ಮನೆ ರಾಷ್ಟ್ರೀಯ ಲೋಕಲ್ ರೈಲಿನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು

ಲೋಕಲ್ ರೈಲಿನಲ್ಲಿ ಚಪ್ಪಲಿಯಿಂದ ಹೊಡೆದಾಡಿಕೊಂಡ ಮಹಿಳೆಯರು

0

ಕೊಲ್ಕತ್ತಾ: ಲೋಕಲ್ ರೈಲಿನಲ್ಲಿ ಮಹಿಳೆಯರು ಪರಸ್ಪರ ಚಪ್ಪಲಿಗಳಿಂದ ಬಡಿದಾಡಿಕೊಂಡ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.                   

Join Our Whatsapp Group

ಜಗಳಕ್ಕೆ ಕಾರಣ ಏನೆಂದು ಗೊತ್ತಿಲ್ಲವಾದರೂ ಈ ಮಹಿಳೆಯರು ಜೋರಾಗಿ ಚಪ್ಪಲಿಯಿಂದ ಜಗಳವಾಡುತ್ತಿದ್ದಾರೆ.

ರೈಲಿನಲ್ಲಿದ್ದ ಕೆಲವರು ತಡೆಯಲು ಯತ್ನಿಸಿದರೂ  ಪ್ರಯೋಜನವಾಗಲಿಲ್ಲ. ವಿಡಿಯೋದ ಕೊನೆಯಲ್ಲಿ, ಹೋರಾಟದಲ್ಲಿ ತೊಡಗಿರುವ ಮಹಿಳೆಯೊಬ್ಬರು ತನ್ನ ಪಕ್ಕದಲ್ಲಿ ನಿಂತಿರುವ ಹುಡುಗನ ಮೇಲೆ ವಸ್ತುವನ್ನು ಎಸೆಯುವುದನ್ನು ಕಾಣಬಹುದಾಗಿದೆ.  

ಈ ವೀಡಿಯೋವನ್ನು ಅಯುಷಿ ಎಂಬುವವರು, ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಕೊಲ್ಕತ್ತಾ ಲೋಕಲ್ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ .