ಮನೆ ಮನರಂಜನೆ “ಅಪರೂಪ’ ಚಿತ್ರ ವಿಮರ್ಶೆ

“ಅಪರೂಪ’ ಚಿತ್ರ ವಿಮರ್ಶೆ

0

ಪ್ರೀತಿಯ ನಡುವೆ ಅಹಂ ಬಂದಾಗ ಏನಾಗುತ್ತದೆ, ಕೋಪದ ಕೈಗೆ ಬುದ್ಧಿ ಕೊಟ್ಟಾಗ ಅದು ಜೀವನದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ, ಇದರಿಂದ ಯುವ ಜೋಡಿ ಏನೆಲ್ಲಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬ ಅಂಶದೊಂದಿಗೆ ಈ ವಾರ “ಅಪರೂಪ’ ಚಿತ್ರ ತೆರೆಗೆ ಬಂದಿದೆ.

Join Our Whatsapp Group

ಇದೊಂದು ಅಪ್ಪಟ ಲವ್‌ಸ್ಟೋರಿ. ನಿರ್ದೇಶಕ ಮಹೇಶ್‌ ಬಾಬು ನವಜೋಡಿಗಳನ್ನಿಟ್ಟುಕೊಂಡು ಒಂದು ಕ್ಯೂಟ್‌ ಲವ್‌ಸ್ಟೋರಿಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಇದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾವಾಗಿರುವುದರಿಂದ ನಾಯಕನ ಇಂಟ್ರೋಡಕ್ಷನ್‌, ಖಡಕ್‌ ಡೈಲಾಗ್‌, ರಗಡ್‌ ಫೈಟ್‌, ಕಲರ್‌ಫ‌ುಲ್‌ ಸಾಂಗ್‌… ಹೀಗೆ ಎಲ್ಲಾ ಅಂಶಗಳೊಂದಿಗೆ “ಅಪರೂಪ’ ಮೂಡಿಬಂದಿದೆ.

ಚಿತ್ರದ ಒನ್‌ ಲೈನ್‌ ಬಗ್ಗೆ ಹೇಳುವುದಾದರೆ ಜವಾಬ್ದಾರಿ ಇಲ್ಲದೇ ತಿರುಗಾಡಿ ಕೊಂಡಿರುವ ಹುಡುಗ ಒಂದು ಕಡೆಯಾದರೆ, ಶ್ರೀಮಂತ ಕುಟುಂಬ ಹುಡುಗಿ ಇನ್ನೊಂದು ಕಡೆ… ಇವರಿಬ್ಬರ ಮಧ್ಯೆ ಚಿಗುರುವ ಪ್ರೀತಿ ಮುಂದೆ ಹಲವು ಆಯಾಮಗಳಿಗೆ ದಾರಿ ಮಾಡಿಕೊಡುತ್ತದೆ. ಈ ಹಾದಿಯಲ್ಲಿ ಸಾಕಷ್ಟು ಟ್ವಿಸ್ಟ್‌ ಟರ್ನ್ಗಳು ಬಂದು ಹೋಗುತ್ತವೆ. ಅದೇನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು. ಲವ್‌ಸ್ಟೋರಿಯಾದರೂ ಇದೊಂದು ಪಕ್ಕಾ ಫ್ಯಾಮಿಲಿ ಡ್ರಾಮಾ. ಯಾವುದೇ ಅಶ್ಲೀಲ ಅಂಶಗಳಿಲ್ಲದಿರುವುರಿಂದ ಚಿತ್ರವನ್ನು ಕುಟುಂಬ ಸಮೇತ ಕುಳಿತು ನೋಡಬಹುದು.

 “ಅಪರೂಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಇಬ್ಬರು ನಾಯಕ-ನಾಯಕಿ ಪರಿಚಯವಾಗಿದ್ದಾರೆ. ಚಿತ್ರದಲ್ಲಿ ಸುಘೋಷ್‌ ನಾಯಕ. ನಟನೆಯಲ್ಲಿ ಇನ್ನೊಂದಿಷ್ಟು ಪಳಗಬೇಕಿದೆ ಎನ್ನುವುದು ಬಿಟ್ಟರೆ ಆ್ಯಕ್ಷನ್‌, ಡ್ಯಾನ್ಸ್‌ನಲ್ಲಿ ಮಿಂಚುವ ಸುಘೋಷ್‌ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ನಾಯಕಿ ಹೃತಿಕಾ ಸರಳ ಸುಂದರಿ. ನಟನೆ ಹಾಗೂ ಗ್ಲಾಮರ್‌ ಎರಡರಲ್ಲೂ ಹೃತಿಕಾ ಸ್ಕೋರ್‌ ಮಾಡುತ್ತಾರೆ. ಉಳಿದಂತೆ ಚಿತ್ರದಲ್ಲಿ ಅರುಣಾ ಬಾಲರಾಜ್‌, ಅವಿನಾಶ್‌, ಅಶೋಕ್‌, ಕುರಿಪ್ರತಾಪ್‌ ಸೇರಿದಂತೆ ಇತತರು ನಟಿಸಿದ್ದಾರೆ. ಚಿತ್ರದ ಹಾಡುಗಳು ಹಾಗೂ ಛಾಯಾಗ್ರಹಣ ಕಥೆಗೆ ಪೂರಕವಾಗಿದೆ.