ಮೈಸೂರು: ಇತ್ತೀಚಿಗೆ ಖಾಸಗಿ ಹೋಟೆಲ್ ನಡೆದ ಸಮಾರಂಭದಲ್ಲಿ ಜಗದೀಶ್ ಸಿ ರವರಿಗೆ ರೋಟರಿ ಹೆರಿಟೇಜ್ ಮೈಸೂರು-2023-24ರ ಅಧ್ಯಕ್ಷರ ಪದವಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್ ಸಿ ಅವರು, ರೋಟರಿ ಬಂಧುಗಳು ನನ್ನನ್ನು 2023-24 ನೇ ಸಾಲಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ನನಗೆ ಹೆಚ್ಚಿನ ಜವಾಬ್ದಾರಿಯ ಹೊರೆಯನ್ನು ಹೊರೆಸಿರುತ್ತೀರಿ. ನಮ್ಮ ಕ್ಲಬ್ 8 ವರ್ಷಗಳನ್ನು ಪೂರೈಸಿರುತ್ತದೆ. ಈ ಹಿಂದನ ವರ್ಷಗಳಲ್ಲಿ ನಡೆದ ಕಾರ್ಯಕ್ರಮಗಳಂತೆ ಈ ವರ್ಷವೂ ಎಲ್ಲಾ ಕಾರ್ಯಕ್ರಮಗಳನ್ನು ಅದೇ ಉತ್ಸಾಹದಲ್ಲಿ ಕ್ರಿಯಾಶೀಲವಾಗಿ ನಡೆಸಬೇಕೆಂದು ಆಸೆಯದೆ. ಇದಕ್ಕೆ ತಮ್ಮೆಲ್ಲರ ಸಹಕಾರವನ್ನು ಈ ಮೂಲಕ ಕೋರುತ್ತಿದ್ದೇನೆ ಎಂದು ತಿಳಿಸಿದರು.
ರೋಟರಿ: ಈ ವರ್ಷದ ಸಂದೇಶವಾದ ವಿಶ್ವದಲ್ಲಿ ಭರವಸೆಯನ್ನು ಮೂಡಿಸುವುದು ಎಂಬ ಮಾತಿನಂತೆ ನಾನು ತಮ್ಮೆಲ್ಲರೊಡನೆ ಜೊತೆಗೂಡಿ ರೋಟರಿ ಹೇರಿಟೇಜ್ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಲು ಪ್ರಯತ್ನಿಸುತ್ತೇನೆಂದು ತಮ್ಮಲ್ಲಿ ಭರವಸೆಯನ್ನು ನೀಡುತ್ತೇನೆ ಎಂದರು.
ಈ ವರ್ಷದ ಜಿಲ್ಲಾ ಯೋಜನೆಗಳಾದ ಹೊನ್ನಸಿರಿ, ವಿದ್ಯಾಸಿರಿ, ಜಲಸಿರಿ ಮತ್ತು ಅಂಗನವಾಡಿಗಳ ಅಭಿವೃದ್ಧಿಯ ಬಗ್ಗೆ ನಮಗೆ ನೀಡಿರುವ ಸಂದೇಶದಂತೆ ಅಂಗನವಾಡಿಗಳನ್ನು ನವೀಕರಿಸಿ ಗವರ್ನರ್ ರವರ ಕೈಜೋಡಿಸಲು ನಿಮ್ಮೆಲ್ಲರ ಸಹಕಾರ ಅಗತ್ಯ ಮತ್ತೆ ಸ್ವಚ್ಛತೆ ಆರೋಗ್ಯ ಶಿಬಿರಗಳು, ರೋಟರಿ ಸದಸ್ಯರುಗಳ ಜೊತೆ ಒಡನಾಟ ಇವುಗಳನ್ನು ನಡೆಸಬೇಕೆಂದು ನನಗೆ ತುಂಬಾ ಇಚ್ಚೆ ಇದೆ, ಆದರಂತೆ ನಡೆಸಲು ತಮ್ಮೆಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ನಮ್ಮ ರೋಟರಿಯ ಮುಖ್ಯ ಪ್ರಾಜೆಕ್ಟ್ ಆದ ಗೋದಾನಕ್ಕೆ ಸಂಬಂಧಿಸಿದಂತೆ 2 ಹಸು ಮತ್ತು ಕರುಗಳನ್ನು ದಾನ ಮಾಡವುದು ಹಾಗೂ ಅನುದಾನಿತ ಸಂಸ್ಥೆಯಾದ ಕುವೆಂಪು ಪ್ರೌಢಾಶಾಲೆ ಸರಸ್ವತಿಪುರಂ, ಮೈಸೂರು. ಈ ಶಾಲೆಯ 1 ರಿಂದ 10ನೇ ತರಗತಿಯವರೆಗೆ ವ್ಯಾಸಾಂಗ ಮಾಡುವ ಮಕ್ಕಳೆಲ್ಲರಿಗೂ ಶೂ ಮತ್ತು ಸಾಕ್ಸ್ ಗಳನ್ನು ಉಚಿತವಾಗಿ ನೀಡಬೇಕೆಂದು ಇಚ್ಚಿಸುತ್ತೇನೆ. ಹಿಂದಿನಿಂದಲೂ ನಡೆದು ಬಂದಿರುವ ಇತರೆ ಕಾರ್ಯಕ್ರಮಗಳನ್ನು ಮುಂದುವರೆಸಲು ಸಹಕಾರಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೋಟರಿಯ ಸೇವಾ ತಂಡ ರೋ.ಸುರೇಂದ್ರ ಜೆಡ್.ಎಲ್, ಸಹಾಯಕ ಗೌವರ್ನರ್ ನಂಜಯ್ಯ ಎಂ.ಕೆ, ಅಧಿಕಾರಿ ಪ್ರಕಾಶ್ ಬಿ.ಎಂ, ಪಿ.ಡಿ.ಜಿ.ರೋ.ರವೀಂದ್ರ ಭಟ್, ಕಾರ್ಯದರ್ಶಿ ರೋ.ಗೋಪಾಲಕೃಷ್ಣ, ರೋ.ಸುರೇಶ್ ಬಿ.ಎಂ, ರೋ. ಪ್ರಭಾಕರ್, ರೋ.ರಾಜೇಶ್ ಆರ್, ಉಪಾಧ್ಯಕ್ಷ ರೋ.ರಾಘವೇಂದ್ರ, ರೋ.ಡಾ.ಶಿವರುದ್ರಪ್ಪ ಭಾಗವಹಿಸಿದ್ದರು.
ಸಂಸ್ಥಾಪಕ ಅಧ್ಯಕ್ಷರಾದ ಕೆ ಮಂಜುನಾಥ್, ಜಾಯಿಂಟ್ ಸೆಕ್ರೆಟರಿ ಗಿರೀಶ್, ಎಲ್ಲಾ ಗೌರವಾನ್ವಿತ ನಿರ್ದೇಶಕರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಗೋದಾನ ಕಾರ್ಯಕ್ರಮ
ಈ ಸಂದರ್ಭದಲ್ಲಿ ಮೂರು ಹಸು ಮತ್ತು ಕರುಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ
ಗೋದಾನ ಕಾರ್ಯಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ಜಗದೀಶ್, ಕಾರ್ಯದರ್ಶಿ ಗೋಪಾಲಕೃಷ್ಣ, ಪ್ರಕಾಶ್ ಬಿಎಮ್, ಹಿರಿಯ ಪರಿಸರ ಅಧಿಕಾರಿ ಪಿಡಿಜಿ, ರವೀಂದ್ರ ಭಟ್, ಸಂಸ್ಥಾಪಕ ಅಧ್ಯಕ್ಷ ಕೆ ಮಂಜುನಾಥ್, ಜೆಡ್.ಎಲ್. ಸುರೇಂದ್ರ , ಅಧ್ಯಕ್ಷರಾದ ರಾಜೇಶ್ ಹಾಗೂ ಸುರೇಶ್ ಪಾಲ್ಗೊಂಡಿದ್ದರು