳಿಬ್ಬರು ಡಾಲರ್ ಬರ್ಡ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಹೊಸ ಕಂಪನಿಯನ್ನು ಸ್ಥಾಪಿಸಿ, ತಮ್ಮ ಕಂಪನಿಯ ವಹಿವಾಟನ್ನು  ಹೊಸ ಕಂಪನಿಯ ವರ್ಗಾಯಿಸುವ ಮೂಲಕ ತಮ್ಮ ಕಂಪನಿಗೆ ಸುಮಾರು 3 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ.

ಅಲ್ಲದೆ ಚಂದ್ರಹಾಸ ಅವರು  1.28 ಕೋಟಿ ರೂ. ಹಾಗೂ ಸುಂದರ್ ಅವರು 71.50 ಲಕ್ಷ ರೂ.ಗಳನ್ನು ತಮ್ಮ ಕಂಪನಿ ಖಾತೆಯಿಂದ ಅಕ್ರಮವಾಗಿ ತೆಗೆದುಕೊಂಡಿದ್ದಾರೆ ಎಂದು ರಮೇಶ್ ನಡೆದ ದೂರನ್ನು ದಾಖಲಿಸಿಕೊಂಡಿರುವ ವಿಜಯನಗರದ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.