ಮನೆ ಯೋಗಾಸನ ಪೂರ್ಣಮತ್ಸ್ಯೇಂದ್ರಾಸನ

ಪೂರ್ಣಮತ್ಸ್ಯೇಂದ್ರಾಸನ

0

ಅರ್ಧಮತ್ಸೇಂದ್ರಾಸನದ ವಿಪರೀತ ಭಂಗಿಯನ್ನು ಪೂರ್ಣಮತ್ಸೇಂದ್ರಾಸನವೆಂದೂ, ಪರಿಪೂರ್ಣ ಮತ್ಸೇಂದ್ರಾಸನವೆಂದೂ ಕರೆಯುವರು.

Join Our Whatsapp Group

ಮಾಡುವಕ್ರಮ:

1)    ಯೋಗಾಭ್ಯಾಸಿಯೂ ಮೊದಲು ನೆಲದ ಮೇಲೆ ಕುಳಿತು ತನ್ನೆರಡು ಕಾಲುಗಳನ್ನು ಮುಂದಕ್ಕೆ ಚಾಚಾಬೇಕು.

2)   ಅನಂತರ ಎಡಗಾಲನ್ನು ಬಲತೊಡೆಯ ಮೇಲೆ ಇಡಬೇಕು.

3)    ಅರ್ಧಮತ್ಸ್ಯೇಂದ್ರಾಸನದ ರೀತಿಯಲ್ಲಿ ಚಿತ್ರದಲ್ಲಿರುವಂತೆ ಬಲಗಾಲನ್ನು ಎಡಗಾಲಿನ ಮಂಡಿಯ ಬಳಿ ಶರೀರದ ಹೊರಗೆ ಇಡಬೇಕು.

4)   ಅನಂತರ ಸೊಂಟದ ಮೇಲ್ಭಾಗದ ಶರೀರವನ್ನು ಬಲಗಡೆಗೆ ತಿರುಗಿಸುತ್ತಾ, ಎಡಗೈಯಿಂದ ಬಲಮಂಡಿಯನ್ನು ಬಳಸಿ, ಹಾಗೆಯೇ ಬಲಪಾದ ಅಥವಾ ಬಲಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು.

5)   ಬಲಗೈಯನ್ನು ಬೆನ್ನಿನ ಮೇಲೆ ಇಡುವುದರೊಂದಿಗೆ ಎಡತೊಡೆಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಬೇಕು. ಕೇವಲ ಎಡಗಾಲನ್ನು ಬಲತೊಡೆ ಮೇಲೆ ಇಡುವ ವ್ಯತ್ಯಾಸವೊಂದನ್ನು ಬಿಟ್ಟರೆ, ಉಳಿದೆಲ್ಲವೂ ಅರ್ಧಮತ್ಸ್ಯೇಂದ್ರಾಸನದಂತೆಯೇ. ಪೂರ್ಣಮತ್ಸ್ಯೇಂದ್ರಾಸನದಲ್ಲಿ ಎಡಗಾಲಿನ ಪಾದವು ನಾಭಿಯನ್ನು ಒತ್ತುತ್ತಿರುತ್ತದೆ.  ಈ ಆಸನಕ್ಕೆ ಮುನ್ನ ಅರ್ಧಮತ್ಸ್ಯೇಂದ್ರಾಸನವನ್ನು ಮಾಡುವುದು ಒಳ್ಳೆಯದು.

ಲಾಭಗಳು

ಅರ್ಧಮತ್ಸ್ಯೇಂದ್ರಾಸನದ ಎಲ್ಲ ಲಾಭಗಳನ್ನು ಈ ಆಸನದ ಅಭ್ಯಾಸದಿಂದಲೂ ಪಡೆಯಬಹುದು. ವಿಶೇಷವಾಗಿ ಈ ಆಸನದ ಅಭ್ಯಾಸವು ಜೀವಾಣುವಿಷ (ಟಾಕ್ಸಿನ್)ಗಳ ಉತ್ಪತ್ತಿಯನ್ನು ತಡೆಯುವುದಲ್ಲದೆ, ಬೆನ್ನೆಲುಬು ಹೆಚ್ಚು ರಕ್ತವು ಒದಗುವುದರಿಂದ, ಬೆನ್ನೆಲುಬು ವಿಶೇಷ ಶಕ್ತಿಯನ್ನು ಪಡೆಯುತ್ತದೆ.