ಮನೆ ರಾಜ್ಯ ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿದ್ದ 42 ಆ್ಯಪ್ ಗಳು ಬ್ಯಾನ್

ಸಾಲ ನೀಡಿ ಜನರಿಗೆ ಕಿರುಕುಳ ನೀಡುತ್ತಿದ್ದ 42 ಆ್ಯಪ್ ಗಳು ಬ್ಯಾನ್

0

ಬೆಂಗಳೂರು: ಯಾವುದೇ ದಾಖಲೆಗಳಿಲ್ಲದೆ ಸಣ್ಣ ಮೊತ್ತದ ಸಾಲ ನೀಡಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಮೊಬೈಲ್ ಅಪ್ಲಿಕೇಶನ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

Join Our Whatsapp Group

ಇಂತಹ ಆರೋಪಕ್ಕೆ ಸಂಬಂಧಿಸಿದ 42 ಮೊಬೈಲ್ ಆಪ್ ಗಳನ್ನು ರಾಜ್ಯ ಸರ್ಕಾರ ರದ್ದು ಪಡಿಸಿ google play store ನಿಂದ ತೆಗೆದು ಹಾಕಿದೆ.

ಈ ಕುರಿತು ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ಇಂತಹ ಮೊಬೈಲ್ ಆಪ್ ಗಳನ್ನು ತಡೆಹಿಡಿಯಲು ಸರ್ಕಾರ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಭರವಸೆ ನೀಡಿದರು.

ಇದೆ ವೇಳೆ ಗೇಮಿಂಗ್ ಆಪ್ ಬಗ್ಗೆಯೂ ಸೆಲೆಬ್ರೆಟಿಗಳು ಪ್ರಚಾರ ನೀಡುತ್ತಿರುವುದು ಕಳವಳಕಾರಿ. ಇದನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಈಗಾಗಲೇ ಯುವಜನರು ಸುಲಭವಾದ ಸಾಲಕ್ಕೆ ಮರುಳಾಗಿ ಆಪ್ ಗಳಿಂದ ಸಾಲ ಪಡೆಯುವ ಮೂಲಕ ಅದರ ವಿಷ ವರ್ತುಲಕ್ಕೆ ಸಿಲುಕಿ, ಬಳಿಕ ಅತಿಯಾದ ಬಡ್ಡಿ ಹಾಗೂ ಅಸಲು ಹಿಂತಿರುಗಿಸಲಾಗದ ಸಮಸ್ಯೆಗೆ ಸಿಕ್ಕಿಹಾಕಿ ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಇತ್ತೀಚಿಗಷ್ಟೇ ರಾಜ್ಯದ ಇದೇ ರೀತಿ ಸಾಲ ಪಡೆದು ಬಳಿಕ ಸಾಲ ತೀರಿಸಲಾಗದೆ ಆಪ್ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಇಂತಹ 800ಕ್ಕೂ ಅಧಿಕ ಆಪ್ ಗಳು ಚಾಲ್ತಿಯಲ್ಲಿದ್ದರೂ ಅದನ್ನು ನಿಯಂತ್ರಿಸಬೇಕಾಗಿರುವುದು ಕೇಂದ್ರ ಸರ್ಕಾರ ಈ ಹಿನ್ನಲೆ ಕೇಂದ್ರದ ಜೊತೆ ಮಾತುಕತೆ ನಡೆಸಲಾಗುವುದು ಎಂದು ಭರವಸೆ ನೀಡಿದರು.