ಮನೆ ಅಂತಾರಾಷ್ಟ್ರೀಯ ಚೀನಾದ ಶಿಶುವಿಹಾರದಲ್ಲಿ ದಾಳಿ: 6 ಮಂದಿ ಸಾವು

ಚೀನಾದ ಶಿಶುವಿಹಾರದಲ್ಲಿ ದಾಳಿ: 6 ಮಂದಿ ಸಾವು

0

ಚೀನಾ: ಶಿಶುವಿಹಾರದಲ್ಲಿ ನಡೆದ ದಾಳಿಯಲ್ಲಿ ಒಬ್ಬ ಶಿಕ್ಷಕ, ಇಬ್ಬರು ಪೋಷಕರು ಮತ್ತು ಮೂವರು ವಿದ್ಯಾರ್ಥಿಗಳು ಬಲಿಯಾಗಿರುವ ಘಟನೆ ಇಂದು ಬೆಳಿಗ್ಗೆ ಚೀನಾದ ಆಗ್ನೇಯ ಗುವಾಂಗ್‌ ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ.

Join Our Whatsapp Group

ಲಿಯಾಂಜಿಯಾಂಗ್ ಕೌಂಟಿಯ ಪೊಲೀಸರ ಹೇಳಿಕೆಯಂತೆ ಇದೊಂದು “ಉದ್ದೇಶಪೂರ್ವಕ ಹಲ್ಲೆ” ಎಂದು ಹೇಳಿದ್ದಾರೆ.

ದಾಳಿಯಲ್ಲಿ ಒಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ. ದಾಳಿಯು ಬೆಳಿಗ್ಗೆ 7:40 ಕ್ಕೆ ನಡೆದಿದ್ದು, ಇದಾದ ಕೆಲವೇ ನಿಮಿಷಗಳ ನಂತರ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.