ಮನೆ ಯೋಗಾಸನ ಕೆಲವೇ ವಾರಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬಹುದು

ಕೆಲವೇ ವಾರಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬಹುದು

0

ಸೊಂಟದ ಸುತ್ತ ಇರುವ ಕೊಬ್ಬು ಇಳಿಸಿಕೊಂಡು ಬಳುಕುವ ಬಳ್ಳಿಯಂತೆ ಕಾಣಬೇಕು ಎನ್ನುವ ಹೆಣ್ಣು ಮಕ್ಕಳು ಪ್ರತಿನಿತ್ಯ ನಿಯಮಿತವಾಗಿ ಈ ಯೋಗಸಾನಗಳನ್ನ ಮಾಡುವುದಿಂದ ಸೊಂಟದ ಸುತ್ತ ಅನಗತ್ಯವಾಗಿ ತುಂಬಿರುವ ಕೊಬ್ಬು ಇಳಿಸಿಕೊಂಡು ಸುಂದರವಾಗಿ ಕಾಣಬಹುದು

Join Our Whatsapp Group

ಆರೋಗ್ಯ ಕಾರ್ಯಕರ್ತೆ, ಸಂಯೋಜಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಳಗಿನ ತಿಂಡಿಗೆ ಈ ರೀತಿ ಮಾಡಿ ಬಾರ್ಲಿ ಪೊಂಗಲ್​

ಒತ್ತಡ ರಹಿತವಾಗಿರಲು ಈ ತಂತ್ರಗಳನ್ನು ಜೀವನಶೈಲಿಯಲ್ಲಿ ಅಳವಡಿಸಿ ಹೃದಯದ ಆರೋಗ್ಯ ಕಾಪಾಡಿ

ವ್ಯಾಯಾಮ ಮಾಡುವಾಗ ಯಾವ ಬಟ್ಟೆ ಧರಿಸೋದು ಬೆಸ್ಟ್​? ನಿಮಗೆ ಗೊತ್ತಿರಲೇಬೇಕಾದ ವಿಚಾರ

ಯೋಗಾಸನಮಾಡುವ ವ್ಯಕ್ತಿ ಆಸ್ಪತ್ರೆಯಿಂದದೂರ ಉಳಿಯುತ್ತಾನೆ ಎಂಬ ಮಾತಿದೆ. ಯೋಗ ಮಾನಸಿಕ ನೆಮ್ಮದಿಯೊಂದಿಗೆದೇಹಕ್ಕೆಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆಯಂತೆ ‘ಯೋಗ ಬಲ್ಲವನೂ ರೋಗದಿಂದ ಮುಕ್ತನಾಗಿರುತ್ತಾನೆ’. ಅನಾದಿ ಕಾಲದಿಂದಲೂ ಯೋಗಿಗಳು ತಪಸ್ವಿಗಳು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅನುಷ್ಠಾನಿಕೊಂಡವರು. ಹೀಗಾಗಿ ಮಾನವನಿಗೂ ತನ್ನ ದೇಹಕ್ಕೆ ಕಾಯಿಲೆಗಳು ಬಾರದಂತೆ, ಬಂದರೂ ಪ್ರಾಕೃತಿಕವಾಗಿಯೇ ಅವುಗಳನ್ನು ನಿವಾರಿಸಿಕೊಳ್ಳಬಹುದಾದ ದಾರಿಗಳು ಹುಟ್ಟಿನಿಂದಲೇ ಲಭ್ಯವಿವೆ. ಹೀಗೆ ಲಭ್ಯವಿರುವ ದಾರಿಗಳಲ್ಲಿ ಯೋಗ ಕೂಡ ಒಂದು.

ಆರೋಗ್ಯವೆಂದರೆ ಕೇವಲ ದೇಹಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ, ಮನಸ್ಸಿಗೂ ಸಂಬಂಧಿಸಿದ್ದು. ದೇಹ ಮನಸ್ಸು ಎರಡೂ ಆರೋಗ್ಯದಿಂದ ಇದ್ದರೆ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ. ಹೀಗೆ ದೇಹ ಮತ್ತು ಮನಸ್ಸು ಎರಡನ್ನೂ ಏಕಕಾಲದಲ್ಲಿ ಆರೋಗ್ಯವಾಗಿ ಇಡಲು ಯೋಗ ಸಹಕಾರಿ. ಜೊತೆಗೆ ಸೊಂಟದ ಸುತ್ತ ಇರುವ ಕೊಬ್ಬು ಇಳಿಸಿಕೊಂಡು ಬಳುಕುವ ಬಳ್ಳಿಯಂತೆ ಕಾಣಬೇಕು ಎನ್ನುವ ಹೆಣ್ಣು ಮಕ್ಕಳು ಪ್ರತಿನಿತ್ಯ ನಿಯಮಿತವಾಗಿ ಈ ಯೋಗಸಾನಗಳನ್ನ ಮಾಡುವುದಿಂದ ಸೊಂಟದ ಸುತ್ತ ಅನಗತ್ಯವಾಗಿ ತುಂಬಿರುವ ಕೊಬ್ಬು ಇಳಿಸಿಕೊಂಡು ಸುಂದರವಾಗಿ ಕಾಣಬಹುದು. ಹಾಗಿದ್ರೆ ಆ ಯೋಗಾಸನಗಳು ಯಾವುವು ಮತ್ತು ಅದನ್ನು ಹೇಗೆ ಮಾಡುವುದು ಎನ್ನುವ ಮಾಹಿತಿ ಇಲ್ಲಿದೆ

ಭುಜಂಗಾಸನ

ಭುಜಂಗಾಸನದ ಮಾಡುವ ಮೊದಲು ನೆಲದ ಮೇಲೆ ನೇರವಾಗಿ ಮಲಗಿಕೊಳ್ಳಬೇಕು. ನಿಮ್ಮ ಕೈಗಳನ್ನು ಭುಜದ ಸಮವಾಗಿ ನೆಲದ ಮೇಲೆ ಇರಿಸಬೇಕು.ಉಸಿರನ್ನು ಒಳ ತೆಗೆದುಕೊಳ್ಳತ್ತಾ ಕೈಗಳ ಆಧಾರದ ಮೇಲೆ ತಲೆ ಮತ್ತು ಭುಜದ ಸಹಾಯದಿಂದ ತಲೆಯನ್ನು ನಿಧಾನವಾಗಿ ಹಾವಿನ ಎಡೆಯಂತೆ ಮೇಲಕ್ಕೆ ಎತ್ತಿ ಈ ಸ್ಥಿತಿಯಲ್ಲಿ ಸಂಪೂರ್ಣವಾಗಿ ಎದೆಯ ಭಾಗವು ಮೇಲಕ್ಕೆ ಇರಬೇಕು. ಒಂದೆರಡು ಬಾರಿ ಉಸಿರಾಡಿದ ನಂತರ ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ. ಹೀಗೆ ಈ ಆಸನವನ್ನು ೧೫ ರಿಂದ ೩೦ ಬಾರಿ ಮಾಡಿದ್ರೆ ಸೊಂಟದ ಸುತ್ತ ಸೇರಿಕೊಂಡಿರುವ ಅನಗತ್ಯ ಕೊಬ್ಬು ನಿಧಾನವಾಗಿ ಕಡಿಮೆಯಾಗುತ್ತ ಬರುವುದು.