ಮನೆ ರಾಜ್ಯ ಬೈಸಿಕಲ್ ವಿತರಣೆ, ಹೊಸ ಹಾಸ್ಟೆಲ್ ನಿರ್ಲಕ್ಷ ಖಂಡನೆ: NEP ರದ್ದು ಸ್ವಾಗತ- ಎಸ್ಎಫ್ಐ

ಬೈಸಿಕಲ್ ವಿತರಣೆ, ಹೊಸ ಹಾಸ್ಟೆಲ್ ನಿರ್ಲಕ್ಷ ಖಂಡನೆ: NEP ರದ್ದು ಸ್ವಾಗತ- ಎಸ್ಎಫ್ಐ

0

ಮೈಸೂರು: ಎಸ್ ಎಫ್ ಐ ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ವಿದ್ಯಾರ್ಥಿ ವಿರೋಧಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿರುವುದನ್ನು ಮತ್ತು ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದನ್ನು ಸ್ವಾಗತಿಸಿದೆ.

Join Our Whatsapp Group

ಹೋರಾಟದ ಅನೇಕ ಬೇಡಿಕೆಗಳಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಕೊಠಡಿ ನಿರ್ಮಾಣಕ್ಕೆ 310ಕೋಟಿ, ಪದವಿ ಪೂರ್ವ ಕಾಲೇಜುಗಳ ಕೊಠಡಿಗಳಿಗೆ 240 ಕೋಟಿ ಸೇರಿ ಒಟ್ಟು 550 ಕೋಟಿ ವೆಚ್ಚದಲ್ಲಿ 8,311 ಕೊಠಡಿಗಳನ್ನು ನಿರ್ಮಿಸಲು ಮತ್ತು 5775 ಶೌಚಾಲಯ ನಿರ್ಮಾಣಕ್ಕೆ 200 ಕೋಟಿ ಅನುದಾನ, ಮಳೆಯಿಂದಾಗಿ ಹಳೆಯ ಶಾಲಾ-ಕಾಲೇಜ್ ಕಟ್ಟಡಗಳ ದುರಸ್ತಿಗೆ 100 ಕೋಟಿ, ನಿರ್ವಹಣೆ ವೆಚ್ಚಕ್ಕಾಗಿ 153 ಕೋಟಿ. ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ ಎಫ್ ಐ) ಸಂಘಟನೆಯ ಹೋರಾಟದ ಫಲವಾಗಿ ವಿದ್ಯಾಸಿರಿ ಯೋಜನೆ ಮರು ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳ ಪೌಷ್ಟಿಕತೆಯ ದೃಷ್ಟಿಯಿಂದ ಮೊಟ್ಟೆಯನ್ನು ಬರಿ ಕಲ್ಯಾಣ ಕರ್ನಾಟಕಕ್ಕೆ  ಸೀಮಿತಗೊಳಿಸಿತ್ತು ನಮ್ಮ ಹೋರಾಟದಿಂದ 1 ರಿಂದ 10 ತರಗತಿಯವರೆಗೆ ಎಲ್ಲಾ ಜಿಲ್ಲೆಗಳಿಗೂ ನೀಡುತ್ತಿರುವುದು ಹಾಗೂ ವಿನೂತನವಾಗಿ ಬುದ್ಧಿಮಾಂದ್ಯ ಮಕ್ಕಳಿಗೆ 7 ಜಿಲ್ಲೆಗಳಲ್ಲಿ 10 ವಸತಿ ನಿಲಯಗಳ ಘೋಷಣೆಯನ್ನು ಮತ್ತು 10 ಮುರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮಂಜೂರು ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಕರ್ನಾಟಕ ರಾಜ್ಯ ಸಮಿತಿಯು ವಿದ್ಯಾರ್ಥಿ ಸಮುದಾಯದ ಪರವಾಗಿ ಸ್ವಾಗತಿಸುತ್ತದೆ.

ಶಿಕ್ಷಣ ಕ್ಷೇತ್ರಕ್ಕೆ ಕೇವಲ 37,587 ಕೋಟಿ ರೂಪಾಯಿ ಎಂದರೆ ಶೇ. 11% ಹಣ ಮೀಸಲಿಟ್ಟಿದ್ದು ಎಲ್ಲರ ಓಲೈಕೆ ಮಾಡುವ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೀಸಲಿಡುವುದರ ಮೂಲಕ ಮೆಚ್ಚುಗೆ ಗಳಿಸುತ್ತಿದೆ ಹೊರತು ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ನಿಂತಿರುವ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುವ ಬೈಸಿಕಲ್ (ಸೈಕಲ್) ಮರುಜಾರಿ ಸೇರಿದಂತೆ ಉಚಿತ ಲ್ಯಾಪ್ಟಾಪ್, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್, ಒಂದೇ ಒಂದು ಹೊಸ ಹಾಸ್ಟೆಲ್ ಘೋಷಣೆ ಮಾಡಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಕನಿಷ್ಠ 3500 ರೂ ಹೆಚ್ಚಿಸಬೇಕೆಂದು ಮುಂತಾದ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹಾಗೂ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕಿತ್ತು. ಘೋಷಣೆಗಳು ಭಾಷಣವಾಗದೆ ಜಾರಿಗೊಳಿಸಲು ಮುಂದಾಗಬೇಕೆಂದು ನಾವು ಒತ್ತಾಯಿಸುತ್ತದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್‌ ಮೈಸೂರು ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.