ಮನೆ Uncategorized ವಿದ್ಯುತ್ ದರ ಏರಿಕೆ: ಬಿಜೆಪಿಗೆ ಯುನಿಟ್ ಗೆ ಒಂದು ರೂಪಾಯಿ ಕಮಿಷನ್- ಎಂ.ಲಕ್ಷ್ಮಣ್  ಆರೋಪ

ವಿದ್ಯುತ್ ದರ ಏರಿಕೆ: ಬಿಜೆಪಿಗೆ ಯುನಿಟ್ ಗೆ ಒಂದು ರೂಪಾಯಿ ಕಮಿಷನ್- ಎಂ.ಲಕ್ಷ್ಮಣ್  ಆರೋಪ

0

ಮೈಸೂರು(Mysyru): ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಯಾಗಿದ್ದು, ಇದರಲ್ಲಿ ಬಿಜೆಪಿಗೆ  ಯೂನಿಟ್(unit) ಗೆ ಒಂದು ರೂ.ನಂತೆ ಕಮೀಷನ್ ಸಿಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರವಾಗಿ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅದಾನಿ ಕಂಪನಿಯಿಂದ ವಿದ್ಯುತ್ ಖರೀದಿಸಲಾಗುತ್ತಿದೆ. ರಾಜ್ಯ ಬಿಜೆಪಿ ಸರ್ಕಾರ ಕಮಿಷನ್ ಗಾಗಿ ಎರಡು ಕಂಪೆನಿಗಳಿಂದ ಸರಬರಾಜು ಮಾಡಿಕೊಳ್ಳುತ್ತಿದೆ. ಉತ್ಪಾದನೆ ಸಾಮರ್ಥ್ಯವಿದ್ದರೂ ಬೇರೆ ಕಂಪೆನಿಯಿಂದ ಖರೀದಿಸಲಾಗುತ್ತಿದೆ. ಕರ್ನಾಟಕದಲ್ಲಿ ಎರಡುವರೆ ವರ್ಷದಲ್ಲಿ 6 ಬಾರಿ ದರ ಹೆಚ್ಚಳ ಮಾಡಿದ್ದಾರೆ. ಒಂದು ಯೂನಿಟ್ ಗೆ 2 ರೂಪಾಯಿ ಹೆಚ್ಚು ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಒಂದು ಯೂನಿಟ್ ಗೆ ಒಂದು ರೂಪಾಯಿ ಕಮಿಷನ್ ಬಿಜೆಪಿಗೆ ಸಿಗುತ್ತಿದೆ. ವಾರ್ಷಿಕವಾಗಿ ಬಿಜೆಪಿಗೆ ಸುಮಾರು ಐದುವರೆ ಸಾವಿರದಿಂದ 6 ಸಾವಿರ ಕೋಟಿ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ತಯಾರಿಸುವ ಸಾಮರ್ಥ್ಯವಿದ್ದರೂ ಬೇರೆಡೆ ಖರೀದಿಸುವ ಬಗ್ಗೆ ಹಿರಿಯ ಅಧಿಕಾರಿ ಪುನ್ನುರಾಜ್ ಇಲಾಖೆಗೆ ಪತ್ರ ಬರೆದಿದ್ದಾರೆ.

ವಿವಿಧ ಮೂಲಗಳಿಂದ ರಾಜ್ಯದಲ್ಲಿ 16,574 ಮೆಗಾ ವ್ಯಾಟ್ ಪವಾರ್ ಉತ್ಪಾದನೆ ಮಾಡುವ ಅವಕಾಶವಿದೆ. 6708 ಮೆಗ ವ್ಯಾಟ್ ಉತ್ಪಾದನೆ ಆಗುತ್ತಿದೆ. ರಾಜ್ಯಕ್ಕೆ ಬೇಡಿಕೆ ಇರುವುದು 9,451 ಮೆಗಾ ವ್ಯಾಟ್.  2643 ವ್ಯಾಟ್ ಕೊರತೆ ಇದೆ. ವಿವಿಧ ಖಾಸಗಿ ಕಂಪೆನಿಗಳಿಂದ ಖರೀದಿ ಮಾಡುವ ಕೆಲಸ ಆಗುತ್ತಿದೆ ಎಂದು ಕಿಡಿಕಾರಿದರು.

ಆಲ್ ಖೈದ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್, ಅಲ್ ಖೈದಾ ಮುಖ್ಯಸ್ಥ ಜವಹಾರಿಯನ್ನ ಅಮೆರಿಕಾ ಆಗಲೇ ಕೊಂದಿದೆ. ಅಲ್ಲಿರುವ ವೀಡಿಯೋ ನಿಜ. ಆದರೆ ಅದಕ್ಕೆ ಸೇರಿಸಿರುವ ಆಡಿಯೋ ಸುಳ್ಳು. ಇದರ ಸೃಷ್ಟಿಕರ್ತ ಬಿಜೆಪಿ ಹಾಗೂ ಆರ್‌ಎಸ್ಎಸ್. ಇದರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಸಂಪೂರ್ಣ ಅನುಮೋದನೆ ಮಾಡುತ್ತೇನೆ. ಅಮೆರಿಕಾ ಸುಳ್ಳು ಹೇಳುವುದಿಲ್ಲ. ಅಲ್ ಖೈದಾ ಸಂಘಟನೆ ಪ್ರಪಂಚದಾದ್ಯಂತ ಬ್ಯಾನ್ ಆಗಿರುವ ಸಂಘಟನೆ ಎಂದರು.

ಮಾರಕ ವ್ಯಕ್ತಿ ಸಿ.ಟಿ.ರವಿ:  ಸಿ.ಟಿ ರವಿ ಬರಿ ಕಿಡಿ ಹೊತ್ತಿಸುವುದೇ ಅವರ ಕೆಲಸ. ಆರ್ ಎಸ್ ಎಸ್ ಅವರಿಗೆ ಈ ರೀತಿ ತರಬೇತಿ ನೀಡಿದೆ. ರಾಜ್ಯದ ನಂಬರ್ 1 ಮಾರಕ ವ್ಯಕ್ತಿ ಸಿ.ಟಿ ರವಿ. ಸಿ ಟಿ ರವಿ ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ಕಾರು ಅಪಘಾತ ಮಾಡಿ ಇಬ್ಬರನ್ನು ಕೊಂದ ವ್ಯಕ್ತಿ ಸಿಟಿ ರವಿ. ಈಗ ಆತನೇ ಊರಿನವರಿಗೆ ಪಾಠ ಹೇಳುತ್ತಿದ್ದಾನೆ ಎಂದು ವ್ಯಂಗ್ಯವಾಡಿದರು.