ಮನೆ ರಾಜ್ಯ ಬಾವಿಗೆ ಹಾರಿ ತಮ್ಮನ ಪ್ರಾಣ ರಕ್ಷಿಸಿದ 8 ವರ್ಷದ ಅಕ್ಕ

ಬಾವಿಗೆ ಹಾರಿ ತಮ್ಮನ ಪ್ರಾಣ ರಕ್ಷಿಸಿದ 8 ವರ್ಷದ ಅಕ್ಕ

0

ತುಮಕೂರು: ತುಮಕೂರು  ತಾಲೂಕಿನ ಕುಚ್ಚೆಂಗಿಯಲ್ಲಿ ಸಹೋದರನ ಜೀವ ಉಳಿಸಲು ಎಂಟು ವರ್ಷದ ಬಾಲಕಿ ಒಬ್ಬಳು ತನ್ನ ಪ್ರಾಣವನ್ನು ಲೆಕ್ಕಿಸದೆ ಬಾವಿಗೆ ಹಾರಿ ದಿಟ್ಟತನವನ್ನು ಪ್ರದರ್ಶಿದ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.         

Join Our Whatsapp Group

ಶಾಲು ಎಂಬ ಬಾಲಕಿ ತನ್ನ ಏಳು ವರ್ಷದ ಸಹೋದರ ಹಿಮಾಂಶೂನನ್ನು ರಕ್ಷಿಸಿದ್ದಾಳೆ.           

ಕುಚ್ಚಂಗಿಯ ತೋಟದ ಮನೆಯಲ್ಲಿ ಉತ್ತರ ಪ್ರದೇಶ ಮೂಲದ ಜಿತೇಂದ್ರ- ರಾಜಕುಮಾರ ದಂಪತಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಶಾಲು (8), ಹಿಮಾಂಶೂ (7),ರಾಶಿ (3) ಹಾಗೂ ಕಪಿಲ್ (2) ಎಂಬ ನಾಲ್ವರು ಮಕ್ಕಳಿದ್ದಾರೆ.     

ಹಿಮಾಂಶೂ ಹಾಗೂ ರಾಶಿ ತೋಟದಲ್ಲಿ ಚಂಡಿನೊಂದಿಗೆ ಆಟವಾಡುತ್ತಿದ್ದರು. ಈ ವೇಳೆಗೆ ಬಾವಿಗೆ ಬಿದ್ದಿದ್ದ ಚಂಡನ್ನು ಬಿದ್ದಿದ್ದು, ಅದನ್ನು ತೆಗೆಯಲು ಹೋಗಿ ಹಿಮಾಂಶೂ ಬಾವಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ.            

ಇದನ್ನು ಕಂಡ ಶಾಲೂ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ಬಾವಿಗೆ ಹಾರಿದ್ದಾಳೆ. ಇದೆ ವೇಳೆ ಅಕ್ಕ ಪಕ್ಕದ ಜನರು ಸಹ ಶಾಲೂ ಸಹಾಯಕ್ಕೆ ಬಂದಿದ್ದಾ.ರೆ ಬಳಿಕ ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎತ್ತುವ ಮೂಲಕ ರಕ್ಷಣೆ ಮಾಡಿದರು.                

ಕಳೆದ ಮೂರು ನಾಲ್ಕು ತಿಂಗಳಿಂದ ಶಾಲೂ ಲೈಫ್ ಜಾಕೆಟ್ ಧರಿಸಿ ಬಾಡಿಗೆ ಮನೆ ಮಾಲೀಕ ಧನಂಜಯ್ ಎಂಬುವವರ ಬಳಿ ಈಜು ಕಲಿಯುತ್ತಿದ್ದಳು. ಇದೇ  ನೆರವಿನಿಂದ ಬಾವಿಗೆ ಹಾರಿ ತಮ್ಮನ ಪ್ರಾಣವನ್ನು ಶಾಲೂ ರಕ್ಷಣೆ ಮಾಡಿದ್ದಾಳೆ. ಇದೀಗ ಗ್ರಾಮಸ್ಥರು ಶಾಲೂ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.