ಮನೆ ಯೋಗಾಸನ ತ್ರಿಕೋಣಾಸನ

ತ್ರಿಕೋಣಾಸನ

0

ಈ ಆಸನಕ್ಕೆ ‘ಭೂಶ್ಪೃಷ್ಟ ಹಸ್ತ ವೃಕ್ಷಾಸನ’ ಎಂಬ ಹೆಸರೂ ಇದೆ.

Join Our Whatsapp Group

ಮಾಡುವ ಕ್ರಮ

1)    ಯೋಗಾಭ್ಯಾಸಿಯೂ ಪ್ರಾರಂಭದಲ್ಲಿ ಎರಡು ಕಾಲುಗಳ ನಡುವೆ 10 -12  ಅಂಗುಲಗಳ ಅಂತರವಿಟ್ಟುಕೊಂಡು ಭೂಮಿಗೆ ಲಂಬವಾಗಿ ನಿಂತುಕೊಳ‍್ಳಬೇಕು.

2)   ಅನಂತರ ಎರಡೂ ಕೈಗಳನ್ನು ಭುಜಗಳಿಗೆ ನೇರವಾಗಿ, ಭೂಮಿಗೆ ಸಮಾನಾಂತರವಾಗಿ ಪಕ್ಕಕ್ಕೆ ಚಾಚಾಬೇಕು.

3)   ಅನಂತರ ಯಾವುದಾದರೂ ಒಂದು ಭಾಗಕ್ಕೆ  ಉದಾಹರಣೆಗೆ ಚಿತ್ರದಲ್ಲಿರುವಂತೆ ಬಲಭಾಗಕ್ಕೆ ಭಾಗಬೇಕು. ಹೀಗೆ ಬಾಗಿದಾಗ ಬಲಗೈ ಬಲಗಾಲಿನ ಪಾದವನ್ನು ಸ್ಪರ್ಶಿಸಬೇಕು ಹಾಗೂ ಎಡಗೈ ಭೂಮಿಗೆ ಲಂಬವಾಗಿದ್ದು ಯೋಗಾಭ್ಯಾಸಿಯು ಎಡಗೈಯನ್ನು ನೋಡುತ್ತಿರಬೇಕು.  ಇದೇ ಸ್ಥಿತಿಯಲ್ಲಿ ಒಂದು ಒಂದೂವರೆ ನಿಮಿಷವಿದ್ದು ಅನಂತರ ಇದೇ ಕ್ರಿಯೆಯನ್ನು ಎಡ ಪಾರ್ಶ್ಚದಲ್ಲೂ ಮಾಡಬೇಕು.

ಮೂರು – ನಾಲ್ಕು ಬಾರಿ ಈ ಕ್ರಿಯೆಯನ್ನು ಮಾಡಿದ ನಂತರ ಕೈಗಳನ್ನು ಬದಲಾಯಿಸಬೇಕು. ಅಂದರೆ ಬಲಗೈಯಿಂದ ಬಲಗಾಲನ್ನು, ಬಲಗೈಯಿಂದ ಎಡಗಾಲಿನ ಪಾದವನ್ನು ಸ್ವರ್ಶಿಸಬೇಕು. ಈ ಕ್ರಿಯೆಯನ್ನು ಮೂರು – ನಾಲ್ಕು ಬಾರಿ ಮಾಡಬಹುದು. ಈ ಎರಡು ರೀತಿಯ ಕ್ರಿಯೆಗಳನ್ನು ಮಾಡುವಾಗಲೂ ಸೊಂಟದ ಕೆಳಗಿನ ಭಾಗಗಳನ್ನು ನೇರವಾಗಿಡುವತ್ತ ಗಮನ ಹರಿಸಬೇಕು.

ಲಾಭಗಳು:

ತ್ರಿಕೋಣಾಸನದ ಅಭ್ಯಾಸದಿಂದ ಕಾಲುಗಳು ಮತ್ತು ತೊಡೆಗಳು ಬಲಿಷ್ಠವಾಗುವುವು. ಸೊಂಟದ ಬೇನೆ ದೂರವಾಗುವುದು. ಪಕ್ಕೆಗಳಿಗೆ ಹೆಚ್ಚಿನ ವ್ಯಾಯಾಮ ದೊರೆಯುವುದು.