ಮನೆ ಅಪರಾಧ ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ: 2 ಲಕ್ಷ ಮೌಲ್ಯದ ಮಾದಕ ವಸ್ತು ವಶ

ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ: 2 ಲಕ್ಷ ಮೌಲ್ಯದ ಮಾದಕ ವಸ್ತು ವಶ

0

ಮೈಸೂರು: ರಾಜಸ್ಥಾನದ ಮೂಲದ ವ್ಯಕ್ತಿಯನ್ನು ಬಂಧಿಸಿರುವ ಸೆನ್ ಠಾಣೆ ಪೊಲೀಸರು 2 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.        

Join Our Whatsapp Group

ಜೂನ್ 7 ರಂದು ಮಧ್ಯಾಹ್ನ 1 ಗಂಟೆಯಲ್ಲಿ ನಜರ್ ಬಾದ್ ಸರ್ಕಾರಿ ಅತಿಥಿ ಗ್ರಹದ ರಸ್ತೆಯಲ್ಲಿ ದೇವರಾಜ ಉಪ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಸಿಇಎಸ್ ಠಾಣೆ ಅಧಿಕಾರಿಗಳಾಗಿದ್ದ ವಾಹನ ಕಂಡು ಓಡಿ ಹೋಗಲು ಯತ್ನಿಸಿದಾಗ ಬೆನ್ನತ್ತಿ ಆತನನ್ನು ಹಿಡಿದಿದ್ದರು.        

ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ರಾಜಸ್ಥಾನದ ಮೂಲದ ಆ ವ್ಯಕ್ತಿ ಬಳಿ 2 ಲಕ್ಷ ರೂ. ಮೌಲ್ಯದ ಒಂದು ಗ್ರಾಂ 28 ಮಿಲಿ ಎಂ.ಡಿ.ಎಂ.ಎ ಮಾದಕ ವಸ್ತು ಹಾಗೂ 85 ಗ್ರಾಂ 28 ಮಿಲಿ ಆಫೀಮು ಇರುವುದು ಪತ್ತೆಯಾಯಿತು. ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿ ಪೊಲೀಸರು ಮಾದಕ ವಸ್ತುಗಳನ್ನು ವಶಪಡಿಸಿಕೊಂಡರು.                  

ಡಿ.ಸಿ.ಪಿ. ಎಂ.ಮುತ್ತುರಾಜ್ ಮಾರ್ಗದರ್ಶನದಂತೆ ಎ.ಸಿ.ಪಿ. ಶಾಂತ ಮಲ್ಲಪ್ಪ ನೇತೃತ್ವದಲ್ಲಿ ಸಿ.ಇ.ಎನ್ ಠಾಣೆ ಇನ್ಸ್ಪೆಕ್ಟರ್ ಎನ್. ಜಯಕುಮಾರ್ ಸಬ್ ಇನ್ಸ್ಪೆಕ್ಟರ್ಗಳಾದ ಎನ್. ಅನಿಲ್ ಕುಮಾರ್ ಸಿದ್ದೇಶ್ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.