ಮನೆ ಯೋಗಾಸನ ಕುಕ್ಕುಟಾಸನ

ಕುಕ್ಕುಟಾಸನ

0

ಪದ್ಮಾಸನದ ಒಂದು ಪ್ರಕಾರವೇ ಕುಕ್ಕುಟಾಸನ. ಇದು ಒಂದು ರೀತಿಯಲ್ಲಿ ವಿಶೇಷ ಅಭ್ಯಾಸದಿಂದಲೇ ಸಿದ್ದಿಸುವ ಆಸನ, ಏಕೆಂದರೆ, ಈ ಆಸನದಲ್ಲಿ  ಇಡೀ ಶರೀರದ ಭಾರವು ಕೇವಲ ಎರಡು ಹಸ್ತಗಳ ಮೇಲೆಯೇ ಬೀಳುವುದು. ಅದನ್ನು ಹೊರುವ ಶಕ್ತಿಯನ್ನು ಹಸ್ತಗಳು ಹೊಂದಿದಾಗ ಮಾತ್ರ ಈ ಆಸನ ಕರಗತವಾಗುವುದು.

Join Our Whatsapp Group

ಮಾಡುವ ಕ್ರಮ

ಯೋಗಾಭ್ಯಾಸಿಯು ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಬಲತೊಡೆ ಮತ್ತು ಬಲಗಾಲಿನ ಮೀನಖಂಡಗಳ ನಡುವೆ ಬಲಗೈಯನ್ನೂ, ಎಡತೊಡೆ ಮತ್ತು ಎಡಗಾಲಿನ ಮಿನಖಂಡಗಳ ನಡುವೆ ಎಡಗೈಯನ್ನೂ ಕೂರಿಸಬೇಕು. ಅನಂತರ ಎರಡೂ ಅಂಗೈಗಳನ್ನು ಭದ್ರವಾಗಿ ನೆಲದಲ್ಲಿ ಊರಬೇಕು. ಇಡೀ ಶರೀರದ ಭಾರವನ್ನು ಕೈಗಳ ಮೇಲೆ ಹಾಕಿ, ನಿಧನವಾಗಿ ಶರೀರವನ್ನು ಮೇಲಕ್ಕೆತ್ತುವುದು. ಈ ಸ್ಥಿತಿಯಲ್ಲಿ ಕೈಗಳು ಸ್ಥಿರವಾಗಿರಬೇಕು. ಕೆಲವರಿಗೆ ಪ್ರಾರಂಭದಲ್ಲಿ ನಡುಕವುಂಟಾಗುವುದು. ಆದರೂ ಕ್ರಮೇಣ ಅದು ಕಮ್ಮಿಯಾಗಿ ಸ್ಥಿರತೆ ಬರುವದು. ಈ ಸ್ಥಿತಿಯಲ್ಲಿ ಎರಡು ಅಂಗೈಗಳು 3-4 ಅಂಗುಲ ಅಂತರದಲ್ಲಿರಬಹುದು ಅಲ್ಲದೆ ಕೈಗಳ ಬೆರಳುಗಳು ಪರಸ್ಪರ ಸ್ಪರ್ಶಿಸಿರಲೂಬಹುದು. ಕೈಗಳ ಮೇಲೆ ಇಡೀ ಶರೀರದ ಭಾರ ಹಾಕಿ ಶರೀರದ ನೆಲದಿಂದ ಮೇಲಕ್ಕೆತ್ತಿ, ಅದೇ ಸ್ಥಿತಿಯಲ್ಲಿ ದೀರ್ಘ ಉಸಿರಾಡುವುದು ಉತ್ತಮ.  ಸಾಮಾನ್ಯವಾಗಿ ಶರೀ

ರವನ್ನು ಮೇಲಕ್ಕೆತ್ತಿರುವಾಗ ಉಸಿರು ಕಟ್ಟುವುದು ಸ್ವಾಭಾವಿಕ. ಒಂದರಿಂದ ಎರಡು ನಿಮಿಷಗಳವರೆಗೆ ‘ಕುಕ್ಕುಟಾಸನ’ದ ಸ್ಥಿತಿಯಲ್ಲಿದ್ದು ಅನಂತರ ನಿಧನವಾಗಿ ಕೆಳಗೆ ಬಂದು ಕಾಲುಗಳನ್ನು ಬದಲಾಯಿಸುವುದು ಉತ್ತಮ. ಮೂರು- ನಾಲ್ಕು ಬಾರಿ ಮಾಡುವುದು ಹೆಚ್ಚು ಫಲಕಾರಿ.

ಲಾಭಗಳು

ಈ ಆಸನದ ಅಭ್ಯಾಸದಿಂದ ಕೈಗಳ ಮಣಿಕಟ್ಟುಗಳು ಸಾಕಷ್ಟು ಬಲಶಾಲಿಯಾಗುವುದಲ್ಲದೆ ಭುಜಗಳೂ ಶಕ್ತಿ ಪಡೆಯುವವು.