ಮನೆ ಯೋಗಾಸನ ಕರ್ಣಪೀಡಾಸನ

ಕರ್ಣಪೀಡಾಸನ

0

ಹಲಾಸನದ ವ್ಯತ್ಯಸ್ತ ಭಂಗಿಯೇ ಕರ್ಣಪೀಡಾಸನ. ‘ಕರ್ಣ’ ಎಂದರೆ ಕಿವಿ, ‘ಪೀಡಾ’ ಎಂದರೆ ಬಾಧೆ. ವಿಶೇಷವಾಗಿ ಕಿವುಡು ಹಾಗೂ ಕಿವಿಯ ಅನೇಕ ವಿಕಾರಗಳು ಈ ಆಸನದ ಅಭ್ಯಾಸದಿಂದ ದೂರವಾಗುವುದರಿಂದ ಕರ್ಣಪೀಡಾಸನವೆಂಬ  ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ.

Join Our Whatsapp Group

ಮಾಡುವಕ್ರಮ

1)    ಅಂಗತನಾಗಿ, ನೇರವಾಗಿ ನೆಲದ ಮೇಲೆ ಮೊದಲು ಮಲಗಬೇಕು.

2)   ಅನಂತರ ನಿಧಾನವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕಾಲುಗಳನ್ನು ಉತ್ಥಿತ ಪಾದಾಸನದಲ್ಲಿ ವಿವರಿಸಿದಂತೆ ಮೇಲಕ್ಕೆತ್ತಬೇಕು.

3)    ಎರಡೂ ಕೈಗಳಿಂದ ಬೆನ್ನಿಗೆ ಭದ್ರವಾದ ಆಸರೆ  ನೀಡಿ ಸರ್ವಾಂಗಾಸನದಂತೆ ಕಾಲುಗಳನ್ನು ಮತ್ತಷ್ಟು ಮೇಲಕ್ಕೆತ್ತಿ ಭೂಮಿಗೆ ಲಂಬವಾಗಿರಬೇಕು.

4)   ಸರ್ವಾಂಗಾಸನದ ಭಂಗಿಯಲ್ಲಿ ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಾ, ಎರಡೂ ಕಾಲುಗಳನ್ನು (ಹಲಾಸನದಂತೆ) ನೆಲಕ್ಕೆ ಮುಟ್ಟಿಸಬೇಕು.

5)   ಹಲಾಸನದ ಸ್ಥಿತಿಯಲ್ಲಿ ಒಮ್ಮೆ ಸಮತೋಲನ ಪಡೆದ ನಂತರ, ಮಂಡಿಯ ಬಳಿ ಕಾಲನ್ನು ಬಗ್ಗಿಸಿ ಶರೀರದ ಹತ್ತಿರಕ್ಕೆ (ಚಿತ್ರದಲ್ಲಿರುವಂತೆ) ತರಬೇಕು. ಆಗ ಎರಡೂ ಕಿವಿಗಳ ಪಕ್ಕದಲ್ಲಿ ಮಂಡಿಗಳು ಇರುತ್ತವೆ ಮತ್ತು ಅವು ನೆಲವನ್ನು ಮುಟ್ಟಿಯೂ ಇರಬೇಕು. ಕೈಗಳನ್ನು ಹಿಂದಕ್ಕೆ ಚಾಚುತ್ತ ಆಸನದ ಸ್ಥಿತಿಯಲ್ಲಿ ಸಮತೋಲನವನ್ನು ಪಡೆಯಬಹುದು.

ಕರ್ಣಪೀಡಾಸನದಲ್ಲಿ ಒಮ್ಮೆ ಸಮತೋಲನ ಪಡೆದ ನಂತರ  ಎರಡೂ ಕೈಗಳಿಂದ ಬೆನ್ನು ಹಾಗೂ ಕಾಲುಗಳನ್ನು ಸುತ್ತಿಸಬೇಕು. ಇದನ್ನು ‘ರುಂಡಾಸನ’ವೆನ್ನುತ್ತಾರೆ.

ಲಾಭಗಳು

ಮೇಲೆ ಹೇಳಿದ ಲಾಭಗಳು ಜೊತೆಗೆ ಕರ್ಣಪೀಡಾಸನವು ಕಾಲು, ಎದೆ ಹಾಗೂ ಬೆನ್ನಿಗೆ ವಿಶೇಷ ವ್ಯಾಯಾಮವನ್ನು ನೀಡುತ್ತದೆ. ಬೆನ್ನೆಲುಬು ಚೆನ್ನಾಗಿ ಹಿಗ್ಗುತ್ತದೆ. ಇಡೀ ಶರೀರದಲ್ಲಿ ಮತ್ತು ಮುಖ್ಯವಾಗಿ ಸೊಂಟದ ಬಳಿ ರಕ್ತ ಸಂಚಲನೆಯ ವೇಗವು ಹೆಚ್ಚುತ್ತದೆ . ಮಧುಮೇಹ, ವೀರ್ಯದೋಷಗಳು  ಮತ್ತು ಮೂತ್ರ ವಿಕಾರಗಳೂ ದೂರವಾಗುವುವು.