ಸುಳ್ಯ: ಎರಡು ಅಂಗಡಿಗಳ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಡ್ರಾಯರ್ ನಲ್ಲಿ ಇರಿಸಲಾಗಿದ್ದ ನಗದು ದೋಚಿ ಪರಾರಿಯಾದ ಘಟನೆ ಆಲೆಟ್ಟಿ ಗ್ರಾಮದಲ್ಲಿ ನಡೆದಿದೆ.
ಆಲೆಟ್ಟಿ ಗ್ರಾಮದ ನಾಗಪಟ್ಟಣ ಬಸ್ ನಿಲ್ದಾಣ ಬಳಿ ಪಂಚಾಯತ್ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಪುಷ್ಪರಾಜ್ ಎಂಬವರ ಅಂಗಡಿಯ ಡ್ರಾಯರ್ ನಿಂದ 500 ರೂ.ಹಾಗೂ ಫ್ರಿಡ್ಜ್ ನಲ್ಲಿ ಇರಿಸಲಾದ ಜ್ಯೂಸ್ ಕುಡಿದಿದ್ದಾರೆ.
ಮಿತ್ತಡ್ಕ ರೋಟರಿ ಶಾಲಾ ಮುಂಭಾಗದಲ್ಲಿರುವ ಬಸ್ ನಿಲ್ದಾಣದ ಪಂಚಾಯತ್ ಕಟ್ಟಡದಲ್ಲಿರುವ ದಾಮೋದರ ಎಂಬುವವರ ಅಂಗಡಿಯಿಂದ 10,000 ರೂ.ಕಳ್ಳತನವಾಗಿರುವುದು ವರದಿಯಾಗಿದೆ.














