ಮನೆ ಯೋಗಾಸನ ಮಯೂರಾಸನ

ಮಯೂರಾಸನ

0

ಮಯೂರಾಸನದಲ್ಲಿ ಪದ್ಮಮಯೂರಾಸನ (ಮಯೂರಿ), ಹಂಸಾಸನ, ಪಿಂಛ ಮಯೂರಾಸನ ಎಂಬ ಪ್ರಭೇದಗಳೂ ಇವೆ.

Join Our Whatsapp Group

ಮಾಡುವಕ್ರಮ

1)    ಮೊದಲು ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು.

2)    ಅನಂತರ ಅಂಗೈಗಳನ್ನು (ಬೆರಳುಗಳು ಪಾದದ ಕಡೆ ಚಾಚಿರುವ ರೀತಿಯಲ್ಲಿ) ನೆಲದ ಮೇಲೆ ಊರಬೇಕು ಹಾಗೂ ಇದೇ ಸ್ಥಿತಿಯಲ್ಲಿ ಕಿರುಬೆರಳುಗಳು ಪರಸ್ಪರ ಒಂದಕ್ಕೊಂದು ಸ್ಪರ್ಶಿಸಬೇಕು.

3)   ಎರಡೂ ಕಾಲುಗಳನ್ನು ಹಿಂದಕ್ಕೆ ಚಾಚಿ ಮೊಳಕೈಗಳ ಮೇಲೆ ಹೊಕ್ಕಳು ಬರುವಂತೆ ಶರೀರವನ್ನು ಇಟ್ಟುಕೊಳ್ಳಬೇಕು. ಅನಂತರ ಉಸಿರನ್ನು  ನಿಧಾನವಾಗಿ ಹೊರಗೆ ಬಿಡಬೇಕು.

4)   ಉಸಿರನ್ನು ಹೊರಕ್ಕೆ ಬಿಡುತ್ತಾ ಸಾಧ್ಯವಾದಷ್ಟೂ ಮುಂದಕ್ಕೆ ಬಗ್ಗಿ, ಕಾಲುಗಳನ್ನು ನಿಧಾನವಾಗಿ ಮೇಲಕ್ಕೆ ಎತ್ತಬೇಕು. ಈ ಸ್ಥಿತಿಯಲ್ಲಿ ಕಾಲು, ಸೊಂಟ ಮತ್ತು ಬೆನ್ನು ಇವು  ಭೂಮಿಗೆ ಸಮಾನಾಂತರವಾಗಿರಬೇಕು ಮತ್ತು ಮೊಳಕೈ ಭೂಮಿಗೆ ಲಂಬವಾಗಿರಬೇಕು. ಒಮ್ಮೆ ಚಿತ್ರದಲ್ಲಿರುವಂತೆ ಸ್ಥಿತಿಯನ್ನು ತಲುಪಿ ಅನಂತರ ಅದೇ ಸ್ಥಿತಿಯಲ್ಲಿ ಸಮತೋಲನ ಪಡೆಯುವುದು ಅವಶ್ಯಕ.

ಲಾಭಗಳು

ಮಯೂರಾಸನದ ಅಭ್ಯಾಸದಿಂದ ಉದರದ ಅನೇಕ ವ್ಯಾಧಿಗಳು ದೂರವಾಗುವವು. ಬೆನ್ನುಮೂಳೆ ನೇರವಾಗುತ್ತದೆ. ಜಠರಾಗ್ನಿ ಉದ್ದೀಪನಗೊಂಡು ಹಸಿವು ಹೆಚ್ಚುತ್ತದೆ. ವಿಶೇಷವಾಗಿ ಸಿಹಿಮೂತ್ರ ರೋಗಿಗಳಿಗೆ ಹೆಚ್ಚು ಉಪಯೋಗಿ.