ಮೈಸೂರು: ಕೊಳ್ಳೇಗಾಲ ಸಮೀಪ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಆವರಣದ ಬಳಿ ಇತ್ತೀಚೆಗೆ ಚಿರತೆಗಳು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಭಯ ಆವರಿಸಿದೆ.
ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿರುವ ಗುಂಡಾಲ್ ಅರಣ್ಯ ವ್ಯಾಪ್ತಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣವಾಗಿದ್ದು, ಇತ್ತೀಚಿಗೆ ಶಾಲೆಯ ಸಮೀಪವೇ ಚಿರತೆ ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ.
ಕಂಪನ ಪಾಳ್ಯ, ರಕ್ಷಾ ಪಾಳ್ಯ, ಕರಾಳ ಕಟ್ಟೆ, ಜಾಕಹಳ್ಳಿ, ಕುರುಬನ ಕಟ್ಟೆ, ಅರೆಪಾಳ್ಯ ಮತ್ತಿತರ ಕಡೆಗಳಲ್ಲಿ ಚಿರತೆ ಕಾಣಿಸಿಕೊಂಡಿರುವ ವರದಿಗಳು ಬಂದಿದ್ದು, ಹೊಲಕ್ಕೆ ಕೆಲಸಕ್ಕೆ ಹೋಗುವ ರೈತ ಸಮುದಾಯ ಹಾಗೂ ಮಹಿಳೆಯರು ಆತಂಕಕ್ಕೀಡಾಗಿದ್ದಾರೆ.
ವಿದ್ಯಾರ್ಥಿನಿಲಯದಲ್ಲಿ ಸುಮಾರು 450 ವಿದ್ಯಾರ್ಥಿಗಳಿದ್ದು, ಭಯಭೀತರಾಗಿದ್ದಾರೆ.
ಆನೆ, ಚಿರತೆ, ಕಾಡು ಹಂದಿ, ಕಾಡೆಮ್ಮೆಯಂತಹ ಕಾಡು ಪ್ರಾಣಿಗಳು ಶಾಲಾ ಆವರಣಕ್ಕೆ ಬರದಂತೆ ಸೋಲಾರ್ ಬೇಲಿಯೊಂದಿಗೆ ಕಾಂಪೌಂಡ್ ಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಅರಣ್ಯ ಇಲಾಖೆಯು 40 ಸದಸ್ಯರ ಚಿರತೆ ಕಾರ್ಯಪಡೆಯನ್ನು ಸಹ ರಚಿಸಿದ್ದು, ಗಸ್ತು ತಿರುಗುತ್ತಿದೆ.
ಚಿರತೆಗಳನ್ನು ಹಿಡಿಯಲು ಇಲಾಖಾ ಸಿಬ್ಬಂದಿ ಮುಂದಾಗಿದ್ದು, ಬೋನುಗಳನ್ನು ಇಡಲಾಗಿದೆ ಆ ಚಿರತೆಗಳು ಗುಂಡಾಲ್ ಅರಣ್ಯ ಪ್ರದೇಶದವು ಎಂದು ಎಂದು ಆರ್‌ಎಫ್‌ಒ ಶರತ್ ತಿಳಿಸಿದ್ದಾರೆ.